Composer : Shri Pradyumna Tirtharu
ಮುರಳಿ ಧ್ವನಿಯ ಮಾಡೋ ಮುರಾರೇ ( ಪ)
ಮುರಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲ
ಹರುಷದಿಂದಲಿ ಭವ ಶರಧಿ ದಾಟುವರೈ (ಅ.ಪ)
ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟು
ಕಾಮಜನಕ ಗುಣಧಾಮ ಶ್ರೀ ಕೃಷ್ಣಾ (೧)
ಶ್ರೀ ವರ ನಿನ್ನಯ ಭ್ರೂ ವಿಲಾಸದಿಂದ
ಆವು ಮೆಚ್ಚುವಂತೆ ಸಾವಧಾನದಿಂದ (೨)
ಶ್ಯಾಮಸುಂದರ ಬಲು ಕೋಮಲ ಬೆರಳಲ್ಲಿ
ಪ್ರೇಮದಿಂದೊಪ್ಪುತ ಶ್ರೀ ಮನೋರಮನೆ (೩)
ಕೆಳ ಕೆಂದುಟಿಯಲ್ಲಿ ಕೊಳಲ ನಿಲ್ಲಿಸಿ ಬೇಗ
ನಳಿನ ಮುಖಿಯರನ್ನು ಒಲಿಸುತಲೊಮ್ಮೆ (೪)
ವನಜಸಂಭವಪಿತ ಶ್ರೀ ನರಹರಿಯೆ
ಕನಸಿನಂದದಿ ಜಗವರಿತು ನೆನೆಯುವಂತೆ (೫)
muraLi dhvaniya mADO murArE ( pa)
muraLi dhvaniya kELi parama Bakutarella
haruShadiMdali Bava Saradhi dATuvarai (a.pa)
vAma Bujadi divya vAma kapOliTTu
kAmajanaka guNadhAma SrI kRuShNA (1)
SrI vara ninnaya BrU vilAsadiMda
Avu meccuvaMte sAvadhAnadiMda (2)
SyAmasuMdara balu kOmala beraLalli
prEmadiMdopputa SrI manOramane (3)
keLa keMduTiyalli koLala nillisi bEga
naLina muKiyarannu olisutalomme (4)
vanajasaMBavapita SrI narahariye
kanasinaMdadi jagavaritu neneyuvaMte (5)
Leave a Reply