Composer : Shri Kanakadasaru
ಏನು ಕಾರಣ ಬಾಯ ತೆರೆದಿ ಪೇಳೆಲೊ ದೇವ
ದಾನವಾಂತಕ ಅಹೋಬಲ ನಾರಸಿಂಹ ||ಪ||
ನಿಗಮ ಚೋರಕನಾ ಕೊಲಲು ತೆರೆದೆಯೊ ಬಾಯ
ನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯ
ಭೂಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯ
ಜಗವರಿಯೆ ಪೇರುರವಿರಿದ, ಪ್ರಹ್ಲಾದವರದ
ನರಸಿಂಹ ನರಸಿಂಹ ||೧||
ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯ
ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯ
ಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯ
ಮಲೆತು ಮಾವನ ಕೊಂದು ನಿಂತೆ,
ಇಂಥಾ ಭೂಮಿಗಿಳಿದ
ನಾರಸಿಂಹ ನರಸಿಂಹ || ೨||
ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯ
ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯ
ಮಾರಪಿತ ಕಾಗಿನೆಲೆಯಾದಿ ಕೇಶವ ರಂಗ
ಧೀರ ಶ್ರೀನಾಥ ಭವನಾಶ ಪೇಳೋ
ನಾರಸಿಂಹ ನಾರಸಿಂಹ || ೩ ||
Enu kAraNa bAya teredi pELelo dEva
dAnavAMtaka ahObala nArasiMha ||pa||
nigama cOrakanA kolalu teredeyo bAya
nagava bennali pottu naDugi teredeyo bAya
bhUmigaLLana koMdu baLali teredeyo bAya
jagavariye pEruravirida, prahlAdavarada
narasiMha narasiMha ||1||
baliya dAnava bEDaleMdu teredeyo bAya
ChaladiMda kShatriyara kolalu teredeyo bAya
kulasatiya arasi kANade teredeyo bAya
maletu mAvana koMdu niMte,
iMthA bhUmigiLida
nArasiMha narasiMha || 2||
nAriyara celvikeya nODi teredeyo bAya
Eri ashvava meTTi aLali teredeyo bAya
mArapita kAgineleyAdi kESava raMga
dhIra shrInAtha bhavanAsha pELO
nArasiMha nArasiMha || 3 ||
Leave a Reply