Ele manave Hari

Composer : Shri Purandara dasaru

By Smt.Shubhalakshmi Rao

ಎಲೆ ಮನವೇ ಹರಿ ಧ್ಯಾನವ ಮಾಡು [ಪ]

ಎಲೆ ಜಿಹ್ವೆ ಕೇಳು ಕೇಶವನ ಗುಣಗಳ ನುತಿಸು |
ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು |
ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ |
ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ [೧]

ಎಲೆ ನೇತ್ರಗಳಿರ ಶ್ರೀ ಕೃಷ್ಣ ಮೂರ್ತಿಯ ನೋಡಿ |
ಎಲೆ ಪಾದಗಳಿರ ಹರಿಯಾತ್ರೆಯನೆ ಮಾಡಿ |
ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ |
ತುಳಸೀ ಪರಿಮಳವನಾಘ್ರಾಣಿಸುವುದ್ ಅನುದಿನವು [೨]

ಎಲೆ ಶಿರವೆ ನೀ ಕೇಳ್ ಅಧೋಕ್ಷಜನ ಸಿರಿ ಚರಣ |
ಜಲರುಹದೊಳಳಿಯಂತೆ ಬಿಡದೆ ಓಲ್ಯಾಡು |
ಎಲೆ ತನುವೆ ನೀನು ಪುರಂದರವಿಠಲನ |
ಸಲೆ ಭಕುತ ಜನರ ಸಂಗತಿಯಲಿ ಬಾಳು [೩]


ele manavE hari dhyAnava mADu [pa]

ele jihve kELu kESavana guNagaLa nutisu |
ele manave muravairiyaMGrigaLa Bajisu |
elele karagaLira SrIdharana sEveya mADi |
ele karNagaLira acyutana kathe kELi [1]

ele nEtragaLira SrI kRuShNa mUrtiya nODi |
ele pAdagaLira hariyAtreyane mADi |
ele nAsikave mukuMdana caraNakarpisida |
tuLasI parimaLavanAGrANisuvud anudinavu [2]

ele Sirave nI kEL adhOkShajana siri caraNa |
jalaruhadoLaLiyaMte biDade OlyADu |
ele tanuve nInu puraMdaraviThalana |
sale Bakuta janara saMgatiyali bALu [3]

Leave a Reply

Your email address will not be published. Required fields are marked *

You might also like

error: Content is protected !!