Composer : Shri Gurujagannatha dasaru
ಯಾಕೆ ನಿನ್ನ ಮನಕೆ ಬಾರೆನೋ ಹೇ ವೇಂಕಟೇಶ [ಪ]
ಯಾಕೆ ನಿನ್ನ ಮನಕೆ ಬಾರೆ ಸಾಕು ನಿನ್ನ ಧೊರಿಯತನಾ
ಕಾಕು ಬುದ್ಧಿ ಎನಗಿಲ್ಲೋ ಹೇ ವೆಂಕಟೇಶಾ [ಅ.ಪ]
ಪದದಿ ಭೃಗುಮುನಿ ನಿನ್ನ ಹೃದಯಕೊದ್ದ ತೆರದಿ ನಾನು
ಬೆದರಿ ನಿನ್ನ ನೊದೆಯಲಿಲ್ಲೊ ಹೇ ವೆಂಕಟೇಶಾ (೧)
ವನದಿ ಬಂದಾಗ ಬೊರೆಬನದಲ್ಲಿಯ ಬರಿಯಂಜಲು
ತಿನಿಸಿದ ತರ ನಾ ತಿನಿಸಲಿಲ್ಲವೋ ಹೇ ವೆಂಕಟೇಶಾ (೨)
ತೊಂಡಪಾರ್ಥ ರಣದಿ ತನ್ನ ಬಂಡಿ ಬೋವನ ಮಾಡಿದಂತೆ
ಭಂಡಿ ಹೊಡಿ ಎಂದು ನಡೆಸಲಿಲ್ಲವೋ ಹೇ ವೆಂಕಟೇಶಾ (೩)
ದಿಟ್ಟ ಗುರುವಿನ ಮನಿಗೆ ಕಟ್ಟಿಗಿ ಹೊರಿಸಿದಂತೆ
ಕಟ್ಟಿಗೆಯ ಹೊರಿಸಲಿಲ್ಲವೋ ಹೇ ವೆಂಕಟೇಶಾ (೪)
ಕೆಟ್ಟ ಕಾರ್ಯ ಮಾಡಿದವರು ಇಷ್ಟರೆ ಸರಿ ನಿನಗೆ ನಾನು
ಕೆಟ್ಟ ಕಾರ್ಯ ಮಾಡಲಿಲ್ಲವೊ ಹೇ ವೆಂಕಟೇಶಾ (೫)
ದುಷ್ಟನೆಂದು ಜನರು ನಿನ್ನ ಮುಟ್ಟಲಂಜೀ ದೂರಪೋಗೆ
ಮುಟ್ಟಿ ನಿನ್ನ ಭಜಿಸಿದ ಫಲವೇನೋ ಹೇ ವೆಂಕಟೇಶಾ (೬)
ದಾತ ಶ್ರೀ ಗುರುಜಗನ್ನಾಥ ವಿಠಲನೆಂದು ನಾ
ಪ್ರೀತಮನದಿ ಬಂದೆನೋ ಹೇ ವೆಂಕಟೇಶಾ (೭)
yAke ninna manake bArenO hE vEMkaTESa [pa]
yAke ninna manake bAre sAku ninna dhoriyatanA
kAku buddhi enagillO hE veMkaTESA [a.pa]
padadi BRugumuni ninna hRudayakodda teradi nAnu
bedari ninna nodeyalillo hE veMkaTESA (1)
vanadi baMdAga borebanadalliya bariyaMjalu
tinisida tara nA tinisalillavO hE veMkaTESA (2)
toMDapArtha raNadi tanna baMDi bOvana mADidaMte
BaMDi hoDi eMdu naDesalillavO hE veMkaTESA (3)
diTTa guruvina manige kaTTigi horisidaMte
kaTTigeya horisalillavO hE veMkaTESA (4)
keTTa kArya mADidavaru iShTare sari ninage nAnu
keTTa kArya mADalillavo hE veMkaTESA (5)
duShTaneMdu janaru ninna muTTalaMjI dUrapOge
muTTi ninna Bajisida PalavEnO hE veMkaTESA (6)
dAta SrI gurujagannAtha viThalaneMdu nA
prItamanadi baMdenO hE veMkaTESA (7)
Leave a Reply