Composer : Shri Tande Shripati vittala dasaru
ವೆಂಕಟೇಶ ಭವ ಸಂಕಟ ಪರಿಹರಿಸೋ |
ನಿನ್ನವರವನೆನಿಸೋ | ಪಂಕಜಾಕ್ಷ ಅಕಳಂಕ
ಮಹಿಮ ಹರಿಯೇ | ಆಶ್ರಿತರಿಗೆ ಧೊರಿಯೇ || ಪ ||
ನಾನಾ ಜನುಮಗಳಲಿ ತೊಳಲಿ ಬಂದೆ |
ನೀನೆ ಗತಿಯಂದೇ | ಜ್ಞಾನಾಜ್ಞಾನ ಕೃತಾ-
ಖಿಳ ದುಷ್ಕರ್ಮ | ಅದರಂತೆ ಸುಕರ್ಮಾ ||
ನಾನಾ ಪರಿಯಲ್ಲಿರು ತಿರಲನುಭವಿಸೀ |
ದುರ್ವಿಷಯವ ಬಯಸೀ | ಹೀನ ವೃತ್ತಿಯಲಿ ಚರಿಸಿ
ದಿನವು ಕಳದೆ | ಈ ಪರಿಯಿಂದುಳದೇ || ೧||
ಧಾರುಣಿ ಧನ ವನಿತಾದಿ ವಿಷಯಗಳಲ್ಲಿ |
ಕಾಮುಕ ತನದಲ್ಲೀ | ಚಾಲುವರಿದೆ ನೀತಿ
ಮಾರ್ಗ ಕಾಣದೆ ನಾನು | ಉಪಾಯವಿನ್ನೇನೂ ||
ದಾರಿಗೆ ಪೇಳೆಲೊ ಎನ್ನ ವರ್ತಮಾನ |
ನೀನಿನಿದಾನಾ | ತೋರಿಸಿ ಎನ್ನನು
ಬಿಡದೆ ಪಾಲಿಸಪ್ಪಾ | ಎಣಿಸಾದಿರು ತಪ್ಪಾ || ೨ ||
ಪಾಪಾತ್ಮಕ ನಾನಾ-ದರೇನೋ ಪೇಳೋ |
ಪಾವನ ನೀ ಕೇಳೋ |ಶ್ರೀ ಪದ್ಮಜ ಭವ
ಪ್ರಮುಖ ನಿರ್ಜರೇಶಾ | ನಾ ನಿನ್ನಗೆ ದಾಸಾ ||
ನೀ ಪಾಲಿಸದಿರೆ ಗತಿ-ಯಾರೆಲೋ ಮುಂದೆ |
ಕಾರುಣ್ಯದಿ ತಂದೇ | ಶ್ರೀಪತಿ ವಿಠ್ಠಲ ಕರವ
ಪಿಡಿಯೋ ವೇಗಾ | ನೀನುದ್ಧರಿಸೀಗಾ ||೩ ||
veMkaTESa Bava saMkaTa pariharisO |
ninnavaravanenisO | paMkajAkSha akaLaMka
mahima hariyE | ASritarige dhoriyE || pa ||
nAnA janumagaLali toLali baMde |
nIne gatiyaMdE | j~jAnAj~jAna kRutA-
KiLa duShkarma | adaraMte sukarmA ||
nAnA pariyalliru tiralanuBavisI |
durviShayava bayasI | hIna vRuttiyali carisi
dinavu kaLade | I pariyiMduLadE || 1||
dhAruNi dhana vanitAdi viShayagaLalli |
kAmuka tanadallI | cAluvaride nIti
mArga kANade nAnu | upAyavinnEnU ||
dArige pELelo enna vartamAna |
nIninidAnA | tOrisi ennanu
biDade pAlisappA | eNisAdiru tappA || 2 ||
pApAtmaka nAnA-darEnO pELO |
pAvana nI kELO |SrI padmaja Bava
pramuKa nirjarESA | nA ninnage dAsA ||
nI pAlisadire gati-yArelO muMde |
kAruNyadi taMdE | SrIpati viThThala karava
piDiyO vEgA | nInuddharisIgA ||3 ||
Leave a Reply