Sharanu venkataramana

Composer : Shri Purandara dasaru

By Smt.Shubhalakshmi Rao

ಶರಣು ವೆಂಕಟರಮಣ, ನಿನ್ನ
ಚರಣವ ನಂಬಿದೆ ನಾನು ||ಪ||

ಕರುಣಾಸಾಗರ ಕಾಮಿತಫಲವೀವ
ಶರಣು ಭಕ್ತರ ಕಾವ ಗರುಡವಾಹನ ದೇವ ||ಅ||

ಭಕ್ತವತ್ಸಲ ಹರಿಯೆ, ನಮ್ಮ
ಭವದುರಿತ ಪರಿಹಾರನೆ
ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ
ಶರಣು ಭಕ್ತರ ಕಾವ ಸುರಮುನಿಗಳ ದೇವ |೧|

ಪಾಪವಿನಾಶಿನಿ ತೀರ್ಥ, ನಮ್ಮ
ಪಾತಕವ ಪರಿಹರಿಸೆ
ಶ್ರೀವೆಂಕಟಗಿರಿ ಶ್ರೀವಾಸ
ಕೋನೆರಿತೀರ್ಥದಿವಾಸ ನಿವಾಸ |೨|

ದೇಶಕಧಿಕವಾದ ನಮ್ಮ
ಶೇಷಗಿರಿಯಲಿ ವಾಸ
ಶ್ರೀವೆಂಕಟಗಿರಿ ತಿರುಮಲೇಶ
ದಾಸದಾಸರ ಸಲಹುವ ಪುರಂದರವಿಠಲ |೩|


SaraNu veMkaTaramaNa, ninna
caraNava naMbide nAnu ||pa||

karuNAsAgara kAmitaPalavIva
SaraNu Baktara kAva garuDavAhana dEva ||a||

Baktavatsala hariye, namma
Bavadurita parihArane
aKilAMDakOTi brahmAMDanAyaka
SaraNu Baktara kAva suramunigaLa dEva |1|

pApavinASini tIrtha, namma
pAtakava pariharise
SrIveMkaTagiri SrIvAsa
kOneritIrthadivAsa nivAsa |2|

dESakadhikavAda namma
SEShagiriyali vAsa
SrIveMkaTagiri tirumalESa
dAsadAsara salahuva puraMdaraviThala |3|

Leave a Reply

Your email address will not be published. Required fields are marked *

You might also like

error: Content is protected !!