Composer : Shri Purandara dasaru , Raga: Shivaranjani , Tala:Adi
ಪಂಕಜಮುಖಿಯರೆಲ್ಲರು ಬಂದು ಲಕ್ಷ್ಮೀ ।
ವೇಂಕಟ ರಮಣಗಾರತಿಯೆತ್ತಿರೆ ॥ ಪ ॥
ಮತ್ಸ್ಯಾವತಾರಗೆ ಮಂದರೋದ್ಧಾರಗೆ ।
ಅಚ್ಚರಿಯಿಂದ ಭೂಮಿ ತಂದವಗೆ ॥
ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ।
ಲಕ್ಷ್ಮೀನರಸಿಂಹಗಾರತಿಯೆತ್ತಿರೆ ॥ 1 ॥
ವಾಮನ ರೂಪಲಿ ದಾನ ಬೇಡಿದವಗೆ ।
ಪ್ರೇಮದಿ ಕೊಡಲಿಯ ಪಿಡಿದವಗೆ ॥
ರಾಮಚಂದ್ರನಾಗಿ ದಶಶಿರನನು ಕೊಂದ ।
ಸ್ವಾಮಿ ಶ್ರೀಕೃಷ್ಣಗಾರತಿಯೆತ್ತಿರೆ ॥ 2 ॥
ಬತ್ತಲೆ ನಿಂತಗೆ ಬೌದ್ಧಾವತಾರಗೆ ।
ಉತ್ತಮ ಅಶ್ವವನೇರಿದಗೆ ॥
ಭಕ್ತರ ಸಲಹುವ ಪುರಂದರವಿಠಲಗೆ ।
ಮುತ್ತೈದೆಯರಾರತಿಯೆತ್ತಿರೆ ॥ 3 ॥
paMkajamuKiyarellaru baMdu lakShmI |
vEMkaTaramaNagAratiyettire || pa ||
matsyAvatArage maMdarOddhArage |
accariyiMda BUmi taMdavage ||
heccAda ukkina kaMBadiMdali baMda |
lakShmInarasiMhagAratiyettire || 1 ||
vAmana rUpali dAna bEDidavage |
prEmadi koDaliya piDidavage ||
rAmacaMdranAgi daSaSirananu koMda |
svAmi SrIkRuShNagAratiyettire || 2 ||
battale niMtage bauddhAvatArage |
uttama aSvavanEridage ||
Baktara salahuva puraMdaraviThalage |
muttaideyarAratiyettire || 3 ||
Leave a Reply