Composer : Shri Prasannavenkata dasaru
ಚಿಂತೆಯ ಪರಿಹರಿಸೊ ತಿಮ್ಮಯ್ಯ
ಚಿಂತಾಯಕ ಕಂತು ಕಮಲೆಯ ರಾಯ [ಪ]
ಸಾಧ್ಯವಲ್ಲದುದನ್ನು ಹಂಬಲಿಸಿ
ಬುದ್ಧಿ ಭ್ರಾಂತಿಲಿ ಬಲು ಸುಖ ಬಯಸಿ
ಕದ್ದ ಕಳ್ಳನಂತೆ ವೃಥಾ ಕುದಿದೆ
ಮದ್ದು ಮೆದ್ದಿಲಿಯಂತೆ ಬಳಲಿದೆ [೧]
ತಿಳಿದು ಮಾಯದ ಬಲಿಗೆ ಮೈಗೊಟ್ಟೆ
ಬೆಲೆಗಟ್ಟಿ ವೃಥಾ ಹುಚ್ಚು ದೈನ್ಯಬಟ್ಟೆ
ಆಲಿಸಿ ಮೋಕ್ಷದ ನೆಲೆಯ ಕೇಳದೆ ನಾ
ಕಳವಳಗೊಂಬೆ ಕರುಣಾಸಂಪನ್ನ [೨]
ಚಿಂತೆಗೆ ಚಿಂತಿ ಸಹಾಯವಾಗಿ
ಅಂತರಂಗದ ಕ್ಲೇಶ ಹೇಸಿತು ಬಾಗಿ
ಶಾಂತಮೂರ್ತಿ ಪ್ರಸನ್ವೆಂಕಟೇಶ
ಏಕಾಂತದಾಸರ ನೆಳಲನೆ ತೋರಿಸೊ [೩]
ciMteya parihariso timmayya
ciMtAyaka kaMtu kamaleya rAya [pa]
sAdhyavalladudannu haMbalisi
buddhi BrAMtili balu suKa bayasi
kadda kaLLanaMte vRuthA kudide
maddu meddiliyaMte baLalide [1]
tiLidu mAyada balige maigoTTe
belegaTTi vRuthA huccu dainyabaTTe
Alisi mOkShada neleya kELade nA
kaLavaLagoMbe karuNAsaMpanna [2]
ciMtege ciMti sahAyavAgi
aMtaraMgada klESa hEsitu bAgi
SAMtamUrti prasanveMkaTESa
EkAMtadAsara neLalane tOriso [3]
Leave a Reply