Composer : Shri Vijayadasaru
ಪಾಲಿಸೆನ್ನನು ದೇವಾ ಪರಮ ಪುರುಷಾ
ಭೂಲೋಲ ಶ್ರೀಮುಷ್ಣ ನಿಲಯ ಶ್ವೇತ ವರಹಾ [ಪ]
ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನು
ಪಯೋನಿಧಿ ಸುತೆಯಿಂದ ತುತಿಸಿಕೊಳ್ಳುತಾ
ಜಯಜಯ ದೇವನಾಶ್ರಯ ಕಾಮಧೇನು ನೀ
ದಯಮಾಡಿ ನೋಡುವದು ದಾಸ ನೆನೆಸುವದು [೧]
ಚಿತ್ತಾವಧಾರು ಪರಾಕು ಬೊಮ್ಮಾಂಡವನು
ಹೊತ್ತು ನಸುನಗು ನಾಗಾರಿಗಮನಾ
ಮುತ್ತು ಮಣಿ ಮಯದಾಭರಣದಿಂದೆಸೆವ ದೇ
ವೋತ್ತಮನೆ ದಾನವರ ಬಲವಳಿದಾ ಧೈರ್ಯ [೨]
ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡು
ಪ್ರತ್ಯಕ್ಷವಾಗಿ ವರಗಳನೀವುತ
ಸತ್ಯ ಸಂಕಲ್ಪ ಸಿರಿ ವಿಜಯವಿಠ್ಠಲ ವರಹ
ಭೃತ್ಯನೆನಿಸಿ ನಿನ್ನ ಸ್ತೋತ್ಯದೊಳಗಿಡು ದೇವಾ [೩]
pAlisennanu dEvA parama puruShA
bhUlOla SrImuShNa nilaya SvEta varahA [pa]
svAyicCeyali baMdu meredu mahAkIrtiyanu
payOnidhi suteyiMda tutisikoLLutA
jayajaya dEvanASraya kAmadhEnu nI
dayamADi nODuvadu dAsa nenesuvadu [1]
chittAvadhAru parAku bommAMDavanu
hottu nasunagu nAgArigamanA
muttu maNi mayadABaraNadiMdeseva dE
vOttamane dAnavara balavaLidA dhairya [2]
nitya puShkaraNiyali niruta pUjeyagoMDu
pratyakShavAgi varagaLanIvuta
satya saMkalpa siri vijayaviThThala varaha
BRutyanenisi ninna stOtyadoLagiDu dEvA [3]
Leave a Reply