Composer : Shri Prasannavenkata dasaru
ವೆಂಕಟೇಶ ಶ್ರೀ ವೆಂಕಟೇಶ ಪಾಲಿಸು
ಕಿಂಕರನ ವೆಂಕಟೇಶ [ಪ]
ಸುವರ್ಣಮುಖರಿಲಿ ಶಿವನುತ
ಪಾದಾಬ್ಜ ಸುವರ್ಣಗಿರಿ ವೆಂಕಟೇಶ
ನವ್ಯ ಚಂದನ ಮೃಗನಾಭಿ ಚರ್ಚಿತಗಾತ್ರ
ಅವ್ಯಾಕೃತನೆ ವೆಂಕಟೇಶ [೧]
ಹಲವಪರಾಧಿ ನಾ ಭೂರಿದಯಾಳು ನೀ
ನೆಲೆಗೆ ನಿಲ್ಲಿಸು ವೆಂಕಟೇಶ
ಬಲು ತಮ ತುಂಬಿದ ಭವದಿ ಕರುಣ ಶಶಿ
ಬೆಳಗು ಬೆಳಗು ವೆಂಕಟೇಶ [೨]
ತಂದೆ ತಾಯಿ ನೀನೆ ಸಖ ಸಹೋದರ ನೀನೆ
ಹಿಂದೆ ಮುಂದೆ ನೀ ವೆಂಕಟೇಶ
ಹೊಂದಿದ ಬಂಟನ ಕಂದಾಯ ನಡೆಸಯ್ಯ
ಕುಂದನಾಡದೆ ವೆಂಕಟೇಶ [೩]
ಸಾಕು ನೀ ಸಾಕದಿದ್ದರೆ ಬಿಡು ನಾ ಬಿಡೆ
ಜೋಕೆ ಬಿರುದು ವೆಂಕಟೇಶ
ನೀ ಕೈಯ್ಯ ಜರಿದರೆ ಕಾಕು ಮಾಡುವರೆನ್ನ
ಪೋಕ ವೃತ್ತರು ವೆಂಕಟೇಶ [೪]
ನಂಬಿದೆ ನಂಬಿದೆ ನಂಬಿದೆ ನಿನ್ನ
ಪಾದದಿಂಬಿನೊಳಿಡು ವೆಂಕಟೇಶ
ಬಿಂಬ ಮೂರುತಿ ಪ್ರಸನ್ವೆಂಕಟೇಶ
ಪ್ರತಿಬಿಂಬಕ್ಕರುಹು ವೆಂಕಟೇಶ [೫]
veMkaTESa SrI veMkaTESa pAlisu
kiMkarana veMkaTESa [pa]
suvarNamuKarili Sivanuta
pAdAbja suvarNagiri veMkaTESa
navya caMdana mRuganABi carcitagAtra
avyAkRutane veMkaTESa [1]
halavaparAdhi nA BUridayALu nI
nelege nillisu veMkaTESa
balu tama tuMbida Bavadi karuNa SaSi
beLagu beLagu veMkaTESa [2]
taMde tAyi nIne saKa sahOdara nIne
hiMde muMde nI veMkaTESa
hoMdida baMTana kaMdAya naDesayya
kuMdanADade veMkaTESa [3]
sAku nI sAkadiddare biDu nA biDe
jOke birudu veMkaTESa
nI kaiyya jaridare kAku mADuvarenna
pOka vRuttaru veMkaTESa [4]
naMbide naMbide naMbide ninna
pAdadiMbinoLiDu veMkaTESa
biMba mUruti prasanveMkaTESa
pratibiMbakkaruhu veMkaTESa [5]
Leave a Reply