Composer : Shri Jagannatha dasaru
ಜಯತೀರ್ಥ ಗುರುರಾಯ ಕವಿಗೇಯಾ ಪಾದ
ದ್ವಯಕಭಿನಮಿಸುವೆ ಶುಭಕಾಯ |ಪ|
ಭಯಹರ ಕರುಣಾ ನಯನದಿ ದಿನ ದಿನ
ವಯಿನವೆ ಪಾಲಿಸು ಬಯಸುವೆ ಒಡನೆ | ಅ.ಪ |
ಎಂದೆಂದು ನಿನ್ನ ಪಾದ ಪೊಂದಿದವರ ಪಾದ
ದ್ವಂದ್ವಾರಾಧಕರ ಸಂಬಂಧಿಗ ನರ
ನೆಂದು ಪಾಲಿಪುದು ಕಾರುಣ್ಯ ಸಾಗರ
ಮಂದ ನಾನು ಕರ್ಮಂದಿಗಳರಸ ಮು
ಕುಂದನ ತೋರೋ ಮನಮಂದಿರದಲ್ಲಿ [೧]
ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾ
ಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥ
ಕರಕಮಲ ಸಂಜಾತಾನಂದ ದಾತಾ
ಪರಮಹಂಸ ಕುಲವರನೆ ವಂದಿಸುವೆ
ಕರುಣದಿಂದಲೆನಗರುಪು ಸುತತ್ವವ [೨]
ಕಾಮಿತ ಫಲದಾತಾ ಜಗನ್ನಾಥ ವಿಠ್ಠಲ
ಸ್ವಾಮಿ ಪರಮ ದೂತಾ ಸುವಿಖ್ಯಾತಾ
ಶ್ರೀ ಮಧ್ವ ಮತಾಂಬುರುಹ ಪ್ರದ್ಯೋತಾ
ತಾಮಸಗಳೆದೀ ಮಹೀಸುರರ ಮಹಾ
ಮಹಿತರ ಮಾಡ್ದೆ ಮುನಿವರ್ಯಾ [೩]
jayatIrtha gururAya kavigEyA pAda
dvayakaBinamisuve SuBakAya |pa|
Bayahara karuNA nayanadi dina dina
vayinave pAlisu bayasuve oDane | a.pa |
eMdeMdu ninna pAda poMdidavara pAda
dvaMdvArAdhakara saMbaMdhiga nara
neMdu pAlipudu kAruNya sAgara
maMda nAnu karmaMdigaLarasa mu
kuMdana tOrO manamaMdiradalli [1]
haripAdAMbujAsakta nija Bakta janarA
paripAlipa samartha akShOBya tIrtha
karakamala saMjAtAnaMda dAtA
paramahaMsa kulavarane vaMdisuve
karuNadiMdalenagarupu sutatvava [2]
kAmita PaladAtA jagannAtha viThThala
svAmi parama dUtA suviKyAtA
SrI madhva matAMburuha pradyOtA
tAmasagaLedI mahIsurara mahA
mahitara mADde munivaryA [3]
Leave a Reply