-
Jayatirtha Gururaya
Composer : Shri Jagannatha dasaru ಜಯತೀರ್ಥ ಗುರುರಾಯ ಕವಿಗೇಯಾ ಪಾದದ್ವಯಕಭಿನಮಿಸುವೆ ಶುಭಕಾಯ |ಪ| ಭಯಹರ ಕರುಣಾ ನಯನದಿ ದಿನ ದಿನವಯಿನವೆ ಪಾಲಿಸು ಬಯಸುವೆ ಒಡನೆ | ಅ.ಪ | ಎಂದೆಂದು ನಿನ್ನ ಪಾದ ಪೊಂದಿದವರ ಪಾದದ್ವಂದ್ವಾರಾಧಕರ ಸಂಬಂಧಿಗ ನರನೆಂದು ಪಾಲಿಪುದು ಕಾರುಣ್ಯ ಸಾಗರಮಂದ ನಾನು ಕರ್ಮಂದಿಗಳರಸ ಮುಕುಂದನ ತೋರೋ ಮನಮಂದಿರದಲ್ಲಿ [೧] ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥಕರಕಮಲ ಸಂಜಾತಾನಂದ ದಾತಾಪರಮಹಂಸ ಕುಲವರನೆ ವಂದಿಸುವೆಕರುಣದಿಂದಲೆನಗರುಪು ಸುತತ್ವವ [೨] ಕಾಮಿತ ಫಲದಾತಾ ಜಗನ್ನಾಥ ವಿಠ್ಠಲಸ್ವಾಮಿ…
