Composer : Shri Gurugovinda dasaru
Shri Brahmanya Tirtharu:
Vrundavana – Abbur
ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||
Kamsadhwamsi padaambhOja samsaktO hamsapungava: |
brahmaNya gururaajaakYO vartataam mama maanasE ||
Aradhana – Vaishaka Krishna Ekadashi
Ashrama Gurugalu – Sri Purushottama Tirtharu
Ashrama Shishyaru – Sri Vyasarajaru
ವೃಂದಾವನ ನೋಡಿರೊ –
ನೀವೆಲ್ಲಾನಂದವನ್ನೇ ಪೊಂದಿರೊ [ಪ]
ರಾಮಾಚಾರ್ಯರ ಪುತ್ರರೊ – ಅವರು
ಮಾಮನೋಹರ ನೃಹರಿ ದಾತರೋ |
ಜನ್ಮ ಅಷ್ಟಕೆ ಬ್ರಹ್ಮಚರ್ಯ –
ಪೊಂದಿ ಬ್ರಹ್ಮ ವಿದ್ಯೆಯ ಪಡೆದರೋ |
ಪ್ರೇಮದಿಂದಲಿ ಬಂದು ತಾ
ಪುರುಷೋತ್ಮ ತೀರ್ಥರ ಸಾರ್ದರಾ [೧]
ಕಾಯಜ ಪಿತನ ತಾನ್ವಲಿಸೀ –
ದೇಶಂಗಳ ಪ್ರೀಯದಿಂದಲಿ ಸಂಚರಿಸೀ |
ಮಾಯಾರಮಣನು ಜೀವನೂ –
ಒಂದೆಂಬ ಮಾಯಾವಾದೀಗಳ ತರಿದೂ |
ವಾಯುಮತ ಪ್ರೀತಿಯಲಿ ಅರುಹುತ
ಪ್ರೀಯ ಅಬ್ಬೂರಲ್ಲಿ ನೆಲೆಸಿದ [೨]
ವಿಠಲ ನೃಹರಿ ಪೂಜೆಗೇ –
ನೇಮಿಸಿತಮ್ಮಪಟ್ಟ ಶಿಷ್ಯರು ವ್ಯಾಸತೀರ್ಥರ |
ಅಟ್ಟ ಹಾಸದಿ ಸರ್ವಜಿತೂ –
ಸಂವತ್ಸರ ಕೃಷ್ಣೈಕಾದಶಿ ವೈಶಾಖ |
ದಿಟ್ಟ ಗುರುಗೋವಿಂದ ವಿಠಲನ ದೃಷ್ಟಿಸೀ
ತನು ಬಿಟ್ಟು ಪೊರಟನ [೩]
vRuMdAvana nODiro –
nIvellAnaMdavannE poMdiro [pa]
rAmAcAryara putraro – avaru
mAmanOhara nRuhari dAtarO |
janma aShTake brahmacarya –
poMdi brahma vidyeya paDedarO |
prEmadiMdali baMdu tA
puruShOtma tIrthara sArdarA [1]
kAyaja pitana tAnvalisI –
dESaMgaLa prIyadiMdali saMcarisI |
mAyAramaNanu jIvanU –
oMdeMba mAyAvAdIgaLa taridU |
vAyumata prItiyali aruhuta
prIya abbUralli nelesida [2]
viThala nRuhari pUjegE –
nEmisitammapaTTa SiShyaru vyAsatIrthara |
aTTa hAsadi sarvajitU –
saMvatsara kRuShNaikAdaSi vaiSAKa |
diTTa gurugOviMda viThalana dRuShTisI
tanu biTTu poraTana [3]
Leave a Reply