Composer : Shri Vadirajaru – Shri Harihara kshetra
ಒಂದು ಮೂರುತಿಯಲ್ಲಿ ಹರಿಹರ ದೇವರಿಬ್ಬರು
ಬಂದು ನೆಲೆಗೊಂಡುದನ ಕಂಡೆನದ್ಭುತವ [ಪ]
ಭಾವಜನ ಪಿತನೊಬ್ಬ ಅವನ ಕೊಂದವನೊಬ್ಬ
ಹಾವ ತುಳಿದವನೊಬ್ಬ ಧರಿಸಿದವನೊಬ್ಬ
ಗೋವ ಕಾಯಿದನೊಬ್ಬ ಅದನೇರಿದವನೊಬ್ಬ
ಭಾವಿಸಲು ವಿಪರೀತ ಚರಿತರಂತಿರ್ದು [೧]
ಬಾಣನ ಗೆಲಿದವನೊಬ್ಬ ಬಾಗಿಲ ಕಾಯಿದವನೊಬ್ಬ
ದಾನವರ ರಿಪುವೊಬ್ಬ ವರವೀವನೊಬ್ಬ
ಏನನೆಂಬೆನೊ ಜಗವ ಕಾವುತಿಹನೊಬ್ಬ ನಿ-
ಧಾನಿಸಲು ಸಂಹರಿಸಿ ಕೊಲ್ಲುತಿಪ್ಪನೊಬ್ಬ [೨]
ಯಾಗ ಪಾಲಕನೊಬ್ಬ ಯಾಗ ಭಂಜನನೊಬ್ಬ
ನಾಗರಕ್ಷಕನೊಬ್ಬ ನಾಗಶಿಕ್ಷಕನು
ಈಗ ನಲ್ಲಳಿಗರ್ಧ ದೇಹವನಿತ್ತ ಶಿವನಂತೆ
ಭೋಗದೊಳು ಹೊಂದಿಹ ಹಯವದನ ಬಲ್ಲ [೨]
oMdu mUrutiyalli harihara dEvaribbaru
baMdu nelegoMDudana kaMDenadButava [pa]
BAvajana pitanobba avana koMdavanobba
hAva tuLidavanobba dharisidavanobba
gOva kAyidanobba adanEridavanobba
BAvisalu viparIta caritaraMtirdu [1]
bANana gelidavanobba bAgila kAyidavanobba
dAnavara ripuvobba varavIvanobba
EnaneMbeno jagava kAvutihanobba ni-
dhAnisalu saMharisi kollutippanobba [2]
yAga pAlakanobba yAga BaMjananobba
nAgarakShakanobba nAgaSikShakanu
Iga nallaLigardha dEhavanitta SivanaMte
BOgadoLu hoMdiha hayavadana balla [2]
Leave a Reply