Composer : Shri Vidyaratnakara Tirtharu
Shri Vidyaratnakara Tirtha:
दुर्वादिमत्तनागेंद्र विदारण मृगाधिप: ।
विद्यरत्नाकर गुरुसन्निधत्तां सदाहृदि ।
durvaadimattanaagEndra vidaaraNa mRugaadhipa: |
vidyaratnaakara gurusannidhattaam sadaahRudi |
Vrundavana @ Sosale
Ashrama Period – 1902-1915
Aradhane – Vaishaka Bahula Navami
ನೀರಜಾಕ್ಷೇರೆಲ್ಲ ಬಂದು ಮಾರಜನಕಗೇ
ಆರತಿ ಎತ್ತಿರೇ ನಾರಿಮಣಿ ಶ್ರೀರುಕ್ಮಿಣಿಮಣಿಗೆ || ಪ ||
ವೇದವನ್ನು ಕದ್ದ ಖಳನ | ಭೇದಿಸಿದವಗೆ
ಆದರದಿಂದ ಮಂದರವೆಂಬೋ ಭೂಧರ ತಂದವಗೆ || ೧ ||
ಕುಂಭಿಣಿಯನ್ನು ಬಿಡದೆ ತಂದ ಕುಂಭಿಣಿರಮಣಗೆ
ಕಂಭದಿ ಬಂದು ದನುಜಡಿಂಬನ ಕಾಯ್ದ ನೃಹರಿಗೆ || ೨ ||
ಭೂಮಿ ಬೇಡಿದವನಿಗೆ ದುಷ್ಟಭೂಮಿಪ ಹರನಿಗೆ
ಕಾಮಿನಿಚೋರನ ಶಿರವ ತರಿದ ಸ್ವಾಮಿರಾಮಗೆ || ೩ ||
ಪಾಂಡುಸುತರ ಸಲಹಿ ಖಳರ ದಂಡಿಸಿದವಗೆ |
ಚಂಡತ್ರಿಪುರರ ಹೆಂಡಿರ ವ್ರತದ ಖಂಡನೆಮಾಳ್ದಗೆ || ೪ ||
ತುರಗವೇರಿ ದುರುಳ ನೃಪರ ತರಿದ ಕಲ್ಕಿ
ವರದನಾಮಗಿರಿ ಶ್ರೀಹರಿಯ ಚರಣಕಮಲಕೆ || ೫ ||
nIrajAkShErella baMdu mArajanakagE
Arati ettirE nArimaNi SrIrukmiNimaNige || pa ||
vEdavannu kadda KaLana | BEdisidavage
AdaradiMda maMdaraveMbO BUdhara taMdavage || 1 ||
kuMBiNiyannu biDade taMda kuMBiNiramaNage
kaMBadi baMdu danujaDiMbana kAyda nRuharige || 2 ||
BUmi bEDidavanige duShTaBUmipa haranige
kAminicOrana Sirava tarida svAmirAmage || 3 ||
pAMDusutara salahi KaLara daMDisidavage |
caMDatripurara heMDira vratada KaMDanemALdage || 4 ||
turagavEri duruLa nRupara tarida kalki
varadanAmagiri SrIhariya caraNakamalake || 5 ||
Leave a Reply