Composer : Shri Prasannavenkata dasaru
ಸುಧೀಂದ್ರತೀರ್ಥಕರ ಪೂಜಿತಾ |
ಬಿದನೂರದಿ ನಿಂತಾ ಹನುಮಂತಾ [ಪ]
ಐದು ಮೊಗ ಐದೆರಡು ಭುಜದಿ ಮಹಾ |
ಯುಧ ಪಿಡಿದಾಯುಧ ಧರನೆನಿಸಿದಾ |
ಭೇದಗಳೈದು ಬೋಧಿಸಿ ಬುಧರಿಗೆ |
ಸಾಧನ ದಾರಿಯ ತೋರಿದ ಮುದಮುನಿ [೧]
ರಾಮನಾಜ್ಞೆಗೆ ಅಕ್ಷಯ ಕುವರನ |
ಹೋಮಗೈಸಿ ಪ್ರತಿ ಧಮನಿ ಧಮನಿಯಲಿ |
ಸ್ವಾಮಿಯನಾಮವ ನೇಮದಿ ನೆನೆಯುತ |
ಭೂಮಂಡಲಕತಿ ಬಲನೆಂದೆನಿಸಿದ [೨]
ಸೂರಿಗಳರಸೆಂದೆನಿಸಿ ಧರೆಯೊಳಗೆ |
ಸಾರ ಶಾಸ್ತ್ರರಸ ಸುರಿಸಿ ಭೂಸುರಗೆ |
ಸರಸಿಜಾಪತಿ ಪ್ರಸನ್ವೆಂಕಟನ |
ಸರುವಾಧಿಕ್ಯವ ಸಾರಿದ ಸುರಮುನಿ [೩]
sudhIMdratIrthakara pUjitA |
bidanUradi niMtA hanumaMtA [pa]
aidu moga aideraDu Bujadi mahA |
yudha piDidAyudha dharanenisidA |
BEdagaLaidu bOdhisi budharige |
sAdhana dAriya tOrida mudamuni [1]
rAmanAj~jege akShaya kuvarana |
hOmagaisi prati dhamani dhamaniyali |
svAmiyanAmava nEmadi neneyuta |
BUmaMDalakati balaneMdenisida [2]
sUrigaLaraseMdenisi dhareyoLage |
sAra SAstrarasa surisi BUsurage |
sarasijApati prasanveMkaTana |
saruvAdhikyava sArida suramuni [3]
Leave a Reply