Ele guruve – Yalagura hanuma

Composer : Shri Prasannavenkata dasaru

By Smt.Shubhalakshmi Rao

ಎಲೆ ಗುರುವೆ ಜನುಮ ಜನುಮ ಜನುಮದೊಳು ಗುರುವೆ
ಯಲಗುರದ ಹನುಮಂತ ಗೆಲಿಸು ಭವಪಂಥ [ಪ]

ಮೂಜಗದೊಳಾರು ನಿನಗೆಣೆಯ ಋಜುಗಣಪತಿ ಸ
ರೋಜ ಭವಪದ ಗಮ್ಯ ರಮ್ಯ
ಭೂಜಾತೆಯಳ ಶೋಕ ಬಿಡಿಸಿದ ಬಲಾಧಿಕ ಬಿ –
ಡೌಜಾರಿಪಿತ ಹೃದಯನೊದೆದೆ [೧]

ಲಕ್ಷಾಗೃಹದಿ ಧರ್ಮಜರ ಹೊರೆದು ಕಿರ್ಮ್ಮೀರ
ರಾಕ್ಷಸ ಹಿಡಿಂಬರನು ತರಿದೆ
ಭಕ್ಷಿಸಿದೆ ವಿವಿಧನ್ನ ಶಿಕ್ಷಿಸಿದೆ ಬಕನ ತಾ
ಮ್ರಾಕ್ಷ ಭಾಗವತಜನಪಕ್ಷ [೨]

ಉನ್ಮತ್ತ ಮತಂಗಳನು ಅಳಿದೆ ಯತಿರೂಪದಿ ಜ
ಗನ್ಮಯನ ಭಕುತಿರಸ ಜಗದಿ
ನಿನ್ನ ಬಂಟರಿಗೆರೆದೆ ನಿರಯ ತಪ್ಪಿಸಿದೆ ಪ್ರ –
ಸನ್ನವೆಂಕಟನಾಥ ಪ್ರೀತ [೩]


ele guruve januma januma janumadoLu guruve
yalagurada hanumaMta gelisu BavapaMtha [pa]

mUjagadoLAru ninageNeya RujugaNapati sa –
rOja Bavapada gamya ramya
BUjAteyaLa SOka biDisida balAdhika bi –
DaujAripita hRudayanodede [1]

lakShAgRuhadi dharmajara horedu kirmmIra
rAkShasa hiDiMbaranu taride
BakShiside vividhanna SikShiside bakana tA
mrAkSha BAgavatajanapakSha [2]

unmatta mataMgaLanu aLide yatirUpadi ja
ganmayana Bakutirasa jagadi
ninna baMTarigerede niraya tappiside pra –
sannaveMkaTanAtha prIta [3]

Leave a Reply

Your email address will not be published. Required fields are marked *

You might also like

error: Content is protected !!