Pavamana Namma guru

Composer : Shri Jagannatha dasaru

By Smt.Nandini Sripad , Blore..

ಶ್ರೀ ಜಗನ್ನಾಥದಾಸರ ಕೃತಿ ಶ್ರೀ ಪ್ರಾಣದೇವರ ಸ್ತೋತ್ರಪದ
ರಾಗ: ಶಂಕರಾಭರಣ, ರೂಪಕತಾಳ

ಪವಮಾನ ನಮ್ಮ ಗುರು ಪವಮಾನ || ಪ ||
ಪವಮಾನ ಪಾವನಚರಿತ | ಪದ್ಮ –
ಭವನ ಪದಾರ್ಹನೆ ನಿರತ || ಆಹಾ ||
ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ –
ರವತಾರಾತ್ಮಕ ತತ್ವ ದಿವಿಜನಿಯಾಮಕ || ಅ.ಪ ||

ಪ್ರಾಣಾಪಾನ ವ್ಯಾನೋದಾನ | ಹೇ ಸ –
ಮಾನ ರೂಪಕನೆ ವಿಜ್ಞಾನ | ತತ್ವ
ಮಾನಿಯೆ ಅಮೃತಾಭಿಧಾನ | ಚತು
ರಾನನ ತನಯ ಗೀರ್ವಾಣ || ಆಹಾ ||
ಸೇನಾಧಿಪತೆ ನಿನ್ನಾಜ್ಞಾನುಸಾರದಲಿಪ್ಪ
ಮಾನವರನು ಕಾಯ್ವ ಮೌನಿಧ್ಯಾನಗಮ್ಯ || ೧ ||

ನಾಗಕೂರ್ಮ ದೇವದತ್ತ | ಕೃಕಲ
ಯೋಗಿವರಿಯ ಮುಕ್ತಾಮುಕ್ತ | ಕ್ಲುಪ್ತ
ಭೋಗಂಗಳೀವ ಸುಶಕ್ತ | ತಲೆ
ಬಾಗಿ ಬೇಡುವೆ ಸರ್ವೋದ್ರಿಕ್ತ || ಆಹಾ ||
ಹೋಗುತಲಿದೆ ಹೊತ್ತು ಜಾಗುಮಾಡದೆ ನಿಜ –
ಭಾಗವತರೊಳಿಡೊ ಮೈಗಣ್ಣಪದವಾಳ್ದ || ೨ ||

ಮೂರುಕೋಟಿ ರೂಪಧರನೆ | ಲೋಕಾ
ಧಾರಕ ಲಾವಣ್ಯಕರನೆ | ಸರ್ವ
ಪ್ರೇರಕ ಭಾರತಿವರನೆ | ತ್ರಿಪು
ರಾರಿಗೆ ವಜ್ರಪಂಜರನೆ || ಆಹಾ ||
ನೀರಜಜಾಂಡದಿ ಮೂರೇಳು ಸಾವಿರ –
ದಾರುನೂರು ಜಪ ಬೇರೆ ಬೇರೆ ಮಾಳ್ಪ || ೩ ||

ಮೂಲೇಶನಂಘ್ರಿ ಸರೋಜ | ಭೃಂಗ
ಏಳೇಳು ಲೋಕಾಧಿರಾಜಾ | ಇಪ್ಪ
ತ್ತೇಳು ರೂಪನೆ ರವಿತೇಜ | ಲೋಕ
ಪಾಲಕರಾಳ್ದ ಮಹೋಜ || ಆಹಾ ||
ಕಾಳೀರಮಣ ನಿನ್ನ ಕಾಲಿಗೆರಗುವೆ ಕೃ –
ಪಾಳೋ ಭಕ್ತಿಜ್ಞಾನವಾಲಯ ಕರುಣಿಸೋ || ೪ ||

ಶ್ರೀವಲ್ಲಭಗೆ ಪ್ರತಿಬಿಂಬ | ನಾಗಿ
ಜೀವವೇದ ಕಾಲಸ್ತಂಬ | ಗತ
ಆವಾಗ ಹರಿರೂಪ ಕಾಂಬ | ಶಕ್ತ
ನೀನೊಬ್ಬನಹುದೊ ನಾನೆಂಬ || ಆಹಾ ||
ದೇವತೆಗಳಿಗುಂಟೆ ಈ ವಿಭವ ಜಗ –
ಜ್ಜೀವ ದಯಾಶೀಲ ನಾ ವಂದಿಪೆ ನಿತ್ಯ || ೫ ||

ಆಖಣಾಶ್ಮ ಸಮಚರಣ | ಪದ್ಮ
ಲೇಖರ ಮಸ್ತಕಾಭರಣ | ಕಲ್ಪ
ಶಾಖೆಯಂತೆ ಅತಿಕರುಣಾ | ದಿಂದ
ಈ ಖಂಡದೊಳು ಮಿಥ್ಯಾವರಣ || ಆಹಾ ||
ನೀ ಖಂಡಿಸಿದೆ ದಂಡಮೇಖಲಭೂಷಣ
ಆಖುವಾಹನಪಿತ ಆಖಂಡಲಾರ್ಚಿತ || ೬ ||

ದಕ್ಷಿಣಾಕ್ಷಿಗತವತ್ಸ | ರೂಪ
ದಕ್ಷನಹುದೊ ಪರಮೋತ್ಸ | ಚಾರು
ತ್ರ್ಯಕ್ಷಾದಿ ಸುರರೊಳಧ್ಯಕ್ಷ | ಸರ್ವಾ
ಪೇಕ್ಷಾವರ್ಜಿತನೇ ಸ್ವೇಚ್ಛ || ಆಹಾ ||
ಮೋಕ್ಷದಿ ದ್ವಾತ್ರಿಂಶಲ್ಲಕ್ಷಣಪುರುಷ ನಿ –
ರೀಕ್ಷಿಸಿ ಕರುಣದಿ ರಕ್ಷಿಸು ಎನ್ನನು || ೭ ||

ಅಧಿಭೂತ ಅಧ್ಯಾತ್ಮಗತನೆ | ವಿಮಲ
ಅಧಿದೈವರೊಳು ಪ್ರವಿತತನೆ | ಕಲಿ
ಹೃದಯ ವಿಭೇದನರತನೆ | ಎನ್ನ
ವದನದಿ ನೆಲೆಸೊ ಮಾರುತನೆ || ಆಹಾ ||
ಬದರಿಕಾಶ್ರಮದೊಳು ಹದಿನಾರು ಸಾವಿರ
ಸುದತೇರ ಕಾಯ್ದ ನಾರದಮುನಿಸನ್ನುತ || ೮ ||

ಮಾತರಿಶ್ವ ಮಹಾಮಹಿಮ | ಸರ್ವ
ಚೇತನ ಹೃದ್ಗತ ಹನುಮ | ಭೀಮ
ಭೂತಳದೊಳು ಮಧ್ವನಾಮ | ದಿಂದ
ಜಾತನಾಗಿ ಜಿತಕಾಮ || ಆಹಾ ||
ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಳ ಗೆದ್ದ
ಸೀತಾರಮಣ ಜಗನ್ನಾಥವಿಠ್ಠಲ ದೂತ || ೯ ||


rAga: SaMkarABaraNa, rUpakatALa

pavamAna namma guru pavamAna || pa ||
pavamAna pAvanacarita | padma –
Bavana padArhane nirata || AhA ||
SravaNAdi Bakuti j~jAnavittu salaho mU –
ravatArAtmaka tatva divijaniyAmaka || a.pa ||

prANApAna vyAnOdAna | hE sa –
mAna rUpakane vij~jAna | tatva
mAniye amRutABidhAna | catu
rAnana tanaya gIrvANa || AhA ||
sEnAdhipate ninnAj~jAnusAradalippa
mAnavaranu kAyva maunidhyAnagamya || 1 ||

nAgakUrma dEvadatta | kRukala
yOgivariya muktAmukta | klupta
BOgaMgaLIva suSakta | tale
bAgi bEDuve sarvOdrikta || AhA ||
hOgutalide hottu jAgumADade nija –
BAgavataroLiDo maigaNNapadavALda || 2 ||

mUrukOTi rUpadharane | lOkA
dhAraka lAvaNyakarane | sarva
prEraka BArativarane | tripu
rArige vajrapaMjarane || AhA ||
nIrajajAMDadi mUrELu sAvira –
dArunUru japa bEre bEre mALpa || 3 ||

mUlESanaMGri sarOja | BRuMga
ELELu lOkAdhirAjA | ippa
ttELu rUpane ravitEja | lOka
pAlakarALda mahOja || AhA ||
kALIramaNa ninna kAligeraguve kRu –
pALO Baktij~jAnavAlaya karuNisO || 4 ||

SrIvallaBage pratibiMba | nAgi
jIvavEda kAlastaMba | gata
AvAga harirUpa kAMba | Sakta
nInobbanahudo nAneMba || AhA ||
dEvategaLiguMTe I viBava jaga –
jjIva dayASIla nA vaMdipe nitya || 5 ||

AKaNASma samacaraNa | padma
lEKara mastakABaraNa | kalpa
SAKeyaMte atikaruNA | diMda
I KaMDadoLu mithyAvaraNa || AhA ||
nI KaMDiside daMDamEKalaBUShaNa
AKuvAhanapita AKaMDalArcita || 6 ||

dakShiNAkShigatavatsa | rUpa
dakShanahudo paramOtsa | cAru
tryakShAdi suraroLadhyakSha | sarvA
pEkShAvarjitanE svEcCa || AhA ||
mOkShadi dvAtriMSallakShaNapuruSha ni –
rIkShisi karuNadi rakShisu ennanu || 7 ||

adhiBUta adhyAtmagatane | vimala
adhidaivaroLu pravitatane | kali
hRudaya viBEdanaratane | enna
vadanadi neleso mArutane || AhA ||
badarikASramadoLu hadinAru sAvira
sudatEra kAyda nAradamunisannuta || 8 ||

mAtariSva mahAmahima | sarva
cEtana hRudgata hanuma | BIma
BUtaLadoLu madhvanAma | diMda
jAtanAgi jitakAma || AhA ||
A tippaNNAdi viKyAta mAygaLa gedda
sItAramaNa jagannAthaviThThala dUta || 9 ||

Leave a Reply

Your email address will not be published. Required fields are marked *

You might also like

error: Content is protected !!