Composer : Shri Purandara dasaru
ಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯ
ಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯ [ಪ]
ಬಿಡುವೆನೇನೊ ಹನುಮ ನಿನ್ನ
ಅಡಿಗಳಿಗೆ ಶಿರವ ಬಾಗಿ
ದೃಡ ಭಕ್ತಿ ಸುಜ್ಞಾನವನ್ನು
ತಡಮಾಡದಲೆ ಕೊಡುವೋ ತನಕ ||ಅ.ಪ.||
ಹಸ್ತವ ಮ್ಯಾಲಕ್ ಎತ್ತಿದರೇನು
ಹಾಲಗಾರ ಹಾಕಿದರೇನು
ಭೃತ್ಯನು ನಿನ್ನವನು ನಾನು,
ಹಸ್ತೀವರದನ ತೋರೋ ತನಕ ||೨||
ಹಲ್ಲು ಮುಡಿಯ ಕಚ್ಚಿದರೇನು
ಅಂಜುವೇನೆ ನಿನಗೆ ನಾನು
ಫುಲ್ಲ ನಾಭನಲ್ಲಿ ಎನ್ನ
ಮನಸ ತೋರಿ ನಿಲ್ಲಿಸೊ ತನಕ ||೩||
ಡೊಂಕು ಮೋರೇ ಬಾಲವ ತಿದ್ದಿ
ಹುಂಕರಿಸಿದರೆ ಅಂಜುವನಲ್ಲಾ
ಕಿಂಕರನು ನಿನ್ನವನು ನಾನು
ಪುರಂದರ ವಿಠಲನ ತೋರೋ ತನಕ ||೪||
biDuvEnEnayya hanuma, biDuvEnEnayya
biDuvEnEnayya hanuma, biDuvEnEnayya [pa]
biDuvenEno hanuma ninna
aDigaLige Sirava bAgi
dRuDa Bakti suj~jAnavannu
taDamADadale koDuvO tanaka ||a.pa.||
hastava myAlak ettidarEnu
hAlagAra hAkidarEnu
bhRutyanu ninnavanu nAnu,
hastIvaradana tOrO tanaka ||2||
hallu muDiya kaccidarEnu
aMjuvEne ninage nAnu
phulla nAbhanalli enna
manasa tOri nilliso tanaka ||3||
DoMku mOrE bAlava tiddi
huMkarisidare aMjuvanallA
kiMkaranu ninnavanu nAnu
puraMdara viThalana tOrO tanaka ||4||
Leave a Reply