Composer : Shri Varadesha vittala, Varadendra vittala, Sundara vittala, Gurujagannatha vittala
ಭಾರತಿ ರಮಣನಾ ಸಾರುವೆ ಚರನ
ತೋರೊ ಮನ್ಮನ್ದಲಿ ಭೂರಿಸು ಕರುಣ |ಪ|
ನಾರಾಯನಾಂಕದಿ ಕುಳಿತಿಹ ಶೂರ
ಸೂರಿ ಸ್ತೋಮ ತೇಜ ರಂಜಿಪುದುದಾರ ||
ಮಾರಮಣನಾಜ್ಞದಿಂ ಬ್ರಹ್ಮಾಣ್ಡಾಧಾರ
ಧಾರಕಾನಂದ ವಿಠಲನಚಾರ |೧|
ದುರುಳ ರಕ್ಕಸತತಿ ದ್ವಿರದ ವಿದಾರ |
ಹರಿ ರಘುವರನಪಾದ ಶರಧಿಜ ಚಕೋರ |
ಹರಮುಖ್ಯ ಸುರ ಸರಸಿರುಹಕೆ ದಿನಕರ
ವರದೇಶವಿಠ್ಠಲನ ಸ್ಮರಿಪ ಸಮೀರ | ೨|
ಕುರುಕುಲ ಸಂಜಾತ ದ್ರುಪದಜಾನಾಥ |
ದುರಿಯೋಧನನ ಊರುತರಿದ ನಿರ್ಭೀತ |
ಪರಮ ಭಗವದ್ ಭಕ್ತ ವೃಂದ ಸುಪ್ರೀತ,
ವರದೇಂದ್ರ ವಿಠ್ಠಲನ ಪ್ರೀಯ ಸುತರಾತ | ೩|
ಅದ್ವೈತ ಮತತಿಮಿರ ಧ್ವಂಸನ ಧೀರ |
ಶುದ್ಧ ವೈಷ್ಣವ ಮತ ಸ್ಥಾಪನಾಚಾರ್ಯ |
ಸದ್ ವಾಕ್ಯದಿಂದಲಿ ಹರಿಪಾರವಾರ |
ಮಧ್ವಸುಂದರ ವಿಠ್ಠಲನ ಸುಕುಮಾರ |೪|
ವರದೇಶವಿಠ್ಠಲ ವರದೇಂದ್ರ ವಿಠ್ಠಲ
ಸುಂದರ ವಿಠ್ಠಲ ಆನಂದ ವಿಠ್ಠಲನ್ನ |
ಪರಿಪರಿ ವಿಧದಲ್ಲಿ ಕರುಣವ ಪಡೆದಿಹ |
ಗುರುಜಗನ್ನಾಥ ವಿಠ್ಠಲನ ನಿಜದೂತ |೫|
bhArati ramaNanA sAruve charana
tOro manmandali bhUrisu karuNa |pa|
nArAyanAMkadi kuLitiha shUra
sUri stOma tEja raMjipududAra ||
mAramaNanAj~jadiM brahmANDAdhAra
dhArakAnaMda viThalanachAra |1|
duruLa rakkasatati dvirada vidAra |
hari raGuvaranapAda Saradhija cakOra |
haramuKya sura sarasiruhake dinakara
varadESaviThThalana smaripa samIra | 2|
kurukula saMjAta drupadajAnAtha |
duriyOdhanana Urutarida nirBIta |
parama Bagavad bhakta vRuMda suprIta,
varadEMdra viThThalana prIya sutarAta | 3|
advaita matatimira dhvaMsana dhIra |
Suddha vaiShNava mata sthApanAchArya |
sad vAkyadiMdali haripAravAra |
madhvasuMdara viThThalana sukumAra |4|
varadESaviThThala varadEMdra viThThala
suMdara viThThala AnaMda viThThalanna |
paripari vidhadalli karuNava paDediha |
gurujagannAtha viThThalana nijadUta |5|
Leave a Reply