Composer : Shri Jayesha vittala
ಸರ್ವಕ್ಕೂ ನೀ ಮೂಲ ಹರಿಯೆ ಕೇಳೊ ||ಪ||
ದರ್ವಿ ಜೀವರ ಕೈಲಿ ಏನಾಹುದೆಲೊ ದೇವ ||ಅ.ಪ.||
‘ಆ’ ಎನಲು ಶಕ್ತರೇ ಅಜಭವಾದಿಗಳಿನ್ನು
‘ನೀ’ಯಾದರದಲ್ಲಿ ಚೇತನರು ಅವರು
‘ನಾ’ಯಾತರವನಯ್ಯಾ ನಿನ್ನ ಮಾಯವ ಗೆಲಲು
ಆಯಾಸ ಮೀರಿದುದು ಶ್ರೀ ವರನೆ ದಯೆ ತೋರು [೧]
ನಿನ್ನ ಚಿತ್ತಕೆ ಬಂದುದೇ ಹಿತವೆಂಬ
ಉನ್ನತ ಮತಿ ನೀಡು ಶರ್ವ ಬಿಂಬ
ಭಿನ್ನ ಭಾವಗಳೊಲ್ಲೆ ಅನಂತಗುಣವನಧಿ
ಮನದಲ್ಲಿ ನೀ ನಿಂದು ವಿಸ್ಮತಿಯ ಪರಿಹರಿಸು [೨]
ತವರೂಪ ಧ್ಯಾನಲವ ಬಿಡದೆ ಪೊಂದಿರಲಿ
ನವಭಕ್ತಿ ನಿನ್ನಲ್ಲಿ ಅಚ್ಛಿನ್ನವಾಗಿ
ಪವಮಾನ ಪೂಜಿತ ಜಯೇಶವಿಠಲ
ಭವ ಕಡಲ ದಾಟಿಸೊ ನಿನ್ನವನೆಂದು [೩]
sarvakkU nI mUla hariye kELo ||pa||
darvi jIvara kaili EnAhudelo dEva ||a.pa.||
‘A’ enalu SaktarE ajabhavAdigaLinnu
nI’yAdaradalli cEtanaru avaru
nA yAtaravanayyA ninna mAyava gelalu
AyAsa mIridudu SrI varane daye tOru [1]
ninna cittake baMdudE hitaveMba
unnata mati nIDu Sarva biMba
bhinna bhAvagaLolle anaMtaguNavanadhi
manadalli nI niMdu vismatiya pariharisu [2]
tavarUpa dhyAnalava biDade poMdirali
navabhakti ninnalli acCinnavAgi
pavamAna pUjita jayESaviThala
bhava kaDala dATiso ninnavaneMdu [3]
Leave a Reply