Composer : Shri Jayesha vittala
ಸಂಕರ್ಷಣನ ರಾಣಿ ವೀರದುರ್ಗೆ
ಕಿಂಕರರ ಪಾಲಿಸು ಖೂಳ ಜನ ಸಂಹಾರಿ (ಪ)
ಅಜ ಜನನಿ ಅಘನಾಶಿ ಅಮಿತ ಸದ್ಗುಣರಾಶಿ
ಕುಜನಾರಿ ಸುಗನಾಪ್ತೆ ಕಾಯೆ ತಾಯೆ (ಅ.ಪ)
ಮನದ ಖಳರಾ ಭೀತಿ ಬಹು ವೇಗ ಕೇಳಮ್ಮ
ಪ್ರಣಿತ ಜನರ ಪಾಲೆ ಕೊಲ್ಲೆ ಅವರ
ತನುಮನದಿ ನೆಲೆಸಿದ್ದು ಅನುದಿನವು ಪೊರೆ ನಮ್ಮ
ಗುಣಪೂರ್ಣ ನಿನ್ನ ಪತಿಧ್ಯಾನ ಒದಗಿಸಿ ನಲಿಯೆ [೧]
ಪತಿವ್ರತವು ನೀ ಧರಿಸಿ ಪತಿವೈರಿಗಳ ಅರಿವೆ
ಪತಿಹಿತರ ಕಾವ ಕಂಕಣವ ಕಟ್ಟಿ
ಪತಿ ಪ್ರೀತಿ ಪಡಿಸುವೆ ವೀರವ್ರತ ದೀಕ್ಷೆಯಲಿ
ಪತಿತಪಾವನೆ ನೀನೆ ಕಾವಲಮ್ಮಾ ನಮಗೆ [೨]
ಕಲಿಯಲ್ಲಿ ಖಳಕೂಟ ಬಲು ಪ್ರಬಲ ಅತಿಕ್ರೂರ
ಉಳಿಯಲೀಯರು ದೇವಿ ಸುಜನರನ್ನು
ಬಲುಹೀನರೆಂತೆಂದು ಬಲು ಬಾಧೆ ಪಡಿಸುವರು
ಪ್ರಳಯಗೈಸವರನ್ನು ಪಾಲಿಸು ನಿನ್ನವರ [೩]
ಅಜ್ಞಾನಮನ ತನುಕರಣ ಆಲಯದ ಅರಿಗಳ
ಆಸಕ್ತ ಚಾರಿಗಳ ಬಿಡದೆ ಮಡುಹಿ
ಆನಂದ ಮುನಿ ತಾಯೆ ಜಯೇಶವಿಠಲನ
ಆನಂದ ನಿಜಕರುಣ ಬೆರಿಸಮ್ಮ ನಮ್ಮಲ್ಲಿ [೪]
saMkarShaNana rANi vIradurge
kiMkarara pAlisu KULa jana saMhAri (pa)
aja janani aGanASi amita sadguNarASi
kujanAri suganApte kAye tAye (a.pa)
manada KaLarA BIti bahu vEga kELamma
praNita janara pAle kolle avara
tanumanadi nelesiddu anudinavu pore namma
guNapUrNa ninna patidhyAna odagisi naliye [1]
pativratavu nI dharisi pativairigaLa arive
patihitara kAva kaMkaNava kaTTi
pati prIti paDisuve vIravrata dIkSheyali
patitapAvane nIne kAvalammA namage [2]
kaliyalli KaLakUTa balu prabala atikrUra
uLiyalIyaru dEvi sujanarannu
baluhInareMteMdu balu bAdhe paDisuvaru
praLayagaisavarannu pAlisu ninnavara [3]
aj~jAnamana tanukaraNa Alayada arigaLa
Asakta cArigaLa biDade maDuhi
AnaMda muni tAye jayESaviThalana
AnaMda nijakaruNa berisamma nammalli [4]
Leave a Reply