Composer : Shri Jayesha vittala
ಸಾಧನದ ಚಿಂತೆ ಎನಗ್ಯಾಕೊ ದೇವ
ಮಾಧವನೆ ಮನ್ನಾಮ ಧರಿಸಿ ಮಾಡುವ ನೀನೆ [ಪ]
ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊ
ಅನ್ಯಥಾ ಬೇರಿಲ್ಲ ಪರಮಪುರುಷ
ಎನ್ನ ತನು ಮನ ಕರಣ ತ್ರಯಗಳಲಿ ನೀ ಮಾಳ್ಪೆ
ಅನ್ಯ ಸಾಧನವ್ಯಾಕೊ ಪಾವನ್ನ ಸಚ್ಚರಿತ [೧]
ನಡೆವುದೇ ಯಾತ್ರೆಯು ನುಡಿವುದೇ ಸ್ತೋತ್ರವು
ಬಿಡದೆ ನೋಡುವುದೆಲ್ಲ ನಿನ್ನ ಮೂರ್ತಿ
ಒಡನೆ ಕೇಳುವ ಶಬ್ದ ನಿನ್ನ ಮಂಗಳ ಕೀರ್ತಿ
ಪಡುವ ಭೋಗಗಳೆಲ್ಲ ನಿನಗೆ ಉಪಚಾರ [೨]
ಪಾಪ ತೊಳೆವುದಕಿನ್ನು ದುಃಖ ಪ್ರಾಯಶ್ಚಿತ್ತ
ತಾಪ ಯೋಚನೆಯೆಲ್ಲ ತಪಸು ವಿಭುವೆ
ಗೋಪ ಚೂಡಾರತ್ನ ಜಯೇಶವಿಠ್ಠಲ
ಈ ಪಾತ್ರದೊಳು ನಿಂತು ನೀ ಮಾಳ್ಪೆ ಸಾಧನವ [೩]
sAdhanada ciMte enagyAko dEva
mAdhavane mannAma dharisi mADuva nIne [pa]
ninna cittake baMda anuBavave sAdhanavo
anyathA bErilla paramapuruSha
enna tanu mana karaNa trayagaLali nI mALpe
anya sAdhanavyAko pAvanna saccarita [1]
naDevudE yAtreyu nuDivudE stOtravu
biDade nODuvudella ninna mUrti
oDane kELuva Sabda ninna maMgaLa kIrti
paDuva BOgagaLella ninage upacAra [2]
pApa toLevudakinnu duHKa prAyaScitta
tApa yOcaneyella tapasu viBuve
gOpa cUDAratna jayESaviThThala
I pAtradoLu niMtu nI mALpe sAdhanava [3]
Leave a Reply