Composer : Shri Jayesha vittala
ನೀ ಬುದ್ಧಿ ಕೊಡದಿರಲು ಜೀವ ಪಶುವೊ ||ಪ||
ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ||ಅ ಪ||
ಸೃಷ್ಟಿಗೆ ಬರಲಿನ್ನು ಜೀವ ಯತ್ನವು ಉಂಟೆ
ಸೃಷ್ಟಿ ಸ್ತಿತಿ ಲಯ ಕರ್ತ ತಿಳಿಯೊ ನೀನು
ಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾವಿರಲು
ಸೃಷ್ಟಿಯಲು ನಮ್ಮೆತ್ನ ಕಲ್ಪಿಸುವುದೆಂತಯ್ಯ [೧]
ಜಡ ಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದು
ಒಡೆಯಾ ನಮ್ಮೆತ್ನವೇ ಸತ್ಯ ಕೇಳೊ
ಕಡುನಿದ್ರೆಯಲಿ ಜೀವ ನಿಶ್ಚೇಷ್ಟನಾಗಿರಲು
ಬಿಡದೆ ದಿನದಿನದಲ್ಲಿ ಎಚ್ಚರಿಕೆ ಆರಿಂದ [೨]
ಇಂತಿರಲು ನಿಜತತ್ವ ಎಂಥ ಶಕ್ತಿಯೊ ನಮಗೆ
ಸ್ವಾಂತ ಮಂಗಳ ಸುಗುಣ ನಿಧಿಯೆ ಪೇಳೊ
ಭ್ರಾಂತಿ ಜೀವನ ಬಿಡಿಸಿ ಜಯೇಶವಿಠಲ
ಶಾಂತಿ ಪಾಲಿಸು ನಮಗೆ ಭಾರವಾಂತು ನೀನೆ [೩]
nI buddhi koDadiralu jIva paSuvo ||pa||
SrI BUmi durgESa gOviMda paripUrNa ||a pa||
sRuShTige baralinnu jIva yatnavu uMTe
sRuShTi stiti laya karta tiLiyo nInu
moTTa modalige ninna vaSanAgi nAviralu
sRuShTiyalu nammetna kalpisuvudeMtayya [1]
jaDa janmadiMdale dvija janma baMdihudu
oDeyA nammetnavE satya kELo
kaDunidreyali jIva niScEShTanAgiralu
biDade dinadinadalli eccarike AriMda [2]
iMtiralu nijatatva eMtha Saktiyo namage
svAMta maMgaLa suguNa nidhiye pELo
BrAMti jIvana biDisi jayESaviThala
SAMti pAlisu namage bhAravAMtu nIne [3]
Leave a Reply