Composer : Shri Purandara dasaru
ಶರಣು ಶರಣು ಶರಣ್ಯವಂದಿತ
ಶಂಖಚಕ್ರ ಗದಾಧರ | ಶರಣು ಸರ್ವೇಶ್ವರ
ಅಹೋಬಲ ಶರಣು ಸಲಹೋ ನರಹರಿ [ಪ]
ಶೀಲದಲಿ ಶಿಶು ನಿನ್ನ ನೆನೆಯಲು ಕಾಲಲೋತ್ತುತ
ಖಳರನು | ಲೀಲೆಯಿಂದಲಿ ಚಿಟಿಲು ಭುಗಿಭುಗಿ –
ಲೆನುತ ಉಕ್ಕಿನ ಕಂಬದಿ |
ಖೂಳದೈತ್ಯನ ತೋಳಿನಿಂದಲಿ ಸೀಳಿ
ಹೊಟ್ಟೆಯ ಕರುಳನು | ಮಾಲೆಯನು
ಕೊರಳೊಳಗೆ ಧರಿಸಿದ ಜ್ವಾಲ
ನರಸಿಂಹಮೂರ್ತಿಗೆ (೧)
ಖಳಖಳಾ ಖಳನೆಂದು ಕೂಗಲು
ಕೋಟಿ ಸಿಡಿಲಿನ ರಭಸದಿ | ಜಲಧಿ
ಗುಳಗುಳನೆದ್ದು ಉಕ್ಕಲು
ಜ್ವಲಿತ ಕುಲಗಿರಿ ಉರುಳಲು | ನೆಲನು
ಬಳಬಳನೆಂದು ಬಿರಿಯಲು
ಕೆಳಗೆ ದಿಗ್ಗಜ ನಡುಗಲು |
ಥಳ ಥಳಾ ಥಳ ಹೊಳೆವ ಮಿಂಚಿನೊಲ್-
ಹೊಳೆವ ನರಸಿಂಹ ಮೂರ್ತಿಗೆ (೨)
ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ –
ಬಾಯಿ ಮೂಗಿನ ಶ್ವಾಸದಿ |
ಮೇರುಗಿರಿ ಮಿಗಿಮಿಗಿಲು ಮಿಕ್ಕುವ
ತೋರ ಕಿಡಿಗಳ ಸೂಸುತ | ಸಾರಿಸಾರಿಗೆ
ಹೃದಯ ರಕುತವ ಸೂರೆ ಸುರಿಸುರಿದೆರಗುತ |
ಘೋರ ರೂಪಗಳಿಂದ ಮೆರೆಯುವ
ಧೀರ ನರಹರಿಮೂರ್ತಿಗೆ (೩)
ಹರನು ವಾರಿಜಭವನು ಕರಗಳ
ಮುಗಿದು ಜಯಜಯವೆನುತಿರೆ | ತರಳ
ಪ್ರಹ್ಲಾದನಿಗೆ ತಮ್ಮಯ
ಶರಿರ ಬಾಧೆಯ ಪೇಳಲು |
ಕರುಣಿ ಎನ್ನನು ಕರುಣಿಸೆನ್ನಲು
ತ್ವರದಲಭಯವ ನೀಡುತ | ಸಿರಿಬರಲು ತೊಡೆಯಲ್ಲಿ
ಧರಿಸಿದ ಶಾಂತ ನರಹರಿಮೂರ್ತಿಗೆ (೪)
ವರವ ಬೇಡಿದನಿರುವ ತಂದೆಯ
ಪರಿಯನೆಲ್ಲವ ಬಣ್ಣಿಸಿ | ನಿರುತದಲಿ
ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ |
ಸುರರು ಪುಷ್ಪದ ವೃಷ್ಟಿಗರೆಯಲು
ಸರಸಿಜಾಕ್ಷನು ಶಾಂತದಿ |
ಸಿರಿಯ ಸುಖವನು ಮರೆದಹೋಬಲ
ವರದ ಪುರಂದರವಿಠಲಗೆ (೫)
SaraNu SaraNu SaraNyavaMdita
SaMKacakra gadAdhara | SaraNu sarvESvara
ahObala SaraNu salahO narahari [pa]
SIladali SiSu ninna neneyalu kAlalOttuta
KaLaranu | lIleyiMdali ciTilu BugiBugi –
lenuta ukkina kaMbadi |
KULadaityana tOLiniMdali sILi
hoTTeya karuLanu | mAleyanu
koraLoLage dharisida jvAla
narasiMhamUrtige (1)
KaLaKaLA KaLaneMdu kUgalu
kOTi siDilina raBasadi | jaladhi
guLaguLaneddu ukkalu
jvalita kulagiri uruLalu | nelanu
baLabaLaneMdu biriyalu
keLage diggaja naDugalu |
thaLa thaLA thaLa hoLeva miMcinol-
hoLeva narasiMha mUrtige (2)
kOre keMjeDe kaNNu kivi tere –
bAyi mUgina SvAsadi |
mErugiri migimigilu mikkuva
tOra kiDigaLa sUsuta | sArisArige
hRudaya rakutava sUre surisurideraguta |
GOra rUpagaLiMda mereyuva
dhIra naraharimUrtige (3)
haranu vArijaBavanu karagaLa
mugidu jayajayavenutire | taraLa
prahlAdanige tammaya
Sarira bAdheya pELalu |
karuNi ennanu karuNisennalu
tvaradalaBayava nIDuta | siribaralu toDeyalli
dharisida SAMta naraharimUrtige (4)
varava bEDidaniruva taMdeya
pariyanellava baNNisi | nirutadali
ninneraDu toDeyali SarIraviraleMdenutali |
suraru puShpada vRuShTigareyalu
sarasijAkShanu SAMtadi |
siriya suKavanu maredahObala
varada puraMdaraviThalage (5)
Leave a Reply