Composer : Shri Purandara dasaru
ಕರುಣಿಸು ನರಹರಿ ಹರಿಗೋವಿಂದ
ನರಜನರಿಗೆ ಮೆಚ್ಚಿ ಸಲಹೋ ಮುಕುಂದ ||ಪ||
ಮಾತುಗಳಾಡದೆ ಮೌನದಿಂದಿದ್ದರೆ
ಭೂತ ಬಡೆದವನೆಂದು ಕರೆಯುವರೊ
ಚಾತುರ್ಯದಿಂದಲಿ ಮಾತುಗಳಾಡಲು
ಪಿತ್ತೇರಿ ಬಲು ಬಾಯಿಬಡಕನೆಂಬುವರಯ್ಯ |೧|
ಬಲು ಚೆನ್ನಿಗತನವ ತಾನು ಮಾಡಲು
ಬಲು ಹಮ್ಮಿಗನೆಂದು ಬೈಯುವರೊ
ಸುಲಭದಿಂದಲಿ ನಿಗರ್ವಿಯಾಗಿದ್ದರೆ
ಕಲಿಯುಗದಲಿ ಮಂದಮತಿ ಯೆಂಬುವರಯ್ಯ |೨|
ಮಡಿಯೆಂದು ನೇಮವ ಮಾಡುತಲಿದ್ದರೆ
ಮಡಿಯವನೆಂದು ಬೈಯುವರಯ್ಯ
ಮಡಿನೇಮ ಜಪತಪ ಬಿಟ್ಟು ತಿರುಗಲಾಗಿ
ನಡತೆಹೀನನೆಂದು ನಿಂದಿಸುತಿಹರೊ ||
ನಿಷ್ಠೆಲಿ ಒಪ್ಪತ್ತೂಟವನುಂಡರೆ
ನಿಷ್ಠೆಯತನ ಸುಟ್ಟಿತೆಂಬೋರು
ಘಟ್ಟ್ಯಾಗಿ ಎರಡು ಮೂರು ಬಾರಿ ಉಂಡರೆ
ಹೊಟ್ಟೆಹೊರಕನೆಂದು ಬೈಯುವರಯ್ಯ |೩|
ನರಲೋಕದೊಳಗಿನ್ನು ಪುಟ್ಟಿಸದಿರು , ನಿನ್ನ
ಮೊರೆಯ ಹೊಕ್ಕೆನೊ ಮೋಕ್ಷದಾಯಕನೆ
ಅರವಿಂದನಯನ ಶ್ರೀಪುರಂದರವಿಠಲ
ಕರುಣದಿಂದಲಿ ನೀ ರಕ್ಷಿಸೊ ಎನ್ನ |೪|
karuNisu narahari harigOviMda
narajanarige mecci salahO mukuMda ||pa||
mAtugaLADade maunadiMdiddare
BUta baDedavaneMdu kareyuvaro
cAturyadiMdali mAtugaLADalu
pittEri balu bAyibaDakaneMbuvarayya |1|
balu cennigatanava tAnu mADalu
balu hammiganeMdu baiyuvaro
sulaBadiMdali nigarviyAgiddare
kaliyugadali maMdamati yeMbuvarayya |2|
maDiyeMdu nEmava mADutaliddare
maDiyavaneMdu baiyuvarayya
maDinEma japatapa biTTu tirugalAgi
naDatehInaneMdu niMdisutiharo ||
niShTheli oppattUTavanuMDare
niShTheyatana suTTiteMbOru
GaTTyAgi eraDu mUru bAri uMDare
hoTTehorakaneMdu baiyuvarayya |3|
naralOkadoLaginnu puTTisadiru , ninna
moreya hokkeno mOkShadAyakane
araviMdanayana SrIpuraMdaraviThala
karuNadiMdali nI rakShiso enna |4|
Leave a Reply