Rama kathamruta

Composer : Shri Jagannatha dasaru

Smt.Vijaya Sriganesh

ರಾಮಕಥಾಮೃತ

ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆ
ದಶರಥನ ಗರ್ಭದಲಿ ಜನಿಸಿಬಂದೆ ||೧||

ಶಿಶುವಾಗಿ ಕೌಸಲ್ಯೆಗೆ ಬಾಲಲೀಲೆಯತೋರ್ದು
ಕುಶಲದಿಂ ನಾಲ್ವರ ಕೂಡಿ ಬೆಳೆದೆ ||೨||

ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದು
ವಸುಧೆಯೊಳು ಶಿಲೆಯನ್ನು ಸತಿಯ ಮಾಡಿ ||೩||

ಮಿಥಿಲ ಪಟ್ಟಣಕೈದಿ ಮೃಡನ ಧನುವನೆ ಮುರಿದು
ಶಶಿಮುಖಿ ಜಾನಕಿಯ ಕರವ ಪಿಡಿದು ||೪||

ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿ
ದಶರಥಗೆ ಏಕೀಭಾವವನೆ ತೋರಿ ||೫||

ಪರಮ ಹರುಷದಲಿ ಸಾಕೇತನಗರಿಗೆ ಬಂದು
ಕಿರಿಯ ಮಾತೆಯ ಕಠಿಣ ನುಡಿ ಕೇಳಿ ||೬||

ಚಿತ್ರಕೂಟಕೆ ಬಂದು ಕೃತ್ಯವೆಲ್ಲವ ನಡೆಸಿ
ಭ್ರಾತೃ ಭರತನಿಗೆ ಪಾದುಕೆನಿತ್ತು ||೭||

ವನದೊಳಗೆ ಸಂಚರಿಸಿ ಘನಕಾರ್ಯಗಳ ಮಾಡಿ
ಹನುಮನ ಕಳುಹಿ ಮುದ್ರಿಕೆಯ ಕೊಡಲು ||೮||

ಮಿತ್ರೆ ಜಾನಕಿಗರುಹಿ ರತ್ನಕೊಂಡು ಬರಲು
ಅತ್ಯಂತ ಹರುಷದಲಿ ಶರಧಿ ಕಟ್ಟಿ ||೯||

ದುಷ್ಟ ರಾಕ್ಷಸ ಕುಲವ ಕುಟ್ಟಿ ಬೇರನೆ ಸವರಿ
ಸೃಷ್ಠಸಿತೆ ಜಾನಕಿಯ ಅಗ್ನಿ ಹೊಗಿಸಿ ||೧೦||

ಪಟ್ಟಣಕೆ ಬಂದು ಭರತನಿಗೆ ಪೇಳೆ
ಅಷ್ಟಗಂಗೆ ಉದಕವನೆ ತಂದು ||೧೧||

ಅಷ್ಟ ಋಷಿಗಳು ಎಲ್ಲ ಕೂಡಿಕೊಂಡು
ಪಟ್ಟಾಭಿಷೇಕವನು ಮಾಡುತಿರಲ್ದು ||೧೨||

ಸೃಷ್ಠಿಯೊಳು ಜಗನ್ನಾಥವಿಟ್ಠಲನಿಗೆ ಪುಷ್ಪ
ವೃಷ್ಠಿಗಳನ್ನು ಕರೆದರಾಗ ||೧೩||


rAmakathAmRuta

asura bAdhisutiralu RuShigaLu stutimADe
daSarathana garBadali janisibaMde ||1||

SiSuvAgi kausalyege bAlalIleyatOrdu
kuSaladiM nAlvara kUDi beLede ||2||

asurarane baDidaTTi RuShiya yAgava kAydu
vasudheyoLu Sileyannu satiya mADi ||3||

mithila paTTaNakaidi mRuDana dhanuvane muridu
SaSimuKi jAnakiya karava piDidu ||4||

pathadoLage baruta BArgavaroDane hOrADi
daSarathage EkIBAvavane tOri ||5||

parama haruShadali sAkEtanagarige baMdu
kiriya mAteya kaThiNa nuDi kELi ||6||

citrakUTake baMdu kRutyavellava naDesi
BrAtRu Baratanige pAdukenittu ||7||

vanadoLage saMcarisi GanakAryagaLa mADi
hanumana kaLuhi mudrikeya koDalu ||8||

mitre jAnakigaruhi ratnakoMDu baralu
atyaMta haruShadali Saradhi kaTTi ||9||

duShTa rAkShasa kulava kuTTi bErane savari
sRuShThasite jAnakiya agni hogisi ||10||

paTTaNake baMdu Baratanige pELe
aShTagaMge udakavane taMdu ||11||

aShTa RuShigaLu ella kUDikoMDu
paTTABiShEkavanu mADutiraldu ||12||

sRuShThiyoLu jagannAthaviTThalanige puShpa
vRuShThigaLannu karedarAga ||13||

Leave a Reply

Your email address will not be published. Required fields are marked *

You might also like

error: Content is protected !!