Poshisu ennaya

Composer : Shri Shyamasundara dasaru on Modalkal Sheshadasaru

By Smt.Shubhalakshmi Rao

ಪೋಷಿಸು ಎನ್ನಯ ದೋಷಗಳೆಣಿಸದೆ ದಾಸರಾಯ |
ಶೇಷ ನಾಮಕನೆ ವಿಶೇಷ ಜ್ಞಾನವನೀಯೋ ದಾಸರಾಯ |ಅ.ಪ|

ಸಂತತ ಕರಪಿಡಿ ಸಂತರೊಡೆಯ ಗುರು ದಾಸರಾಯ |
ಸಂತೋಷ ತೀರ್ಥರ ಅಂತಃಕರಣ ಪಾತ್ರ ದಾಸರಾಯ |
ಚಿಂತಿಪ ಜನರಿಗೆ ಚಿಂತಾಮಣಿಯು ನೀನೆ ದಾಸರಾಯ |
ಚಿಂತರಹಿತ ವರ ಚಿಂತರವೇಲಿವಾಸ ದಾಸರಾಯ |೧|

ಕುಂಭಿಣಿ ದೇವಿ ಕದಂಬ ಸಂಸೇವಿತ ದಾಸರಾಯ |
ಬೆಂಬಿಡದಲೆ ಮನದ ಹಂಬಲ ಪೂರೈಸು ದಾಸರಾಯ |
ನಂಬಿದ ದ್ವಿಜರಿಗೆ ಶಂಬು ಗಿರಿಯಲ್ಲಿ ದಾಸರಾಯ |
ಬಾಂಬೊಳೆ ತೋರಿಸಿ ಸಂಭ್ರಮ ಗೊಳಿಸಿದಿ ದಾಸರಾಯ |೨|

ಹರಿಕೇತು ಹರಿಸುತ ಹರಿಣಾಂಕ ಕುಲಜಾತ ದಾಸರಾಯ |
ಹರಿಕೇತು ಹರಿ ಸುತಾದ್ಯರನ ಸಂಹರಿಸಿದೆ ದಾಸರಾಯ |
ಹರಿದಾಡುತಿಹ ಮನ ಹರಿಯಲ್ಲಿ ನಿಲಿಸಯ್ಯ ದಾಸರಾಯ |
ಹರಿ ವೈರಿ ಮತಕರಿ ಹರಿ ಪರಿಹರಿಸಘ ದಾಸರಾಯ |೩|

ಅರ್ಥಿಜನರ ಇಷ್ಟಾರ್ಥವ ಜಗದೊಳು ದಾಸರಾಯ |
ಪೂರ್ತಿಸುವ ನಿನ್ನ ವಾರ್ತಿ ಕೇಳಿ ಬಂದೆ ದಾಸರಾಯ |
ಪಾರ್ಥಿವ ವರುಷದಿ ಪಾರ್ಥಸಾರಥಿ ಭವ್ಯ ದಾಸರಾಯ |
ಮೂರ್ತಿಯ ಸ್ಥಾಪಿಸಿ ಕೀರ್ತಿ ಪಡೆದ ದಿವ್ಯ ದಾಸರಾಯ |೪|

ನೇಮ ನಿಷ್ಠೆಯ ಬಿಟ್ಟು ಪಾಮರ ನಾದೆನಗೆ ದಾಸರಾಯ |
ಶ್ರೀಮಧ್ವ ನಿಗಮಾರ್ಥ ಪ್ರೇಮದಿ ತಿಳಿಸಯ್ಯ ದಾಸರಾಯ |
ಕಾಮಾದಿ ಷಡ್ವೈರಿ ಸ್ತೋಮಾದ್ರಿ ಕುಲಿಶನೆ ದಾಸರಾಯ |
ಕಾಮಿತ ಫಲದಾತ ಶಾಮಸುಂದರ ಸೂತ ದಾಸರಾಯ |೫|


pOShisu ennaya dOShagaLeNisade dAsarAya |
SESha nAmakane viSESha j~jAnavanIyO dAsarAya |a.pa|

saMtata karapiDi saMtaroDeya guru dAsarAya |
saMtOSha tIrthara aMtaHkaraNa pAtra dAsarAya |
ciMtipa janarige ciMtAmaNiyu nIne dAsarAya |
ciMtarahita vara ciMtaravElivAsa dAsarAya |1|

kuMbhiNi dEvi kadaMba saMsEvita dAsarAya |
beMbiDadale manada haMbala pUraisu dAsarAya |
naMbida dvijarige shaMbu giriyalli dAsarAya |
bAMboLe tOrisi saMbhrama goLisidi dAsarAya |2|

harikEtu harisuta hariNAMka kulajAta dAsarAya |
harikEtu hari sutAdyarana saMhariside dAsarAya |
haridADutiha mana hariyalli nilisayya dAsarAya |
hari vairi matakari hari pariharisagha dAsarAya |3|

arthijanara iShTArthava jagadoLu dAsarAya |
pUrtisuva ninna vArti kELi baMde dAsarAya |
pArthiva varuShadi pArthasArathi bhavya dAsarAya |
mUrtiya sthApisi kIrti paDeda divya dAsarAya |4|

nEma niShTheya biTTu pAmara nAdenage dAsarAya |
SrImadhva nigamArtha prEmadi tiLisayya dAsarAya |
kAmAdi ShaDvairi stOmAdri kuliSane dAsarAya |
kAmita phaladAta shAmasuMdara sUta dAsarAya |5|

Leave a Reply

Your email address will not be published. Required fields are marked *

You might also like

error: Content is protected !!