Kamala sambhava nasika

Composer : Shri Vijayadasaru

By Smt.Shubhalakshmi Rao

ಕಮಲ ಸಂಭವ ನಾಸಿಕಾ | ಸಂಭವ ಕಾಯೋ |
ನಮಿಸುವೆ ನಿನಗೆ ನಾನು || ಪ||

ಅಂದು ಧರಿಣಿ ಜಲ |ವಂದಾಗಿ ಕರಗಿರೇ |
ನಂದನ ಚಿಂತಿಸೆ | ಬಂದ ವರಾಹಮೂರ್ತಿ || ೧ ||

ಮಧುಪಾನಾವನ | ಸಾ |ದುದು ಅವನ ಚರ್ಮ |
ಹೊದಿಸಿ ಹೆಪ್ಪುಗೊಟ್ಟು | ಮೇದಿನಿ ಎಂದಿನಿಸಿದೆ ||೨ ||

ಕನಕಲೋಚನ ಭೂಮಿಯನು ಕದ್ದು ವೈಯ್ಯಲು |
ಅನಿಮಿಷರೊಲಿಸೆ ಅವನ ಕೊಂದುದ್ಧರಿಸಿದೆ ||೩||

ಕರುಣಾಕಟಾಕ್ಷದಿ ಹೊರವಲ್ಲಿ ನಾನೆಲ್ಲಿ |
ಸರಿಗಾಣೆ ನಿನಗೆ ಅಂತರ ಬಹಿರದೊಳು || ೪ ||

ರಜೋಭಿಮಾನಿಯ ವಡಿಯಾ ಸುಜನಪಾಲಾ |
ಭುಜಗ ಗಿರಿಯ ವಾಸಾ ವಿಜಯವಿಠ್ಠಲಾಧೀಶಾ || ೫ ||


kamala saMBava nAsikA | saMBava kAyO |
namisuve ninage nAnu || pa||

aMdu dhariNi jala |vaMdAgi karagirE |
naMdana ciMtise | baMda varAhamUrti || 1 ||

madhupAnAvana | sA |dudu avana carma |
hodisi heppugoTTu | mEdini eMdiniside ||2 ||

kanakalOcana BUmiyanu kaddu vaiyyalu |
animiSharolise avana koMduddhariside ||3||

karuNAkaTAkShadi horavalli nAnelli |
sarigANe ninage aMtara bahiradoLu || 4 ||

rajOBimAniya vaDiyA sujanapAlA |
Bujaga giriya vAsA vijayaviThThalAdhISA || 5 ||

Leave a Reply

Your email address will not be published. Required fields are marked *

You might also like

error: Content is protected !!