Dasaraya poshisennanu

Composer : Shri Karpara narahari dasaru on Modalkal Sheshadasaru

By Smt.Shubhalakshmi Rao

ದಾಸರಾಯ ಪೋಷಿನೆನ್ನನ್ನು | ಪ್ರಾರ್ಥಿಸುವೆ |
ಶೇಷದಾಸವರ್ಯ ಪೋಷಿಸೆನ್ನನು || ಪ ||

ಪೋಷಿಸೆನ್ನ ಮನದಿ ಬಹ |
ದೋಷಗಳನು ತರಿದು | ಇಂದಿ |
ರೇಶನಂಘ್ರಿ ಧ್ಯಾನವ ಪ್ರತಿ |
ವಾಸರದಲಿ ಒದಗುವಂತೆ || ಅ. ಪ ||

ದೇಶ ದೇಶಗಳಲಿ ಭಜಿಪ |
ದಾಸ ಜನರ ಮನದ | ಅಭಿ |
ಲಾಷೆಗಳನು ಸಲಿಸುತಲಿ | ಸು |
ರೇಶನಂತೆ ಮೆರೆದ ಶೇಷ ||೧ ||

ಮಂದನಾದರೂ ನಿಮ್ಮಯ ಪದ |
ದ್ವಂದ್ವ ಭಜಿಸೆ ಜಗದಿ | ಪ್ರಾಜ್ಞ |
ನೆಂದು ಕರೆಸುವೆನು ಯೆನುತ ನಾ |
ವಂದಿಸುವೆ ಸುಜ್ಞಾನವಿತ್ತು || ೨ ||

ಕರುಣ ಶರಧೆ ನಿಮ್ಮ ನಾನು |
ಸ್ಮರಣೆ ಮಾತ್ರದಿ ಭೂತ ಪ್ರೇತ| ಗ |
ಳಿರದೆ ಪೋಪವು ಶರಣು ಜನರ |
ದುರಿತ ಘನಕೆ ಮರುತರೆನಿಪ ||೩||

ಈ ಮಹಿಯೊಳಗಾದಿ ಶಿಲೆಯ |
ಸ್ವಾಮಿಯ ಪದದಿನೆ ತ್ರಿಪಥ |
ಗಾಮಿನಿಯಳ ತೋರಿ ಸ್ವಜನ |
ಕಾಮಿತವ ಪೂರೈಸಿದಂತೆ ||೪||

ಶೇರಿದ ಪರಿವಾರಕ್ಕೆ ಸುರ |
ಭೂರುಹವೆಂದೆನಿಸುವಂಥಾ |
ಪಾರ ಮಹಿಮ ಕಾರ್ಪರ ಸಿರಿ |
ನರಸಿಂಹನ ನೊಲಿಸಿದಂಥಾ || ೫ ||


dAsarAya pOShinennannu | prArthisuve |
SEShadAsavarya pOShisennanu || pa ||

pOShisenna manadi baha |
dOShagaLanu taridu | iMdi |
rESanaMGri dhyAnava prati |
vAsaradali odaguvaMte || a. pa ||

dESa dESagaLali Bajipa |
dAsa janara manada | aBi |
lAShegaLanu salisutali | su |
rESanaMte mereda SESha ||1 ||

maMdanAdarU nimmaya pada |
dvaMdva Bajise jagadi | prAj~ja |
neMdu karesuvenu yenuta nA |
vaMdisuve suj~jAnavittu || 2 ||

karuNa Saradhe nimma nAnu |
smaraNe mAtradi BUta prEta| ga |
Lirade pOpavu SaraNu janara |
durita Ganake marutarenipa ||3||

I mahiyoLagAdi Sileya |
svAmiya padadine tripatha |
gAminiyaLa tOri svajana |
kAmitava pUraisidaMte ||4||

SErida parivArakke sura |
BUruhaveMdenisuvaMthA |
pAra mahima kArpara siri |
narasiMhana nolisidaMthA || 5 ||

Leave a Reply

Your email address will not be published. Required fields are marked *

You might also like

error: Content is protected !!