Tatva suvvali – Navagraha stotra

Composer : Shri Jagannatha dasaru

By Smt.Shubhalakshmi Rao

|| ತತ್ವಸುವ್ವಾಲಿ ||

ಗ್ರಹಸ್ತೋತ್ರಗಳು

ಶ್ರೀ ಸೂರ್ಯದೇವರ ಸ್ತೋತ್ರ

ಆದಿತ್ಯ ತ್ವತ್ಪಾದಯುಗಳಕೆ ಅಭಿ-
ವಾದನವ ಮಾಳ್ಪೆ ಅನುದಿನ |
ಅನುದಿನದಿ ಸಜ್ಜನರ
ವ್ಯಾಧಿಗಳ ಕಳೆದು ಸುಖವೀಯೋ || ೬ ||

ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನು ಸ-
ರ್ವಜ್ಞ ನೀನೆಂದು ಸರ್ವತ್ರ |
ಸರ್ವತ್ರ ಎನಗೆ ಬ್ರ-
ಹ್ಮಜ್ಞಾನ ಭಕುತಿ ಕರುಣಿಸೋ || ೭ ||

ಸೂರಿಗಮ್ಯನೆ ವಾಕ್‍ಶರೀರ ಬುದ್ಧಿ ಜವಾದ-
ಪಾರದೋಷಗಳ ಎಣಿಸದೆ |
ಎಣಿಸದೆ ಭಗವಂತ-
ನಾರಾಧನೆಯನಿತ್ತು ಕರುಣಿಸೊ || ೮ ||

ಶ್ರೀ ಚಂದ್ರದೇವರ ಸ್ತೋತ್ರ

ರೋಹಿಣೀರಮಣ ಮದ್ದೇಹಗೇಹಾದಿಗಳ
ಮೋಹಪರಿಹರಿಸಿ ಮನದಲ್ಲಿ |
ಮನದಲ್ಲೆನಗೆ ಗರುಡ-
ವಾಹನನ ಸ್ಮರಣೆಯನು ಕರುಣಿಸೋ || ೯ ||

ಕ್ಷೀರಾಬ್ಧಿಜಾತ ಮಾರಾರಿಮಸ್ತಕ ಸದನ
ವಾರಿಜೋದ್ಭವನ ಆವೇಶ |
ಆವೇಶಪಾತ್ರ ಪರಿ-
ಹಾರ ಗೈಸೆನ್ನ ಭವತಾಪ || ೧೦ ||

ದತ್ತದೂರ್ವಾಸಾನುಜಾತ್ರಿ ಸಂಭವನೆ ತ್ವ-
ದ್ಭೃತ್ಯನಾನಯ್ಯ ಎಂದೆಂದೂ |
ಎಂದೆಂದು ಪ್ರಾರ್ಥಿಸುವೆ
ಹೃತ್ತಿಮಿರ ಕಳೆದೆನ್ನ ಸಂತೈಸೋ || ೧೧ ||

ಶ್ರೀ ಅಂಗಾರಕಸ್ತುತಿ

ಕೋಲಭೂನಂದನ ಪ್ರವಾಳಸಮವರ್ಣ ಕರ
ವಾಳ ಸಮಖೇಟ ನಿಶ್ಶಂಕ |
ನಿಶ್ಶಂಕಪಾಣಿ ಗುರು-
ಮೌಳಿ ನೀ ಎನ್ನ ಸಂತೈಸೊ || ೧೨ ||

ಮಂಗಳಾಹ್ವಯನೆ ಸರ್ವೇಙ್ಗುತಜ್ಞನೆ ಅಂತ-
ರಂಗದಲಿ ಹರಿಯ ನೆನೆವಂತೆ |
ನೆನೆವಂತೆ ಕರುಣಿಸೊ
ಅಂಗಾರವರ್ಣ ಅನುದಿನ || ೧೩ ||

ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ
ಪಾಮರನಿಗಳವೇ ಎಂದೆಂದು |
ಎಂದೆಂದು ಸಜ್ಜನರ
ಕಾಮಿತಾರ್ಥವನು ಕರುಣಿಸೊ || ೧೪ ||

ಶ್ರೀ ಬುಧಸ್ತುತಿ

ಬುಧನೆ ನೀ ಸುಗುಣವಾರಿಧಿ ಎಂದು ಬಿನ್ನೈಪೆ
ಕ್ಷುಧೆಯ ಪರಿಹರಿಸಿ ಸುಜ್ಞಾನ |
ಸುಜ್ಞಾನ ಸದ್ಭಕ್ತಿ-
ಸುಧೆಯ ಪಾನವನು ಕರುಣಿಸೊ || ೧೫ ||

ಚಂದ್ರನಂದನ ಸತತ ವಂದಿಸುವೆ ಮನ್ಮನದ
ಸಂದೇಹ ಬಿಡಿಸಯ್ಯ ಮಮದೈವ |
ಮಮದೈವ ಸರ್ವ ಗೋ-
ವಿಂದನಹುದೆಂದು ತಿಳಿಸಯ್ಯ || ೧೬ ||

ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು
ತೋರೊ ಸಜ್ಜನರ ಸನ್ಮಾರ್ಗ |
ಸನ್ಮಾರ್ಗತೋರಿ ಉ-
ದ್ಧಾರಗೈಸೆನ್ನ ಭವದಿಂದ || ೧೭ ||

ಶ್ರೀ ಗುರುಸ್ತುತಿ

ನುತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನ ದು-
ರ್ಮತಿಯ ಪರಿಹರಿಸಿ ಸುಜ್ಞಾನ |
ಸುಜ್ಞಾನವಿತ್ತು ಶ್ರೀ-
ಪತಿಯ ತೋರೆನ್ನ ಮನದಲ್ಲಿ || ೧೮ ||

ಸುರರಾಜಗುರುವೆ ತ್ವಚ್ಚರಣಾರವಿಂದಗಳಿ-
ಗೆರಗಿ ಬಿನ್ನೈಪೆ ಇಳಿಯೊಳು |
ಇಳೆಯೊಳುಳ್ಳಖಿಳ ಬ್ರಾಹ್ಮ-
ಣರ ಸಂತೈಸೋ ದಯದಿಂದ || ೧೯ ||

ತಾರಾರಮಣನೆ ಮದ್ಭಾರ ನಿನ್ನದು ಮಹಾ-
ಕಾರುಣಿಕ ನೀನೆಂದು ಬಿನ್ನೈಪೆ |
ಬಿನ್ನೈಪೆ ದುರಿತವ ನಿ-
ವಾರಿಸಿ ತೋರೋ ತವ ರೂಪ || ೨೦ ||

ಶ್ರೀ ಶುಕ್ರ ಸ್ತುತಿ

ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ-
ಚಕ್ರಾಬ್ಜಪಾಣಿ ಗುಣರೂಪ |
ಗುಣರೂಪ ವ್ಯಾಪಾರ
ಪ್ರಕ್ರಿಯವ ತಿಳಿಸೋ ಪ್ರತಿದಿನ || ೨೧ ||

ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ-
ಗವತ ಭಾರತವೆ ಮೊದಲಾದ |
ಮೊದಲಾದ ಶಾಸ್ತ್ರಗಳ
ಶ್ರವಣ ಸುಖವೆನಗೆ ಕರುಣಿಸೋ || ೨೨ ||

ನಿಗಮಾರ್ಥಕೋವಿದನೆ ಭೃಗುಕುಲೋತ್ತಂಸ ಕೈ-
ಮುಗಿದು ಬೇಡುವೆನೋ ದೈವಜ್ಞ |
ದೈವಜ್ಞ ಹರಿಯ ಓ-
ಲಗದಲ್ಲಿ ಬುದ್ಧಿ ಇರಲೆಂದೂ || ೨೩ ||

ಶ್ರೀ ಶನಿಸ್ತುತಿ

ತರಣಿನಂದನ ಶನೈಶ್ಚರ ನಿನ್ನ ಪಾದಾಬ್ಜ-
ಕೆರಗಿ ಬಿನ್ನೈಪೆ ಬಹುಜನ್ಮ |
ಬಹುಜನ್ಮಕೃತಪಾಪ-
ಪರಿಹಾರಮಾಡಿ ಸುಖವೀಯೋ || ೨೪ ||

ಛಾಯಾತನುಜ ಮನ:ಕಾಯಕ್ಲೇಶಗಳಿಂದ
ಆಯಾಸ ಪಡುವಂಥ ಸಮಯದಿ |
ಸಮಯದಲಿ ಲಕ್ಷ್ಮಿನಾ-
ರಾಯಣನ ಸ್ಮರಣೆಕರುಣಿಸೋ || ೨೫ ||

ಇದನೆ ಬೇಡುವೆ ಪದೋಪದಿ ಪುಷ್ಕರನ ಗುರುವೆ
ಹೃದಯ ವದನದಲಿ ಹರಿಮೂರ್ತಿ |
ಹರಿಮೂರ್ತಿ ಕೀರ್ತನೆಗ-
ಳೊದಗಲೆನಗೆಂದು ಬಿನ್ನೈಪೆ || ೨೬ ||

ಅಹಿಕಪಾರತ್ರಿಕದಿ ನೃಹರಿದಾಸರ ನವ-
ಗ್ರಹದೇವತೆಗಳು ದಣಿಸೋರೇ |
ದಣಿಸೋರೆ ಇವರನ್ನ
ಅಹಿತರೆಂದೆನುತ ಕೆಡಬೇಡಿ || ೨೭ ||

ಜಗನ್ನಾಥ ವಿಠ್ಠಲನ ಬದಿಗರಿವರಹುದೆಂದು
ಹಗಲಿರಳು ಬಿಡದೆ ನುತಿಸುವ |
ನುತಿಸುವ ಮಹಾತ್ಮರಿಗೆ
ಸುಗತಿಗಳನಿತ್ತು ಸಲಹೋರು ||೨೮||


|| tatvasuvvAli ||

grahastOtragaLu

SrI sUryadEvara stOtra

Aditya tvatpAdayugaLake aBi-
vAdanava mALpe anudina |
anudinadi sajjanara
vyAdhigaLa kaLedu suKavIyO || 6 ||

saMj~jAramaNa ninage vij~jApisuvenu sa-
rvaj~ja nIneMdu sarvatra |
sarvatra enage bra-
hmaj~jAna Bakuti karuNisO || 7 ||

sUrigamyane vAk^SarIra buddhi javAda-
pAradOShagaLa eNisade |
eNisade BagavaMta-
nArAdhaneyanittu karuNiso || 8 ||

SrI caMdradEvara stOtra

rOhiNIramaNa maddEhagEhAdigaLa
mOhapariharisi manadalli |
manadallenage garuDa-
vAhanana smaraNeyanu karuNisO || 9 ||

kShIrAbdhijAta mArArimastaka sadana
vArijOdBavana AvESa |
AvESapAtra pari-
hAra gaisenna BavatApa || 10 ||

dattadUrvAsAnujAtri saMBavane tva-
dBRutyanAnayya eMdeMdU |
eMdeMdu prArthisuve
hRuttimira kaLedenna saMtaisO || 11 ||

SrI aMgArakastuti

kOlaBUnaMdana pravALasamavarNa kara
vALa samaKETa niSSaMka |
niSSaMkapANi guru-
mauLi nI enna saMtaiso || 12 ||

maMgaLAhvayane sarvE~ggutaj~jane aMta-
raMgadali hariya nenevaMte |
nenevaMte karuNiso
aMgAravarNa anudina || 13 ||

BaumarAjane tvanmahAmahime tutisalke
pAmaranigaLavE eMdeMdu |
eMdeMdu sajjanara
kAmitArthavanu karuNiso || 14 ||

SrI budhastuti

budhane nI suguNavAridhi eMdu binnaipe
kShudheya pariharisi suj~jAna |
suj~jAna sadBakti-
sudheya pAnavanu karuNiso || 15 ||

caMdranaMdana satata vaMdisuve manmanada
saMdEha biDisayya mamadaiva |
mamadaiva sarva gO-
viMdanahudeMdu tiLisayya || 16 ||

tArAtmajane macCarIradoLu nelegoMDu
tOro sajjanara sanmArga |
sanmArgatOri u-
ddhAragaisenna BavadiMda || 17 ||

SrI gurustuti

nutisi bEDuve bRuhaspati guruve enna du-
rmatiya pariharisi suj~jAna |
suj~jAnavittu SrI-
patiya tOrenna manadalli || 18 ||

surarAjaguruve tvaccaraNAraviMdagaLi-
geragi binnaipe iLiyoLu |
iLeyoLuLLaKiLa brAhma-
Nara saMtaisO dayadiMda || 19 ||

tArAramaNane madBAra ninnadu mahA-
kAruNika nIneMdu binnaipe |
binnaipe duritava ni-
vArisi tOrO tava rUpa || 20 ||

SrI Sukra stuti

SakrArigaLa guruve SukramunirAya dara-
cakrAbjapANi guNarUpa |
guNarUpa vyApAra
prakriyava tiLisO pratidina || 21 ||

kavikulOttaMsa BArgava bEDikoMbe BA-
gavata BAratave modalAda |
modalAda SAstragaLa
SravaNa suKavenage karuNisO || 22 ||

nigamArthakOvidane BRugukulOttaMsa kai-
mugidu bEDuvenO daivaj~ja |
daivaj~ja hariya O-
lagadalli buddhi iraleMdU || 23 ||

SrI Sanistuti

taraNinaMdana SanaiScara ninna pAdAbja-
keragi binnaipe bahujanma |
bahujanmakRutapApa-
parihAramADi suKavIyO || 24 ||

CAyAtanuja mana:kAyaklESagaLiMda
AyAsa paDuvaMtha samayadi |
samayadali lakShminA-
rAyaNana smaraNekaruNisO || 25 ||

idane bEDuve padOpadi puShkarana guruve
hRudaya vadanadali harimUrti |
harimUrti kIrtanega-
LodagalenageMdu binnaipe || 26 ||

ahikapAratrikadi nRuharidAsara nava-
grahadEvategaLu daNisOrE |
daNisOre ivaranna
ahitareMdenuta keDabEDi || 27 ||

jagannAtha viThThalana badigarivarahudeMdu
hagaliraLu biDade nutisuva |
nutisuva mahAtmarige
sugatigaLanittu salahOru ||28||

Leave a Reply

Your email address will not be published. Required fields are marked *

You might also like

error: Content is protected !!