-
Tatva suvvali – Navagraha stotra
Composer : Shri Jagannatha dasaru || ತತ್ವಸುವ್ವಾಲಿ || ಗ್ರಹಸ್ತೋತ್ರಗಳು ಶ್ರೀ ಸೂರ್ಯದೇವರ ಸ್ತೋತ್ರ ಆದಿತ್ಯ ತ್ವತ್ಪಾದಯುಗಳಕೆ ಅಭಿ-ವಾದನವ ಮಾಳ್ಪೆ ಅನುದಿನ |ಅನುದಿನದಿ ಸಜ್ಜನರವ್ಯಾಧಿಗಳ ಕಳೆದು ಸುಖವೀಯೋ || ೬ || ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನು ಸ-ರ್ವಜ್ಞ ನೀನೆಂದು ಸರ್ವತ್ರ |ಸರ್ವತ್ರ ಎನಗೆ ಬ್ರ-ಹ್ಮಜ್ಞಾನ ಭಕುತಿ ಕರುಣಿಸೋ || ೭ || ಸೂರಿಗಮ್ಯನೆ ವಾಕ್‍ಶರೀರ ಬುದ್ಧಿ ಜವಾದ-ಪಾರದೋಷಗಳ ಎಣಿಸದೆ |ಎಣಿಸದೆ ಭಗವಂತ-ನಾರಾಧನೆಯನಿತ್ತು ಕರುಣಿಸೊ || ೮ || ಶ್ರೀ ಚಂದ್ರದೇವರ ಸ್ತೋತ್ರ ರೋಹಿಣೀರಮಣ ಮದ್ದೇಹಗೇಹಾದಿಗಳಮೋಹಪರಿಹರಿಸಿ ಮನದಲ್ಲಿ…
