Enna manada donka tiddayya

Composer : Shri Vadirajaru

By Smt.Shubhalakshmi Rao

ಎನ್ನ ಮನದ ಡೊಂಕ ತಿದ್ದಯ್ಯ ಗೋಪಾಲಕೃಷ್ಣ ||ಪ||

ಎನ್ನ ಮನದ ಡೊಂಕ ತಿದ್ದಿ
ಮುನ್ನ ಮನ್ನಿಸದಿರೆ
ಬನ್ನಪಡಲಾರೆ ಭವಾಬ್ಧಿಯನ್ನೆ
ದಾಟಿಸೊ ಅಪಾರ ಮಹಿಮ ||ಅ. ಪ||

ಉದಯವಾದರೆ ಊಟದ ಚಿಂತೆ
ಉಂಡಮೇಲೆ ಭೋಗದ ಚಿಂತೆ
ಅದರಮೇಲೆ ಹದಿನಾಲ್ಕು
ಲೋಕಂಗಳನೆ ಆಳ್ವ ಚಿಂತೆ ||೧||

ಸುಖವು ಬಂದರೆ ನಾನೆ ಸಮರ್ಥ
ದುಃಖವು ಬಂದರೆ ಹರಿಯು ಮಾಡ್ದ
ರೊಕ್ಕ ಬಂದರೆ ನಾನೆ ಧನಿಕ
ಸಿಕ್ಕಿಬಿದ್ದರೆ ಹರಿಯ ವ್ಯಾಪಾರ ||೨||

ತಿಳಿದು ತಿಳಿದು ಪತಂಗದ್-ಹುಳುವು
ಕಿಚ್ಚಿನಲ್ಲಿ ಬೀಳೊ-ಹಾಂಗೆ
ಕಾಲಕಳೆದೆ ಮೂಕನಂತೆ
ಮುದ್ದು ಹಯವದನನೆ ||೩||


enna manada DoMka tiddayya gOpAlakRuShNa ||pa||

enna manada DoMka tiddi
munna mannisadire
bannapaDalAre BavAbdhiyanne
dATiso apAra mahima ||a. pa||

udayavAdare UTada ciMte
uMDamEle BOgada ciMte
adaramEle hadinAlku
lOkaMgaLane ALva ciMte ||1||

suKavu baMdare nAne samartha
duHKavu baMdare hariyu mADda
rokka baMdare nAne dhanika
sikkibiddare hariya vyApAra ||2||

tiLidu tiLidu pataMgad-huLuvu
kiccinalli bILo-hAMge
kAlakaLede mUkanaMte
muddu hayavadanane ||3||

Leave a Reply

Your email address will not be published. Required fields are marked *

You might also like

error: Content is protected !!