Composer : Shri Shrikara vittala
ಇದನೆ ಪಾಲಿಸೊ ಗುರುವೇ ರಾಘವೇಂದ್ರ
ಇದನೆ ಪಾಲಿಸೊ ಗುರುವೇ [ಪ]
ಇದನೆ ಪಾಲಿಸು ಎನಗೆ ಪದುಮನಾಭನ ಪ್ರಿಯ
ವದನದೊಳು ತವನಾಮ ನಿರುತದಿ ಇರಲೆಂದು [ಅ.ಪ]
ಭುವಿಯೊಳು ಕೇವಲ ಮನದೊಳು
ವಿಷಯ ಮಾರ್ಗದಿ ಇರುವೆ |
ಪವನಮತದಿ ಶ್ರೀರಾಘವೇಂದ್ರ ಗುರು,
ಪಾವನ್ನ ಮಾಡೆನ್ನ ಪವಮಾನಾವೇಶನೇ ||೧||
ಗತಿ ನೀನು ಎಂದು ಬಂದೆನು
ತುತಿಪೆ ನಿನ್ನನು ನಾನು !
ಸತತದಿ ಕರುಣದಿ ತವ ಜನ ಗಿರಿಸಿ,
ಲೋಕದೊಳಗೆ ಹರಿದಾಸ್ಯವ ಕೊಟ್ಟು ನೀ ||೨||
ಅನ್ಯ ಕುಕರ್ಮಗಳ ಮಾಡಿ
ನಾನು ಬಳಲುತ ನೊಂದೆನಯ್ಯ |
ಘನ್ನ ಮಹಿಮ ಚೆನ್ನ ಶ್ರೀಕರವಿಠ್ಠಲನ
ಇನ್ನಾದರೂ ತೋರೊ ಹೃದಯಮಂದಿರಲ್ಲಿ ||೩||
idane pAliso guruvE rAGavEMdra
idane pAliso guruvE [pa]
idane pAlisu enage padumanABana priya
vadanadoLu tavanAma nirutadi iraleMdu [a.pa]
BuviyoLu kEvala manadoLu
viShaya mArgadi iruve |
pavanamatadi SrIrAGavEMdra guru,
pAvanna mADenna pavamAnAvESanE ||1||
gati nInu eMdu baMdenu
tutipe ninnanu nAnu !
satatadi karuNadi tava jana girisi,
lOkadoLage haridAsyava koTTu nI ||2||
anya kukarmagaLa mADi
nAnu baLaluta noMdenayya |
Ganna mahima cenna SrIkaraviThThalana
innAdarU tOro hRudayamaMdiralli ||3||

Leave a Reply
You must be logged in to post a comment.