Composer : Shri Vijayadasaru
ಪ್ರಥಮ ದೈವವೇ ಪಂಢರಿರೇಯಾ
ಪೃಥ್ವಿಯೊಳಗೆ ಭಾಗೀರಥಿಗೆ ಪಥವ ಕೋರೊ [ಪ]
ಸಕಲಭಯನಾಶ ಸಾತ್ವಿಕ ಮೂರುತಿ
ಭಕ್ತಜನ ಪೋಷಕ ನೀನಲ್ಲವೆ
ತ್ವಕ್ಕು ಇಂದ್ರಿಯಗಳು ನಿನ್ನಾಧೀನವೋ
ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ [೧]
ಸರ್ವರಂತರಿಯ ಸಿದ್ಧ ಫಲದಾಯಕ
ಸರ್ವರಲಿ ಸ್ವಾಮಿಯೆಂದೆನಿಪ
ಸರ್ವ ವಿಘ್ನೋಪ ಶಾಂತಾ ವೇದಾಂತನೆ
ಗೀರ್ವಾಣ ಮುನಿಸುತ ಗಿರಿಧರ ದೇವಾ [೨]
ಸಾಧು ಮೂರುತಿ ಸಿದ್ಧ ಫಲದಾ
ಬೋಧ ಕೀರುತಿ ಆದಿಪರಬೊಮ್ಮ
ವಿಜಯವಿಠ್ಠಲರೇಯಾ ನೀನು
ಈ ಜಗದೊಳು ಭೀಮಾ ತೀರನಿವಾಸಾ [೩]
prathama daivavE paMDharirEyA
pRuthviyoLage BAgIrathige pathava kOro [pa]
sakalaBayanASa sAtvika mUruti
Baktajana pOShaka nInallave
tvakku iMdriyagaLu ninnAdhInavO
aKiLa bageyiMda mAtu mannisi kAyo [1]
sarvaraMtariya siddha PaladAyaka
sarvarali svAmiyeMdenipa
sarva viGnOpa SAMtA vEdAMtane
gIrvANa munisuta giridhara dEvA [2]
sAdhu mUruti siddha PaladA
bOdha kIruti Adiparabomma
vijayaviThThalarEyA nInu
I jagadoLu BImA tIranivAsA [3]
Leave a Reply