Composer : Shri Vijayadasaru
ಏನು ಪೇಳಲಿ ತೀರ್ಥಪತಿಯ ಮಹಿಮೆ
ಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ [ಪ]
ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದು
ದೇಶದೊಳು ಪುಸಿಯಲ್ಲ ಸಿದ್ಧವೆನ್ನಿ
ಈಶನುಪದೇಶದಿಂದಲಿ ವಿಗತ ಜನನಾಗಿ
ಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ [೧]
ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿ
ಇರಲು ಕಾಲಾಖ್ಯ ಉರಗನು ಕಚ್ಚಲು
ಪರಮಭೀತಿಯಿಂದ ಅವಳ ವಸನವ ತಂದು
ವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು [೨]
ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲು
ನಿಲ್ಲದೆ ಸನ್ಮುಕ್ತಿ ಧರನಾಗುವಾ
ಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನ
ಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ [೩]
Enu pELali tIrthapatiya mahime
mAnavarige yilli mukti ELalavayyA [pa]
kAsiyoLu maraNa muktiyeMdu pELuvadu
dESadoLu pusiyalla siddhavenni
ISanupadESadiMdali vigata jananAgi
SrI Sakti vENimAdhavana sannidhi gaiyvA [1]
niruta vyaBicAri viprana keDisi kAsiyali
iralu kAlAKya uraganu kaccalu
paramaBItiyiMda avaLa vasanava taMdu
vara trivENiyoLage toyisalu gatisArdaru [2]
illige naDetaMdu snAnavaMde mADalu
nillade sanmukti dharanAguvA
ballidA vijayaviThThalavENi mAdhavana
sallalita pAdavanu kAMba prANEMdriyadali [3]
Leave a Reply