Composer : Shri Gurugopala vittala
ಏನು ಪೇಳಲಿ ನಿನ್ನ ಆಗಮನವನು |
ಆನಂದಮಯ ಭುವನ ಪಾವನ ದಿವಿಜಗಂಗೆ | ಪ |
ಮೊದಲು ನೀ ಹಿರಣ್ಯ ಹರಣಂಘ್ರಿಯಿಂದುದುಭವಿಸಿ |
ತದನಂತರದಿ ಸುರರಾಧಿತನ್ನ |
ಉದಕ ಪಾತ್ರಿಯಲಿದ್ದು ಆತ ಕರದಿ ಜರಿದು |
ಮುದದಿಂದ ಬ್ರಹ್ಮಾಘತನಯ ಶಿರಕಿಳಿದೆ | ೧ |
ಗುರುತಲ್ಪಕನ್ನ ಸಂಯೋಗವನು ಮಾಡಿ ನೀ |
ಗರಳ ಕಂದರನ ಜಡೆಯಿಂದಲಿಳಿದು |
ಧರಿಯೊಳಗೆ ಕಪಿಲ ದ್ರೋಹಿಗಳ ಸ್ಪರುಶವ ಮಾಡಿ |
ಹರುಷದಲಿ ಜಡಧಿ ಸಂಗವ ಮಾಡಿದೆಲೆ ದೇವಿ |೨|
ಪತಿತ ಜಡಮತಿ ಕುಗತಿಗಳ ನೋಡಿದದರಿಂದ ನೀ |
ಪತಿತಳಾದೆ ಜಡ ಕುಗತಿಯೈದಿದೆ |
ಕ್ಷಿತಿಯೊಳಗೆ ಅವರು ನಿನ್ನನು ನೋಡಿದಾಕ್ಷಣಕೆ |
ಅತಿ ಪಾವನತ್ವ ಸುಮತಿಯು ಸುಗತಿ ಪಡೆದರು |೩|
ಈ ಪರಿಯು ನಾ ನಿನ್ನ ತುತಿಸೆನ್ನ ಪಂಚಮಹಾ |
ಪಾಪ ಪತಿತತ್ವ ಜಡಮತಿ ಕುಗತಿಯು |
ಅಪಾರ ದೋಷಗಳು ಕಳದು ನಿನ್ನೊಲಿಮೆಯಲಿ |
ಶ್ರೀಪತಿಯ ವಲಿಸುವದಕ್ಕಧಿಕಾರಿ ನಾನಾದೆ | ೪ |
ಭಾಗೀರಥಿಯೆಂದು ನಾ ನಿನ್ನ ಸ್ಮರಿಸಿದರೆ |
ಈಗ ಭವನಾಶಿಯು ಯನಗಾದೆ ನೀ |
ಯೋಗ ಪ್ರಭಾವಕ್ಕೆ ಯೆಣೆಗಾಣೆ ನಮೋ ನಮೋ |
ಶ್ರೀ ಗುರುಗೋಪಾಲವಿಠ್ಠಲನ್ನ ಪ್ರಿಯಸುತೆ |೫|
Enu pELali ninna Agamanavanu |
AnaMdamaya bhuvana pAvana divijagaMge | pa |
modalu nI hiraNya haraNaMghriyiMdudubhavisi |
tadanaMtaradi surarAdhitanna |
udaka pAtriyaliddu Ata karadi jaridu |
mudadiMda brahmAghatanaya SirakiLide | 1 |
gurutalpakanna saMyOgavanu mADi nI |
garaLa kaMdarana jaDeyiMdaliLidu |
dhariyoLage kapila drOhigaLa sparushava mADi |
haruShadali jaDadhi saMgava mADidele dEvi |2|
patita jaDamati kugatigaLa nODidadariMda nI |
patitaLAde jaDa kugatiyaidide |
kShitiyoLage avaru ninnanu nODidAkShaNake |
ati pAvanatva sumatiyu sugati paDedaru |3|
I pariyu nA ninna tutisenna paMcamahA |
pApa patitatva jaDamati kugatiyu |
apAra dOShagaLu kaLadu ninnolimeyali |
SrIpatiya valisuvadakkadhikAri nAnAde | 4 |
bhAgIrathiyeMdu nA ninna smarisidare |
Iga bhavanASiyu yanagAde nI |
yOga prabhAvakke yeNegANe namO namO |
shrI gurugOpAlaviThThalanna priyasute |5|
Leave a Reply