Composer : Shri Purandara dasaru
ಭಾಗೀರಥೀದೇವಿ ಭಯನಿವಾರಣೆ ಗಂಗೆ |
ಸಾಗರನ ನಿಜರಾಣಿ ಸಕಲ ಕಲ್ಯಾಣಿ [ಪ]
ಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |
ಬ್ರಹ್ಮಕರ ಪಾತ್ರೆಯಲಿ ನಿಂದು ಬಂದೆ ||
ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |
ಬೊಮ್ಮಾಂಡವನು ಪಾವನಮಾಡ ಬಂದೆ (೧)
ದೇವಿ ನೀ ವಿಷ್ಣು ಪಾದೋದಕವೆಂದೆನಿಸಿ |
ದೇವತೆಗಳಿಗೆಲ್ಲ ಅಧಿಕವಾದೆ ||
ದೇವರೆಲ್ಲರು ನೆರೆದು ತಲೆ ಬಾಗಿದರು ಮಹಾ-|
ದೇವನ ಶಿರದಿಂದ ಧರೆಗಿಳಿದು ಬಂದೆ (೨)
ಜಹ್ನುವಿನುದರದಿ ಪೊಕ್ಕ ಕಾರಣದಿಂದ |
ಜಾಹ್ನವಿಯೆಂದು ನೀನೆನಿನೆಸಿಕೊಂಡೆ ||
ಮುನ್ನ ನರಕಕ್ಕಿಳಿದ ಸಗ ರರಾಯನ ವಂಶ- |
ವನ್ನು ಪಾವನಮಾಡಿ ಪೊರೆಯಲು ಬಂದೆ (೩)
ನಿಟ್ಟಿಸಲು ಮುನ್ನಾರು ಜನ್ನಪಾತಕಹರಣ |
ದಿಟ್ಟಿಸಲು ಮೂರುಜನ್ಮದಿ ಮುಕುತಿಯು ||
ಮುಟ್ಟಿ ಮಾಡಿದರೊಂದು ಸ್ನಾನಮಾತ್ರದಲಿ |
ಸುಟ್ಟು ಹೋಹುದು ಸಾಸಿರಜನ್ಮ ಪಾಪ (೪)
ಹಲವು ಪರಿಯಲಿ ಹರಿಯ ಸ್ಮರಣೆಯಿಲ್ಲದೆ ಭವ-|
ದೊಳಗೆ ಸಿಲುಕಿ ಕಡುನೊಂದೆ ನಾನು ||
ಹಲವು ಮಾತೇಕೆ ಶ್ರೀ ಪುರಂದರವಿಠ್ಠಲನ |
ಚೆಲುವ ಪದದಿಂದಿಳಿದು ಒಲಿದು ದಯ ಮಾಡೆ (೫)
BAgIrathIdEvi BayanivAraNe gaMge |
sAgarana nijarANi sakala kalyANi [pa]
omme SrIhari pAdakamaladiMduduBavisi |
brahmakara pAtreyali niMdu baMde ||
SrI mannArAyaNana pAdatIrthavAgi |
bommAMDavanu pAvanamADa baMde (1)
dEvi nI viShNu pAdOdakaveMdenisi |
dEvategaLigella adhikavAde ||
dEvarellaru neredu tale bAgidaru mahA-|
dEvana SiradiMda dharegiLidu baMde (2)
jahnuvinudaradi pokka kAraNadiMda |
jAhnaviyeMdu nIneninesikoMDe ||
munna narakakkiLida saga rarAyana vaMSa- |
vannu pAvanamADi poreyalu baMde (3)
niTTisalu munnAru jannapAtakaharaNa |
diTTisalu mUrujanmadi mukutiyu ||
muTTi mADidaroMdu snAnamAtradali |
suTTu hOhudu sAsirajanma pApa (4)
halavu pariyali hariya smaraNeyillade Bava-|
doLage siluki kaDunoMde nAnu ||
halavu mAtEke SrI puraMdaraviThThalana |
celuva padadiMdiLidu olidu daya mADe (5)
Leave a Reply