Composer : Shri Prasannavenkata dasaru
ಕರೆವರೆಲ್ಲರೂ ಕೂಗಿ ಕರಿಗೊರಳ ನಿನಗೆ ಬಾಗಿ |
ಬರಬೇಕೊ ಶ್ರೀಹರಿಯ ಚರಿತೆ ಅರುಹಲು ಮನಿಗಿ [ಅ.ಪ]
ಅಂಜಿಕಿಲ್ಲದೆ ನಂಜನುಂಡೆಯೊ ನೀ ಜಗದ |
ಅಂಜಿಕೆಯ ಕಳೆದೆಯೊ ಕೆಂಜೆಡೆಯ ಶಿವನೆ ||
ಪ್ರಾಂಜ್ವಲತಪಗೈದು ನಾಲ್ಕಂಜೆ ಕಲ್ಪಗಳು ಪ್ರ- |
ಭಂಜನಗತಿರಂಚಿತ ಶಿಷ್ಯನೆನಿಸಿದ್ದರನೇ [೧]
ರಾಮನಾಮದ ಅಮಲು ಭೂಮಿಪರಿಗೇರಿಸಿ |
ನೇಮನಿತ್ಯವ ತಿಳಿಸಿದಮರಾದಿ ಸುರವಂದ್ಯ ||
ಭಾಮೆ ಉಮೆಗತಿ ಪ್ರೇಮದಲಿ ಹರಿ ಮಹಿಮೆ |
ಧುಮ್ಮಗೈಸಿದೆ ಉಮ್ಮಳದ ಭಾವ ಕುಸುಮಪಲ್ಲವಿಸಿ [೨]
ಬಾಂಬೊಳೆಯ ಪೆತ್ತವನ ಇಂಬಿಟ್ಟು ಪೊಂದಿನೀ |
ಕುಂಭಿಣಿಯಲಿ ಅಂಬುಜನಾಭಗೆ ನಂಬುಗೆಯಾದೆ ||
ಶಂಭುಗಜ ಚರ್ಮಾಂಬರ ಧರನೆ ಶಂಕರನೆ |
ಶಂಭೋಶಿವಶಂಭೋ ಎಂದು ಪದಾಂಬುಜಕೆರಗಿ [೩]
ಮೂಲೋಕ ಪಾವನ ಜಲವ ತಲೆಯಲ್ಲಿ |
ತಿಲಕ ಫಣಿ ಫಾಲ ಚಂದ್ರನಿಹನಲ್ಲಿ ||
ನೀಲಗ್ರೀವ ಕಪಾಲ ಪಿಡಿದು ಕರದಲಿ |
ನಿಲ್ಲದಲೆಯುತ ರಾಮ ಜಪ ಮಾಳ್ಪ ತ್ರಿಶೂಲಿ [೪]
ಉತ್ತರೆಯ ಕುವರನಿಗೆ ಉತ್ತರೋತ್ತರ ಮುಕುತಿ |
ಪಥವ ತೋರಿದ ಪ್ರಮತ ಮುನಿ ಮಹಾದೇವನೆ ||
ಚಿತ್ತದೊಲ್ಲಭ ನಮ್ಮ ಸಿರಿ ಪ್ರಸನ್ವೆಂಕಟನ |
ಚಿತ್ತ ನಮ್ಮತ್ತ ಹರಿವಂತೆ ಕೃಪೆದೋರಲು [೫]
karevarellarU kUgi karigoraLa ninage bAgi |
barabEko SrIhariya carite aruhalu manigi [a.pa]
aMjikillade naMjanuMDeyo nI jagada |
aMjikeya kaLedeyo keMjeDeya Sivane ||
prAMjvalatapagaidu nAlkaMje kalpagaLu pra- |
BaMjanagatiraMcita SiShyanenisiddaranE [1]
rAmanAmada amalu BUmiparigErisi |
nEmanityava tiLisidamarAdi suravaMdya ||
BAme umegati prEmadali hari mahime |
dhummagaiside ummaLada BAva kusumapallavisi [2]
bAMboLeya pettavana iMbiTTu poMdinI |
kuMBiNiyali aMbujanABage naMbugeyAde ||
SaMBugaja carmAMbara dharane SaMkarane |
SaMBOSivaSaMBO eMdu padAMbujakeragi [3]
mUlOka pAvana jalava taleyalli |
tilaka PaNi PAla caMdranihanalli ||
nIlagrIva kapAla piDidu karadali |
nilladaleyuta rAma japa mALpa triSUli [4]
uttareya kuvaranige uttarOttara mukuti |
pathava tOrida pramata muni mahAdEvane ||
cittadollaBa namma siri prasanveMkaTana |
citta nammatta harivaMte kRupedOralu [5]
Leave a Reply