Mangala mukhyaprananige

Composer : Shri Vyasarajaru

By Smt.Shubhalakshmi Rao

ಮಂಗಳ ಮುಖ್ಯ ಪ್ರಾಣನಿಗೆ [ಪ]
ಜಯ ಮಂಗಳ ವಾಯುಕುಮಾರನಿಗೆ [ಅ.ಪ]

ಅಂಜನಾದೇವಿಯ ಕಂದಗೆ ಮಂಗಳ
ಕಂಜಾಕ್ಷ ಹನುಮಂತಗೆ ಮಂಗಳ
ಸಂಜೀವನ ತಂದಾತಗೆ ಮಂಗಳ
ಸಜ್ಜನ ಪರಿಪಾಲಗೆ ಮಂಗಳ [೧]

ಅತಿ ಬಲವಂತ ಶ್ರೀಭೀಮಗೆ ಮಂಗಳ
ಪ್ರತಿಮಲ್ಲರ ಗೆಲಿದವಗೆ ಮಂಗಳ
ಸತಿಯ ಸೀರೆಯ ಸೆಳೆಯ ಬಂದವನ
ಪೃಥ್ವಿ ಮ್ಯಾಲೆ ಕೆಡಹಿದಾತಗೆ ಮಂಗಳ [೨]

ಸರಸ ಸುಶಾಸ್ತ್ರವ ಪೇಳ್ದವಗೆ ಮಂಗಳ
ನಿರುತ ಶ್ರೀರಾಮರ ಭಂಟಗೆ ಮಂಗಳ
ದೊರೆ ಶ್ರೀ ಕೃಷ್ಣನ ಪೂಜೆಯ ಮಾಡುವ
ಗುರು ಮಧ್ವ ಮುನಿರಾಯರಿಗೆ ಮಂಗಳ [೩]


maMgaLa muKya prANanige [pa]
jaya maMgaLa vAyukumAranige [a.pa]

aMjanAdEviya kaMdage maMgaLa
kaMjAkSha hanumaMtage maMgaLa
saMjIvana taMdAtage maMgaLa
sajjana paripAlage maMgaLa [1]

ati balavaMta SrIBImage maMgaLa
pratimallara gelidavage maMgaLa
satiya sIreya seLeya baMdavana
pRuthvi myAle keDahidAtage maMgaLa [2]

sarasa sushAstrava pELdavage maMgaLa
niruta SrIrAmara BaMTage maMgaLa
dore shrI kRuShNana pUjeya mADuva
guru madhva munirAyarige maMgaLa [3]

Leave a Reply

Your email address will not be published. Required fields are marked *

You might also like

error: Content is protected !!