Composer : Shri Vadirajaru
ಸ್ವಪ್ನಪದ
ನೆನೆದು ನಾರಾಯಣನ ಚರಣವ
ನೆನೆದು ನಾರಾಯಣಿಯ ಪಾದವ
ನೆನೆದು ಪ್ರಾಣನ ಪದವ ಭಾರತಿ ದೇವಿಯಂಘ್ರಿಯನು
ನೆನೆದು ಶ್ರೀ ಹಯವದನ ಸ್ವಪ್ನದೊ-
ಳೆನಗೆ ಪೇಳಿದ ಪದವ ಲೋಕದ
ಜನರಿಗಿದ ಸಂಗ್ರಹವ ಮಾಡುವೆನವನ ಕೃಪೆಯಿಂದ || ೧ ||
ಎನ್ನ ಸೇವೆಯ ಬೇಸರದೆ ದಿನ-
ದಿನ್ನ ಮಾಡುವ ಮಾನವರಿಗೆ ಪ್ರ
ಸನ್ನನಾಹೆ ಕೃಪಾಳು ಎಂಬುದು ಎನಗೆ ಬಲುಬಿರುದು
ಮನ್ನದಲಿ ಬೇಸತ್ತು ಕೊಂಡರೆ
ಮಣ್ಣು ಹೊಯಿಸದೆ ಮಾಣೆನದರಿಂ-
ದುನ್ನತೋನ್ನತ ಪೂಜೆಗಳನನುದಿನ್ನ ಮಾಡುತಿರು || ೨ ||
ಕೇಳು ಮಾನವ ನಾನು ಭಕ್ತರು
ಪೇಳಿದಂದದಿ ನಲಿವೆ ಅವರನು
ಲಾಲಿಸುತ ಪಾಲಿಸುತ ಬಿಡನೆಂಬುದು ನಿದಾನವಿದು
ಆಲಸವ ಮಾಡಿದರೆ ತಾಳೆನು
ಕಾಲಕಾಲದೊಳೆನ್ನ ಪೂಜೆಯ
ಮೇಲೆನಿಸಿ ನೀ ಮಾಡು ನೆರೆಕೊಂಡಾಡು ಕುಣಿದಾಡು || ೩ ||
ದೀನ ಮಾನವ ನಾನು ಭಕ್ತರ-
ಧೀನ ನೆಂಬುದು ತಪ್ಪದವರೆ-
ನಗೇನ ಮಾಡಿದರದನು ಕೈಗೊಂಬೆನು ಸರಾಗದಲಿ
ಹಾನಿಗಳ ಕೊಡಿಸುವೆನು ನನಗುದಾ-
ಸೀನವನು ಮಾಡಿದರೆ ನೀ ನೆರೆ-
ಜಾಣನಾಗಿರು ಮರೆಯದೆನ್ನಯ ಪದವ ನೆನೆವುತಿರು || ೪ ||
ಮಿಕ್ಕ ದೇವರ್ಕಳಂತೆ ನಾ ಮೊರೆ
ಹೊಕ್ಕವರ ಬಿಡೆನೆನ್ನ ಕರುಣಕ-
ಟಾಕ್ಷವೀಕ್ಷಣ ಖಳರ ಶಿಕ್ಷಿಸಿ ಸುರರ ರಕ್ಷಿಪುದು
ಸೊಕ್ಕಿನಡೆದರೆ ಕೆಡಿಸೆ ಅವರಿಗೆ
ತಕ್ಕು ಆಪತ್ತುಗಳ ತೋರುವೆ
ದಿಕ್ಕು ದಿಸೆ ನೀನೆಂದು ನಂಬಲುಪೇಕ್ಷೆ ಸಲ್ಲದೆಲೈ || ೫ ||
ಅಂಜ ಬೇಡಲೊ ಮನುಜ ನಾ ಬಡ
ಕುಂಜರನ ಕಾಯ್ದವನು ಪರರಿಗೆ
ಸಂಜೆಯನು ತೋರಿಸಿ ಧನಂಜಯನಸುವ ಪೊರೆದವನೈ
ಕಂಜಲೋಚನೆ ಕರೆಯೆ ವಸ್ತ್ರದ
ಪುಂಜಗಳ ಕೊಟ್ಟವಳ ಸಲಹಿದೆ
ನಂಜುನುಂಡನ ವೈರಿಯನು ಭಂಜಿಸಿದೆ ನಾನರಿಯ || ೬ ||
ಜಲಧಿಯೊಳಗಾಡಿದೆನು ಬೊಮ್ಮಗೆ
ಕಲಿಸಿದೆನು ಶೃತಿತತಿಯ ನೀರೊಳು
ಮುಳುಗಿದದ್ರಿಯನೆತ್ತಿಕೊಟ್ಟೆನು ಸುರರ ಸುಧೆಗಾಗಿ
ಇಳೆಯ ವೈರಿಯ ಕೊಂದೆ ಪಿತನಿಂ-
ದಳುವ ಶಿಶುವನು ಪೊರೆದೆ ಬಳಿಕೆನೆ
ಬಲಿಯ ಬೇಡಿದೆ ರಾಯರನು ತಲೆ ಕೆಳಗು ಮಾಡಿದೆನು || ೭ ||
ಅಂಬುಧಿಯ ನಂಬಿನಲೆಸೆದೆ ಧರೆ
ಕಂಬನಿಯ ತೊಡೆದನು ಸರಾಗ ತ್ರ-
ಯಂಬಕನ ಹಿತಕಾಗಿ ತ್ರಿಪುರರ ವಧುಗಳ ಕೆಡಿಸಿದೆನು
ಇಂಬು ಗೊಡದೆ ಕಲಿಗೆ ಸುಧರ್ಮಕ-
ದಂಬಗಳ ತುಂಬಿಸಿದೆ ಎನಗೆಣೆ
ಎಂಬ ದೇವನು ದಾವನೊ ಈರೇಳು ಲೋಕದೊಳು || ೮ ||
ಏನ್ನ ಚರಣೋದಕವ ಶಿವ ಪಾ-
ವನ್ನ ವೇನುತಾದರದಿ ಧರಿಸಿದ-
ನೆನ್ನ ಕಾರುಣ್ಯದ ಬಲದಿ ವಿಧಿ ವೇದ ಓದಿದನು
ಎನ್ನರಸಿ ರಮೆ ಸಕಲಗುಣಸಂ-
ಪನ್ನೆ ಸುರಮುನಿಮಾನ್ಯ ಶೃತಿಶತ-
ವರ್ಣ್ಯನೆನುತಲಿ ಮನದಿ ಮನ್ನಿಸಿ ಮುನ್ನ ವರಿಸಿಹಳು || ೯ ||
ಎನ್ನ ವೈಕುಂಟಾದಿಲೋಕವೆ
ಜನ್ನರಿಗೆ ಭವ ಬಂಧಮೋಚನ-
ವೆನ್ನ ನಾಮಸ್ಮರಣೆ ಪಾಪಟವಿಗೆ ಕಾಳ್ಗಿಚ್ಚು
ಇನ್ನು ನೀನನ್ಯರನು ಬಿಡು ಮನ-
ವೆನ್ನ ಚರಣ ದೊಳಿಟ್ಟು ಸಂತತ
ಎನ್ನ ಭಕ್ತಿಯ ಮಾಡು ಸುಕೃತವ ಕೂಡು ನಲಿದಾಡು || ೧೦ ||
ಸ್ನಾನ ದಾನ ಧ್ಯಾನ ಗಳನನು-
ಮಾನವಿಲ್ಲದೆ ಮಾಳ್ಪುದ ದರಿಂ-
ದೇನು ಹಾನಿಯು ನಿನಗೆ ಬಾರದು ನನ್ನ ಕರುಣದಲಿ
ದೀನ ತನುವನು ಪೊರಯದಿರು ಬಲು
ಹೀನ ಜನರೊಡನಾಡದಿರು ಸು-
ಜ್ಞಾನಿಗಳನನುಸರಿಸಿ ನನ್ನ ಚರಿತ್ರೆಗಳ ಕೇಳು || ೧೧ ||
ನೋಡು ಪುಣ್ಯ ಕ್ಷೇತ್ರಗಳೊಲೆಡೆ-
ಯಾಡು ಕೀರ್ತಿಯ ಪಾಡು ಭಕ್ತಿಯ
ಕೂಡು ಕಾಡುವ ದುರಿತಗಳ ನೀಡಾಡು ದಿನದಿನದಿ
ಮಾಡು ನೀನೆನ್ನಂಘ್ರಿ ಪೂಜೆಯ
ಬೇಡು ಮೇಲಣ ಮುಕ್ತಿಫಲವನು
ನೀಡು ಸಂತತ ವೆನ್ನ ಸುಕಥಾಮೃತವ ಸುಜನರಿಗೆ || ೧೨ ||
ಗಾನರಸವಂ ಕೂಡಿ ನನ್ನ ಮ-
ಹಾನುಭಾವವ ತುತಿಸು ನೀಭವ-
ಕಾನನಕ್ಕೆ ಕೃಶಾನು ದುರಿತತಮಿಶ್ರ ಕಿದು ಭಾನು
ನಾನು ನನ್ನದಿದೆಂಬ ಮನದಭಿ-
ಮಾನವನು ಬಿಡು ಕಂಡ ಕಂಡರ
ನೀನು ಯಾಚಿಸಿ ದು:ಖ ಸಾಗರ ದೊಳಗೆ ಮುಳುಗದಿರು || ೧೩ ||
ದೇವರೆಲ್ಲರು ನನ್ನ ದಾಸರು
ಶ್ರೀ ವಧುವೆ ನನ್ನರಸಿ ಜಗದಲಿ
ಜೀವರಾಶಿಯ ನಾನೆ ಪುಟ್ಟಿಸಿ ಮಗುಳೆ ರಕ್ಷಿಪೆನು
ಲಾವಕರ ಕೊಲಿಸುವೆನು ನರಕವ-
ನೀವೆ ಸ್ವರ್ಗವನಿತ್ತು ಸುಜನರ
ಕಾವೆನಿದು ವೇದಾಂತ ಸಿದ್ಧಾಂತದ ರಹಸ್ಯ ಕಣಾ || ೧೪ ||
ಏಷ ಸರ್ವೇಶ ನಾನೆಂದೆನದೆ ವಿ-
ದೂಷ ಮಂಡೂಕೋಪನಿಷತು ಮ-
ತ್ತೇಷ ಭೂತಾಧಿಪತಿ ಎನ್ನದೆ ಕಾಣ್ವರುಪನಿಷತು
ವಿಲಾಸದಿಂ ಋಗ್ವೇದ ಮೊದಲರ
ಮೇಶ-ನೂತನ ಪೂರ್ವ ಋಷಿಗಳಿ-
ಗೀಷನಿಂತಾ ಈಡ್ಯನೆನುತಿವೆ ಕೆಲವು ವೇದಗಳು || ೧೫ ||
ಅಗ್ನಿ ದೇವರೋಳಧಮ ಮಿಕ್ಕ ಸು-
ರರ್ಗಳೆಲ್ಲರು ಮಧ್ಯಮರು ಸ-
ರ್ವರ್ಗೆ ವಿಷ್ಣುವೆ ಪರಮನೆಂಬ ವೇದಬ್ರಾಹ್ಮಣವೇ
ಬಗ್ಗಿಸಿತು ಕುಜನರ ಶಿರಂಗಳ
ಸುಗ್ಗಿಯೆನಿಸಿತು ಜ್ಞಾನ ಸಸಿಯಪ-
ವರ್ಗವೀವನು ನಾನು ಎನಗೆಣೆಯಾರು ತ್ರಿಜಗದೊಳು || ೧೬ ||
ದ್ವಾಸುಪರ್ಣಾ ಎಂಬ ಶೃತಿಯ
ಶ್ರೀಶ ಜೀವಗಳೆಂಬೆರಡು ಖಗ
ಕ್ಲೇಶವೀಯೆರಡರೊಳು ಜೀವನೆ ಉಣುತಿಹುದು ಕಾಣಾ
ಆ ಶರಿದಲ್ಲಿದ್ದೆಡೆಯು ಜಗದೀಶನೆಂಬ
ಖಗವು ಮತ್ತಾಕ್ಲೇಶವುಣದೆ
ಸುತ್ತಲೆಸೆವುತ್ತಿಹುದು ತಾನು ಗಡ || ೧೭ ||
ಇಂತು ಶೃತಿಗಳು ಕೆಲ ಕೆಲವು ಶ್ರೀ-
ಕಾಂತ ಚಿಂತಾ ದೂರನೆಂದು
ಚಿಂತೆಯಲಿ ಬಳಲುತಿಹ ಜೀವರ ಗಣವೆ ಬೇರೆ ಇದೆ
ಎಂತಿವಿಕೊ ನೀವೆಲ್ಲ ನೋಡಿರೊ
ಕಂತುಪಿತ ಖಲರಟ್ಟಿ ಭಜಕರ
ಸಂತೈಸುವ ಸ್ವಾಮಿ ಎನುತಿವೆ ಕೆಲವು ವೇದಗಳು || ೧೮ ||
ಹಿಂದೆ ನಾನೆ ಪ್ರಾಣನೆಂದು ಸು-
ರೆಂದ್ರನಾಶರ ವ್ಯಾಸ ತತ್ಸಂ-
ಬಂಧ ಬಾಹುಳ್ಯದಲಿ ತಾನೇ ಪ್ರಾಣನೆಂದೆನಿಸೆ
ಎಂದು ತೋರರೆ ಬಲ್ಲ ಬುಧರದ-
ರಿಂದ ನಾನೆ ಬ್ರಹ್ಮನೆಂಬ
ಮುನಿವೃಂದದುಕ್ತಿಯ ಬ್ರಹ್ಮ ನಾ
ಸಂಬಂಧ ವೆನಬೇಕು || ೧೯ ||
ಇವನೆ ನಾನೆಂದರಸು ತನ್ನ ಸಚಿವರ
ನೇಹದಿ ನುಡಿವನೆ ಬಲ್ಲವರು ಗ್ರಾಮದ-
ಜನರು ಕೂಟದಿ ಕೂಡುವರೆ ನೋಡಾ
ದಿವಿಜ ದನುಜರು ಸೇರ್ದರುಸಿಂ-
ಧುವನು ಕಡೆದರೆನಲು ಕೋವಿದ-
ರವನಿಯಲಿ ಸಾಮಾನ್ಯವಚನಕೆ ತಿಳಿದು ಮರುಳಹರೆ || ೨೦ ||
ಬೊಮ್ಮ ಹೆಮ್ಮಗ ರುದ್ರ ಮೊಮ್ಮಗ
ಸುಮ್ಮನಸರಿಗೆ ಸುಧೆಯ ನೀಡಿ
ಸುರಮ್ಯವಾದ ಕಾಲಾ ಚಕ್ರವ ನಾನೆ ನಡೆಸುವೆನು
ಅಮ್ಮರೇಶಗೆ ಭಾಗ್ಯವಿತ್ತವ
ನಮರ ತರು ಕಿತ್ತರಲು ದಿವಿಜರ
ಹೆಮ್ಮೆಗಳ ನಾನೋರ್ವನೇ ಬಿಡಿಸಿದೆನೊ ಕೇಳ್ ಮನುಜ || ೨೧ ||
ನೋಡು ರಾಮನ ಸೇವೆಗಮರರು
ಕೋಡಗದ ತನುವಾಂತು ಗಿರಿಗಳ
ಕೋಡುಗಲ್ಗಳ ಕಿತ್ತು ತಲೆಯಲಿ ಹೊತ್ತು ಮನವಿತ್ತು
ನಾಡರಿಯೆ ಜಲನಿಧಿಯ ಸೇತುವೆ
ಮಾಡಿ ತದ್ಭಟರೆನಿಸಿ ಕೊಳ್ಳರೆ
ಮೂಢನಾಗಿರಬೇಡ ನಾನೇ ಸಕಲ ಸುರರೊಡೆಯ || ೨೨ ||
ಮನುಜ ಮತ್ತೇಂದನುಜರಿಪು ಸಜ್ಜನರ
ಪಾಲಿಪೆನೆನುತ ವಸುದೇವನ ಮನೆಯಲವತರಿಸೆ
ದೇವರ್ಕಳು ಮಹೀತಳದಿ
ಮುನಿಗಳನು ಮತಿಯಿಂದ ಮಾಡಿದ
ರೆನೆ ಜನಾರ್ದನ ದುರಿತ ಮರ್ದದನೆನಿಸುವನು
ಜಗದೊಳಗೆ ನಾನೇ ಸಕಲ ಸುರರೊಡೆಯ ||೨೩||
ನಾನೆ ದು:ಖ ರಹಿತ ನಿಧಾನಿಸೆ
ದೀನ ಜೀವನು ದುಃಖ ಭರಿತನು
ನೀನೆ ನೋಡು ಧನಾದಿಹಾನಿಯಿಂ ಅಳುವ ಜೀವರನು
ಏನನೆಂಬೆನು ರೋಗರುಜಿನದಿ
ಮಾನವಗೆ ಬರುತಿಪ್ಪ ನೋವನು
ಸ್ವಾನುಭವ ಸಿದ್ಧವನು ಕದ್ದು ನುಡಿವರೆ ಬಲ್ಲವರು || ೨೪ ||
ನಾನು ನನ್ನಯ ಶಕ್ತಿಯಿಂದಲಿ
ದಾನವರ ಮರ್ದಿಸುವೆ ಜೀವನಿ-
ಗಾನು ಶಕ್ತಿಯ ಕೊಟ್ಟರುಂಟಿಲ್ಲದೊಡೆ ಜಡಕೆಸಮ
ಕಾಣು ಕುಂಟರ ಕಾಣು ಕುರುಡರ ಕಾಣು
ಕಿವುಡರ ಕಾಣು ಕಾಣರ ಕಾಣು ತನಗೆ
ಶಕ್ತಿಯಿದ್ದರದೇಕೆ ಬಿಡಿಸಿಕೊಳ || ೨೫ ||
ನಾನು ಸದ್ಗುಣ ಪೂರ್ಣ ವಂದ್ಯನು
ಹೀನಗುಣದಿಂ ಜೀವನಿಂದ್ಯನು
ನಾನು ಲಕ್ಷ್ಮೀ ರಮಣ ಜೀವನು ಶತದರಿದ್ರನೆಲೈ
ನಾನು ಸುರಮುನಿ ಸೇವ್ಯ ಚರಣನು
ಕಾಣು ಜೀವನು ಖಳರ ಶರಣನು
ನಾನು ಸಾವಿಲ್ಲದವ ಜೀವನ ಮೃತ್ಯು ಕೊಲುವುದೆಲೈ || ೨೬ ||
ನಾನು ಸುಜ್ಞನು ಜೀವನಜ್ಞನು
ನಾನು ಮುಕ್ತನು ಜೀವ ಬದ್ಧನು
ನಾನು ಪಾತಕ ರಹಿತ ಜೀವನು ಪಾಪ ಭರಿತನೆಲೈ
ನಾನು ಜನ್ಮ ವಿದೂರ ನಾನಾ
ಯೋನಿಯಲಿ ಜನಿಸುತಿಹ ಜೀವನು
ಮಾಣು ಛಲವನು ನನ್ನ ಜನಕನ ಹೆಸರ ಹೇಳಲ್ಲಿ || ೨೭ ||
ದೇವಕಿಯ ಬಸುರಲ್ಲಿ ನಾನೆ
ದೇವ ಕಾರ್ಯಕೆ ಬಂದ ಬಗೆಯನು
ಭಾವಕೋವಿದರೆಲ್ಲ ನೊಡಿರಿ ಮೂಲರೂಪವನೆ
ಜೀವರಿಗೆ ತೋರಿಸಿದೆ ಮೃತ್ಯುವ
ಕಾವ ವೈಕುಂಠದಲಿ ಇದ್ದು
ಶ್ರೀವತ್ಸವನು ನೋಡು ಪೊಟ್ಟೆಯ ಬಿಟ್ಟು ಪೊರೆವಂಟೆ || ೨೮ ||
ಹಿಂದೆ ಜಗವನು ನನ್ನ ಬಸಿರಲಿ
ನಂದಗೋಪನ ರಾಣಿ ಕಾಣಳೆ
ಚಂದದೆನ್ನಯ ವಿಶ್ವರೂಪವ ಪಾರ್ಥ ಕಾಣನೆಲಾ
ಮಂದಮತಿಯೆ ನಿಧಾನಿಸುತ್ತಿರೆ
ಅಂದದೆನ್ನಯ ದೇಹವಳಿದರೆ
ಬಂದುದೆಲ ಸಚರಾಚರಂಗಳಿಗಂದೆ ನಿರ್ಬಂಧ || ೨೯ ||
ಮಂದ ಮತಿಯೆ ಶ್ರೀನೃಸಿಂಹಗೆ
ತಂದೆದಾವನು ತಾಯಿ ದಾವಳು
ಮಂದರವ ಧರಿಸುವರೆ ಬಂದ ಕೂರ್ಮ ಪಿತನಾರು
ಹಿಂದೆ ಬ್ರಹ್ಮನ ಪ್ರಳಯ ಜಲಧಿಯೊ-
ಳೊಂದೆ ವಟ ಪತ್ರದಲಿ ಮಲಗಿದ
ಚಂದದಲಿ ಶ್ರೀರಮಣ ನಾನಿತ್ಯರೊಳು ನಿತ್ಯನೆಲೈ || ೩೦ ||
ಇಂತನಂತ ವಿರುದ್ಧ ಧರ್ಮದ
ತಿಂತಿಣಿಯ ನಾಂತವರಿಗೈಕ್ಯವಿದೆಂತು
ಸಂತತ ಭ್ರಾಂತ ಜೀವ ಪ್ರಕಾಶ ತಮವಹುದೆ
ಸಂತರಿಂದ ನಿರಂತರದಿ ವೇ-
ದಾಂತ ಶ್ರವಣವ ಮಾಡುತಿರು ದು-
ರ್ಭ್ರಾಂತಿ ಗೊಳಗಾಗದಿರು ನನ್ನಯ ಗುಣವ ನೆನೆವುತಿರು || ೩೧ ||
ಕುಂಭದಭ್ರೊ ಪಾಧಿಯಿದ್ದರು
ಡಂಭ ಸುತ್ತಲು ಸುಳಿವ ದೇಹದ
ಅಂಬುವಡೆದರೆ ವ್ಯಾಪ್ತ ಚಿತ್ತಿಗೆ ಯಾತ್ರೆ ಸಲ್ಲದೆಲೈ
ಅಂಬರಾಗ್ರದ ಸ್ವರ್ಗವೇರಿ ನೀ-
ನುಂಬೆ ಸುಖಗಳನೆಂತು ಮಾನವ
ಕುಂಭಿ ಪಾಕಕ್ಕಿಳಿದು ಯಾತನೆಯೆಂತು ಕೈಗೊಂಬೆ || ೩೨ ||
ಎಲ್ಲಿ ಪೋಪುದೊ ದೇಹ ತಾ ಮ-
ತ್ತಲ್ಲಿ ನೆಲೆಸಿಹ ಚಿತ್ತ ಜೀವವಿ
ದಲ್ಲವಲ್ಲವಲಕ್ಷಣದಿ ತಾ ಮೃತ್ಯುಗಳು ಬಹುದಾಗಿ
ಇಲ್ಲ ಜಡದೇಹಕೆ ನಡತೆ ತ-
ನಲ್ಲಿ ತುಂಬಿದ ಚಿತ್ತಿ ನಡೆಯದೆ
ಸಲ್ಲದೆ ನಿರ್ಧರ್ಮ ಬೊಮ್ಮಕೆ ಶಕ್ತಿಯೆಂಬ ಗುಣ || ೩೩ ||
ಮಾಯ ಶಕ್ತಿಯಿದಾಯಿತೆಂಬುದು
ಮಾಯೆ ತಾ ಜಡವಾದಕಾರಣ
ಪೋಯಿತಾವ ಉಪಾಯದಲಿ ಮತವಾ ನಿಲಿಸುವಿ ನೀ
ತಾಯ ಪೊಟ್ಟೆಯ ಪೊಕ್ಕರೆಯು ನುಡಿ
ವಾಯತವನರಿತವರು ನಿನ್ನಯ ಬಾಯ
ತೆರೆಯಲು ಬಿಡರು ನಿಧಾನಿಸೆ ವಾಯುಮತ ಸುಮತ || ೩೪ ||
ಒಂದು ಚಿತ್ತಿಂದುದಯಿಸಿತು ಮ-
ತೊಂದು ಚಿತ್ತು ಸ್ಥಾನವಿಲ್ಲದೆ
ಬಂದು ಭೋಜನ ಜಪತಪ ಧ್ಯಾನಗಳ ಮಾಡಿತೆಲೈ
ನಿಂದ್ಯ ದೇಹೋ ಪಾದಿಯಿಂ ಸಂ
ಬಂಧಿಸಲು ಬೇರೆ ಬೇರೆ ಎಂದು
ಮಂದಾಕೃತತ ವ್ಯರ್ಥ ಪೋಂದಿತು ಅಕೃತ ಬಂಧುದೆಲೈ || ೩೫ ||
ಒಂದು ದೇಹದಲೊಂದು ಚಿತ್ಸಂ-
ಬಂಧವಿಲ್ಲದೆ ದೇಶ ದೇಶವ
ಪೊಂದಿಕೊಂಡಿಹ ಚಿತ್ತಿನಿಂದಲೆ ಜೀವನೆಂಬವಗೆ
ಮಂದ ಮರಣದವಾಯ ವೆಂಬುದು
ಬಂದು ಹೋಯಿತು ಈ ವಿಯೋಗವಿ
ದೊಂದು ದೇಹಕೆ ಬಹದು ಚಿತ್ತು ವ್ಯಾಪ್ತಿವೆಂಬವಗೆ || ೩೬ ||
ಜೀವ ಭೇಧ ವನಾದಿಯೆಂಬವ-
ದಾವ ಬಗೆಯಲಿ ಬೊಮ್ಮ ತಾನೇ
ಜೀವ ಭಾವವ ನೈದಿತೆಂಬ ನಿನ್ನ ಮೋಹಕವ
ತೀವಿ ನಡೆಸಿದ ಬೊಮ್ಮದಂಗಕೆ
ನೋವ ಕೊಡುವ ಇಂದ್ರಿಯಂಗಳ
ಜೀವರಾಶಿಯ ತೆಗೆವದೆಂತುಂಟೊ ನಿರ್ವಿಕಾರವಲೈ || ೩೭ ||
ಇಂತು ದುರ್ಮತ ಜೀರ್ಣ ಕಂತೆ-ವಿ
ತಂತುವಾಯ್ತು ಮಹಂತರಿದಿರಲಿ
ನಿಂತ ಹೆಜ್ಜೆಯ ನೂರಿ ನಿಲ್ಲದೆ ಭ್ರಾಂತಿಗೊಲಿಸಿತೆಲೈ
ಹಂತನಿವನೆಂತಾವನೈ ವೇ-
ದಾಂತ ಪುಸಿಯದು ತನ್ನ ಪಥವ ಸ-
ಭಾಂತರದಲಿವನೆಂತು ಬಗೆಯಲಿ ನಿಂತು ನಿಲಿಸುವನು || ೩೮ ||
ಮುಕ್ತಿ ಎಂಬುದು ಮರ್ತ್ಯರಿಗೆ ನ-
ನ್ನರ್ಥಿಯ ಸ್ಥಾನಗಳ ಭಕ್ತಿಯ
ಶಕ್ತಿಯಿಂದಲಿ ಹತ್ತಿ ಮೃತ್ಯುವನೊತ್ತಿ ತನ್ನಪದ
ಹತ್ತಿಲೆ ಸುಖಿಸುವುದು ಭೃತ್ಯರಿ-
ಗಿತ್ತ ಭೇದವನಿತ್ತ ಮರ್ತ್ಯನು
ವ್ಯರ್ಥ ಪೊಗಳಿಸುವರೆಯು ನಾನು ಪ್ರಮತ್ತನಲ್ಲನಲೈ || ೩೯ ||
ಮರ್ಥ್ಯ ಮೃತ್ಯುರ್ವ್ಯಾಳ ಭೀತೆಂ-
ಬುಕ್ತಿಯರ್ಥವ ನೋಡು ಮತ್ತದ
ಪ್ರಾಪ್ತಿಯೇ ಕೈವಲ್ಯ ಗಡ ಮೃತ್ಯುವಿಗೆ ಶತೃ ಗಡ
ಮತ್ತೆ ಮರುಳಾಗದಿರು ನಾ ಸ-
ರ್ವೋತ್ತಮನು ಭೃಗು ಮೆಟ್ಟಿದರೆ ಎನ್-
ನುತ್ತಮತ್ವದ ರಕ್ಷೆಗಾಗಿಯೆ ತಾಳಿಕೊಂಡೆನೆಲೈ || ೪೦ ||
ಎಲ್ಲವಿಲ್ಲೆಂಬವಗೆ ನುಡಿವುದ-
ಕಿಲ್ಲ ನಾಲಿಗೆ ಕೇಳೆ ಕರ್ಣಗ-
ಳಿಲ್ಲ ಪೇಳ್ವಾಚಾರ್ಯರಿಲ್ಲ ವಿವೇಕವಿಲ್ಲವಲ
ಕಲ್ಲ ಕಂಭವ ಪೋಲ್ವ ನಿನ್ನನು
ಬಲ್ಲಿದರು ಬಲ್ಲವರೊಳಪ್ರತಿ
ಮಲ್ಲರೆನ್ನಾಳುಗಳು ಸೋಲಿಸಿಜಳ್ಳು ಮಾಡುವರೈ || ೪೧ ||
ಈಗಲುಂಟಿನ್ನೊಂದು ಕಾಲದಿ
ಪೋಗುವುದು ಜಗವೆಂಬ ನುಡಿ ನಿನ-
ಗಾಗದಲೈ ತ್ರೈಕಾಲಿಕ ಪ್ರಥಿಷೆಧವೆಂಬವಗೆ
ಆಗಮವ ನೀ ನರಿಯೆ ಎಂದಾ
ಬೀಗವನು ಬಾಯ್ಗಿಕ್ಕಿ ನಿನ್ನನು
ಪೋಗೆನುತ ಪೊರೆಗಟ್ಟುವರೆಲೈ ನನ್ನ ಕಿಂಕರರು || ೪೨ ||
ಇಷ್ಟ ದೈವವೆನುತ್ತ ನೀ ಮನ-
ಮುಟ್ಟಿ ನನ್ನನೆ ಭಜಿಸು ದಿವಿಜರ
ಶಿಷ್ಟ ಜನರಿಗೆ ಗುರುಗಳೆಂದವರಂಘ್ರಿಗಭಿನಮಿಸು
ನಷ್ಟಬಾರದ ವೋಲು ನಿನ್ನನು
ಘಟ್ಟಿಯಾಗಿಯೆ ರಕ್ಷಿಸುವೆ ನಾ
ದೃಷ್ಟಿಗೋಚರನಹೆನು ಮುಕ್ತಿಯ ಕೊಟ್ಟುಸಲಹುವೆನು || ೪೩ ||
ಎನ್ನ ಗುಣಗಣಗಳನೆ ಪೊಗಳುವ
ಪೂರ್ಣಪ್ರಜ್ಞರ ಮತವೆ ಸುಮತ ಪ್ರ-
ಸನ್ನ ಕರ್ಣಾಮೃತ ಸಮಾನ ವಿಮುಕ್ತಿ ಪಥಕೆ ಪಥ
ಅನ್ಯ ಮತಗಳ ಜರಿದು ನೀ ಸಂ
ಪುಣ್ಯ ಮರುತನ ಮತವ ಮನದಲಿ
ಮನ್ನಿಸುತ ಮನನವನು ಮಾಡ್ದರೆ ನಿನ್ನ ಸಲಹುವೆನು || ೪೪ ||
ವಾದಿರಜಗೆ ದೇವಕಲಿಸಿದ
ಮಾಧವನ ಗುಣ ಮಾಲೆಯನು ಬರೆ-
ದೋದಿಪಠಿಸುವ ಮಾನವರಿಗೆ ವಿಮುಕ್ತಿ ಪಥವಹುದು
ವಾದಶಕ್ತಿಯನಿತ್ತು ತನ್ನಯ
ಪಾದಪದ್ಮದ ನೇಹವೀವ ಮ-
ಹಾದಯಾಂಬುಧಿ ಹಯವದನ ಕೃಪೆಯಿಂದ ಸಲಹುವೆನು || ೪೫ ||
ಇಂತು ಸ್ವಪ್ನಾವಸ್ಥೆಯಲಿ ಮಾ-
ಕಾಂತ ಕರುಣಾವಂತ ನಿಜರಿಗೆ ಶಾಂತನತಿಬಲ-
ವಂತ ಸರ್ವ ಮಹಂತ ಮಹಿಮಾಂತ
ಶಾಂತ ಶ್ರೀಗುರುವಾದಿರಾಜಗೆ
ಇಂತು ಪೇಳಿದ ಪದಗಳೆನಲಿದ
ನಂತರಂಗದಲೊರೆದ ಸಿರಿಹಯವದನ ಕೃಪೆಯಾಂತು || ೪೬ ||
| ಶ್ರೀ ಕೃಷ್ಣಾರ್ಪಣಮಸ್ತು |
svapnapada
nenedu nArAyaNana caraNava
nenedu nArAyaNiya pAdava
nenedu prANana padava BArati dEviyaMGriyanu
nenedu SrI hayavadana svapnado-
Lenage pELida padava lOkada
janarigida saMgrahava mADuvenavana kRupeyiMda || 1 ||
enna sEveya bEsarade dina-
dinna mADuva mAnavarige pra
sannanAhe kRupALu eMbudu enage balubirudu
mannadali bEsattu koMDare
maNNu hoyisade mANenadariM-
dunnatOnnata pUjegaLananudinna mADutiru || 2 ||
kELu mAnava nAnu Baktaru
pELidaMdadi nalive avaranu
lAlisuta pAlisuta biDaneMbudu nidAnavidu
Alasava mADidare tALenu
kAlakAladoLenna pUjeya
mElenisi nee mADu nerekoMDADu kuNidADu || 3 ||
dIna mAnava nAnu Baktara-
dhIna neMbudu tappadavare-
nagEna mADidaradanu kaigoMbenu sarAgadali
hAnigaLa koDisuvenu nanagudA-
sInavanu mADidare nI nere-
jANanAgiru mareyadennaya padava nenevutiru || 4 ||
mikka dEvarkaLaMte nA more
hokkavara biDenenna karuNaka-
TAkShavIkShaNa KaLara SikShisi surara rakShipudu
sokkinaDedare keDise avarige
takku ApattugaLa tOruve
dikku dise neeneMdu naMbalupEkShe salladelai || 5 ||
aMja bEDalo manuja nA baDa
kuMjarana kAydavanu pararige
saMjeyanu tOrisi dhanaMjayanasuva poredavanai
kaMjalOcane kareye vastrada
puMjagaLa koTTavaLa salahide
naMjunuMDana vairiyanu bhaMjiside nAnariya || 6 ||
jaladhiyoLagADidenu bommage
kalisidenu SRutitatiya nIroLu
muLugidadriyanettikoTTenu surara sudhegAgi
iLeya vairiya koMde pitaniM-
daLuva SiSuvanu porede baLikene
baliya bEDide rAyaranu tale keLagu mADidenu || 7 ||
aMbudhiya naMbinalesede dhare
kaMbaniya toDedanu sarAga tra-
yaMbakana hitakAgi tripurara vadhugaLa keDisidenu
iMbu goDade kalige sudharmaka-
daMbagaLa tuMbiside enageNe
eMba dEvanu dAvano IrELu lOkadoLu || 8 ||
Enna caraNOdakava Siva pA-
vanna vEnutAdaradi dharisida-
nenna kAruNyada baladi vidhi vEda Odidanu
ennarasi rame sakalaguNasaM-
panne suramunimAnya SRutishata-
varNyanenutali manadi mannisi munna varisihaLu || 9 ||
enna vaikuMTAdilOkave
jannarige Bava baMdhamOcana-
venna nAmasmaraNe pApaTavige kALgiccu
innu nInanyaranu biDu mana-
venna caraNa doLiTTu saMtata
enna Baktiya mADu sukRutava kUDu nalidADu || 10 ||
snAna dAna dhyAna gaLananu-
mAnavillade mALpuda dariM-
dEnu hAniyu ninage bAradu nanna karuNadali
dIna tanuvanu porayadiru balu
hIna janaroDanADadiru su-
j~jAnigaLananusarisi nanna caritregaLa kELu || 11 ||
nODu puNya kShEtragaLoleDe-
yADu kIrtiya pADu Baktiya
kUDu kADuva duritagaLa nIDADu dinadinadi
mADu neenennaMGri pUjeya
bEDu mElaNa muktiphalavanu
nIDu saMtata venna sukathAmRutava sujanarige || 12 ||
gAnarasavaM kUDi nanna ma-
hAnuBAvava tutisu nIBava-
kAnanakke kRuSAnu duritatamiSra kidu BAnu
nAnu nannadideMba manadaBi-
mAnavanu biDu kaMDa kaMDara
nInu yAcisi du:Ka sAgara doLage muLugadiru || 13 ||
dEvarellaru nanna dAsaru
SrI vadhuve nannarasi jagadali
jIvarASiya nAne puTTisi maguLe rakShipenu
lAvakara kolisuvenu narakava-
nIve svargavanittu sujanara
kAvenidu vEdAMta siddhAMtada rahasya kaNA || 14 ||
ESha sarvEsha naaneMdenade vi-
dUSha maMDUkOpaniShatu ma-
ttESha BUtAdhipati ennade kANvarupaniShatu
vilAsadiM RugvEda modalara
mEsha-nUtana pUrva RuShigaLi-
geeShaniMtA IDyanenutive kelavu vEdagaLu || 15 ||
agni dEvarOLadhama mikka su-
rargaLellaru madhyamaru sa-
rvarge viShNuve paramaneMba vEdabrAhmaNavE
baggisitu kujanara SiraMgaLa
suggiyenisitu j~jAna sasiyapa-
vargavIvanu nAnu enageNeyAru trijagadoLu || 16 ||
dvAsuparNA eMba SRutiya
SrISa jIvagaLeMberaDu Kaga
klEshavIyeraDaroLu jIvane uNutihudu kANA
A sharidalliddeDeyu jagadeeshaneMba
Kagavu mattAklEshavuNade
suttalesevuttihudu tAnu gaDa || 17 ||
iMtu SRutigaLu kela kelavu SrI-
kAMta ciMtA dUraneMdu
ciMteyali baLalutiha jIvara gaNave bEre ide
eMtiviko nIvella nODiro
kaMtupita KalaraTTi Bajakara
saMtaisuva svAmi enutive kelavu vEdagaLu || 18 ||
hiMde nAne prANaneMdu su-
reMdranASara vyAsa tatsaM-
baMdha bAhuLyadali tAnE prANaneMdenise
eMdu tOrare balla budharada-
riMda nAne brahmaneMba
munivRuMdaduktiya brahma nA
saMbaMdha venabEku || 19 ||
ivane nAneMdarasu tanna sacivara
nEhadi nuDivane ballavaru grAmada-
janaru kUTadi kUDuvare nODA
divija danujaru sErdarusiM-
dhuvanu kaDedarenalu kOvida-
ravaniyali sAmAnyavacanake tiLidu maruLahare || 20 ||
bomma hemmaga rudra mommaga
summanasarige sudheya nIDi
suramyavAda kAlA cakrava nAne naDesuvenu
ammarESage BAgyavittava
namara taru kittaralu divijara
hemmegaLa nAnOrvanE biDisideno kEL manuja || 21 ||
nODu rAmana sEvegamararu
kODagada tanuvAMtu girigaLa
kODugalgaLa kittu taleyali hottu manavittu
nADariye jalanidhiya sEtuve
mADi tadbhaTarenisi koLLare
mUDhanAgirabEDa nAnE sakala suraroDeya || 22 ||
manuja mattEMdanujaripu sajjanara
pAlipenenuta vasudEvana maneyalavatarise
dEvarkaLu mahItaLadi
munigaLanu matiyiMda maaDida
rene janArdana durita mardadanenisuvanu
jagadoLage nAnE sakala suraroDeya ||23||
nAne du:Ka rahita nidhAnise
dIna jIvanu duHKa Baritanu
nIne nODu dhanAdihAniyiM aLuva jIvaranu
EnaneMbenu rOgarujinadi
mAnavage barutippa nOvanu
svAnuBava siddhavanu kaddu nuDivare ballavaru || 24 ||
nAnu nannaya SaktiyiMdali
dAnavara mardisuve jIvani-
gAnu Saktiya koTTaruMTilladoDe jaDakesama
kANu kuMTara kANu kuruDara kANu
kivuDara kANu kANara kANu tanage
SaktiyiddaradEke biDisikoLa || 25 ||
nAnu sadguNa pUrNa vaMdyanu
hInaguNadiM jIvaniMdyanu
nAnu lakShmI ramaNa jIvanu Satadaridranelai
nAnu suramuni sEvya caraNanu
kANu jIvanu khaLara sharaNanu
nAnu sAvilladava jIvana mRutyu koluvudelai || 26 ||
nAnu suj~janu jIvanaj~janu
nAnu muktanu jIva baddhanu
nAnu pAtaka rahita jIvanu pApa Baritanelai
nAnu janma vidUra nAnA
yOniyali janisutiha jIvanu
mANu Calavanu nanna janakana hesara hELalli || 27 ||
dEvakiya basuralli nAne
dEva kAryake baMda bageyanu
BAvakOvidarella noDiri mUlarUpavane
jIvarige tOriside mRutyuva
kAva vaikuMThadali iddu
SrIvatsavanu nODu poTTeya biTTu porevaMTe || 28 ||
hiMde jagavanu nanna basirali
naMdagOpana rANi kANaLe
caMdadennaya viSvarUpava pArtha kANanelA
maMdamatiye nidhAnisuttire
aMdadennaya dEhavaLidare
baMdudela sacarAcaraMgaLigaMde nirbaMdha || 29 ||
maMda matiye SrInRusiMhage
taMdedAvanu tAyi dAvaLu
maMdarava dharisuvare baMda kUrma pitanAru
hiMde brahmana praLaya jaladhiyo-
LoMde vaTa patradali malagida
chaMdadali shrIramaNa nAnityaroLu nityanelai || 30 ||
iMtanaMta viruddha dharmada
tiMtiNiya nAMtavarigaikyavideMtu
saMtata bhrAMta jIva prakASa tamavahude
saMtariMda niraMtaradi vE-
dAMta SravaNava mADutiru du-
rBrAMti goLagAgadiru nannaya guNava nenevutiru || 31 ||
kuMBadaBro pAdhiyiddaru
DaMbha suttalu suLiva dEhada
aMbuvaDedare vyApta cittige yAtre salladelai
aMbarAgrada svargavEri nI-
nuMbe suKagaLaneMtu mAnava
kuMBi pAkakkiLidu yAtaneyeMtu kaigoMbe || 32 ||
elli pOpudo dEha tA ma-
ttalli nelesiha citta jIvavi
dallavallavalakShaNadi tA mRutyugaLu bahudAgi
illa jaDadEhake naDate ta-
nalli tuMbida citti naDeyade
sallade nirdharma bommake SaktiyeMba guNa || 33 ||
mAya shaktiyidAyiteMbudu
mAye tA jaDavAdakAraNa
pOyitAva upAyadali matavA nilisuvi nI
tAya poTTeya pokkareyu nuDi
vAyatavanaritavaru ninnaya bAya
tereyalu biDaru nidhAnise vAyumata sumata || 34 ||
oMdu cittiMdudayisitu ma-
toMdu cittu sthAnavillade
baMdu BOjana japatapa dhyAnagaLa mADitelai
niMdya dEhO pAdiyiM saM
baMdhisalu bEre bEre eMdu
maMdAkRutata vyartha pOMditu akRuta baMdhudelai || 35 ||
oMdu dEhadaloMdu citsaM-
baMdhavillade dESa dESava
poMdikoMDiha cittiniMdale jIvaneMbavage
maMda maraNadavAya veMbudu
baMdu hOyitu I viyOgavi
doMdu dEhake bahadu cittu vyAptiveMbavage || 36 ||
jIva BEdha vanAdiyeMbava-
dAva bageyali bomma tAnE
jIva BAvava naiditeMba ninna mOhakava
tIvi naDesida bommadaMgake
nOva koDuva iMdriyaMgaLa
jIvarASiya tegevadeMtuMTo nirvikAravalai || 37 ||
iMtu durmata jIrNa kaMte-vi
taMtuvAytu mahaMtaridirali
niMta hejjeya noori nillade BrAMtigolisitelai
haMtanivaneMtAvanai vE-
dAMta pusiyadu tanna pathava sa-
BAMtaradalivaneMtu bageyali niMtu nilisuvanu || 38 ||
mukti eMbudu martyarige na-
nnarthiya sthAnagaLa Baktiya
SaktiyiMdali hatti mRutyuvanotti tannapada
hattile suKisuvudu BRutyari-
gitta BEdavanitta martyanu
vyartha pogaLisuvareyu nAnu pramattanallanalai || 39 ||
marthya mRutyurvyALa BIteM-
buktiyarthava nODu mattada
prAptiyE kaivalya gaDa mRutyuvige SatRu gaDa
matte maruLAgadiru nA sa-
rvOttamanu BRugu meTTidare en-
nuttamatvada rakShegAgiye tALikoMDenelai || 40 ||
ellavilleMbavage nuDivuda-
killa nAlige kELe karNaga-
Lilla pELvAcAryarilla vivEkavillavala
kalla kaMBava pOlva ninnanu
ballidaru ballavaroLaprati
mallarennALugaLu sOlisijaLLu mADuvarai || 41 ||
IgaluMTinnoMdu kAladi
pOguvudu jagaveMba nuDi nina-
gAgadalai traikAlika prathiShedhaveMbavage
Agamava nI nariye eMdA
bIgavanu bAygikki ninnanu
pOgenuta poregaTTuvarelai nanna kiMkararu || 42 ||
iShTa daivavenutta nI mana-
muTTi nannane Bajisu divijara
SiShTa janarige gurugaLeMdavaraMGrigaBinamisu
naShTabArada vOlu ninnanu
GaTTiyAgiye rakShisuve nA
dRuShTigOcaranahenu muktiya koTTusalahuvenu || 43 ||
enna guNagaNagaLane pogaLuva
pUrNapraj~jara matave sumata pra-
sanna karNAmRuta samAna vimukti pathake patha
anya matagaLa jaridu nI saM
puNya marutana matava manadali
mannisuta mananavanu mADdare ninna salahuvenu || 44 ||
vAdirajage dEvakalisida
mAdhavana guNa mAleyanu bare-
dOdipaThisuva mAnavarige vimukti pathavahudu
vAdaSaktiyanittu tannaya
pAdapadmada nEhavIva ma-
hAdayAMbudhi hayavadana kRupeyiMda salahuvenu || 45 ||
iMtu svapnAvastheyali mA-
kAMta karuNAvaMta nijarige shAMtanatibala-
vaMta sarva mahaMta mahimAMta
SAMta SrIguruvAdirAjage
iMtu pELida padagaLenalida
naMtaraMgadaloreda sirihayavadana kRupeyAMtu || 46 ||
| SrI kRuShNArpaNamastu |
Leave a Reply