Shatrubhaya parihariso Bhutaraja

Composer: Shri Tande varadagopala vittala

By Smt.Shubhalakshmi Rao

ಶತ್ರುಭಯ ಪರಿಹರಿಸೊ ಭೂತರಾಜ [ಪ]
ಭವಕೆ ಭೀಕರ ಭಾವಿ ಭೀಮನ
ಭಜಿಪ ಭೋಜಾ ಸುತೇಜಾ [ಅ.ಪ.]

ಒಂದು ಅರಿಯದೆ ಇಂದು ನೀನೆ ನಾನೆಂದು
ಕಮರಿ ಕೂಪದಿ ನೊಂದೆನೊ
ಭಾವಿ ನಂದಿವಾಹನ ಮಂಗಳ
ಪ್ರದ ನೀಲಕಂಠಾ [೧]

ಇಲ್ಲೆಲ್ಲಿ ಸರ್ವಸ್ಥಳದಲ್ಲಿ ವ್ಯಾಪ್ತವಾಗಿಹ
ನಿನ್ನ ಲೋಲ ಮೂರುತಿಯ ನೆನೆವೆ
ಫಾಲನಯನಾ ಪಾಲಿಗೇ ಪಾಲನೆಂತೆಂದು
ಕಾಲಮೀರದೆ ಚಲಿಸದೆಲೆ ಬಾರೊ ಗರಳಧಾರಿ [೨]

ಶ್ರೀಕೃಷ್ಣದಾಸನೆ ನಿನ್ನ ಇಷ್ಟನೆಂತೆಂದು
ಮನಮುಟ್ಟಿ ಭಜಿಸುವೆನೊ ಚಾರುದೇಷ್ಣೆ ಪಾಲಾ
ದಿಟ್ಟ ಗುರು ಕೃಷ್ಣ ವಂದಿತ
ತಂದೆ-ವರದಗೋಪಾಲವಿಠ್ಠಲನ ಸಹಜ ಬಂದು [೩]


SatruBaya parihariso BUtarAja [pa]
Bavake BIkara BAvi BImana
Bajipa BOjA sutEjA [a.pa.]

oMdu ariyade iMdu nIne nAneMdu
kamari kUpadi noMdeno
BAvi naMdivAhana maMgaLa
prada nIlakaMThA [1]

illelli sarvasthaLadalli vyAptavAgiha
ninna lOla mUrutiya neneve
PAlanayanA pAligE pAlaneMteMdu
kAlamIrade calisadele bAro garaLadhAri [2]

SrIkRuShNadAsane ninna iShTaneMteMdu
manamuTTi Bajisuveno cArudEShNe pAlA
diTTa guru kRuShNa vaMdita
taMde-varadagOpAlaviThThalana sahaja baMdu [3]

Leave a Reply

Your email address will not be published. Required fields are marked *

You might also like

error: Content is protected !!