Composer : Shri Vyasarajaru
ಬಲ್ಲವಗಿಲ್ಲಿದೆ ವೈಕುಂಠ [ಪ.]
ಬಲ್ಲವಗೆಲ್ಲೂ ಶ್ರೀಹರಿ ಪೂಜೆ [ಅ.ಪ]
ಶರೀರ ಹರಿಯ ಪಟ್ಟಣ ಹೃದಯ
ಸರೋಜವಾತನ ಅರಮನೆ
ಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿ
ದ್ವಾರಪಾಲಕರಾಗಿ ಇಪ್ಪರೆಂದು [೧]
ನಡೆ ಸರ್ವದಾ ಶ್ರೀಹರಿಯ ಯತ್ರೆ ನುಡಿ
ಸರ್ವ ಶಬ್ಧಾರ್ಥ ಹರಿಯ ನಾಮ ಬಿಡದೆ
ಶ್ರೀಹರಿಗೆರಗುವ ಚೇತನ ಜಡಗಳೆಲ್ಲ
ಶ್ರೀಹರಿಯ ಪ್ರತಿಮೆಯೆಂದು [೨]
ನಾರಾಯಣ ಅನಿರುದ್ಧ ರೂಪಗಳಿಂದ
ಶ್ರೀರಮಣನೆ ಭೋಜ್ಯ ಗಳಲ್ಲಿಪ್ಪ
ಸಾರ ಅಂಶವನು ಪ್ರದ್ಯುಮ್ನ ಸಂಕರುಷಣ
ಮೂರುತಿಯಿಂದ ಭುಂಜಿಪನೆಂದು [೩]
ಹರಿ ಚರಾಚರ ಸರ್ವ ಜಗದ್ ಭರಿತ
ಮುರಹರನಿತ್ತುದೆ ವೈಕುಂಠ
ನರಹರಿಯಲಿ ನವವಿಧ ಭಕುತಿಗೆ
ಸರಿ ಸಮವೆಂದಿಗಿಲ್ಲವೆಂದು [೪]
ಜಾಗರಾದಿಗಳಲ್ಲಿ ವಿಶ್ವಾದಿ ಮೂರುತಿ
ಯೋಗಿ ಶ್ರೀಕೃಷ್ಣನೆ ವಿಷಯಂಗಳ
ಭೋಗಿಪನೆಂಬ ಯೋಗಿಗೆ ವಿಹಿತ
ಭೋಗಂಗಳೆಲ್ಲ ಯಾಗಂಗಳೆಂದು [೫]
ballavagillide vaikuMTha [pa.]
ballavagellU SrIhari pUje [a.pa]
SarIra hariya paTTaNa hRudaya
sarOjavAtana aramane
sUryAdi dEvaru cakShurAdigaLalli
dvArapAlakarAgi ippareMdu [1]
naDe sarvadA SrIhariya yatre nuDi
sarva SabdhArtha hariya nAma biDade
SrIharigeraguva cEtana jaDagaLella
SrIhariya pratimeyeMdu [2]
nArAyaNa aniruddha rUpagaLiMda
SrIramaNane BOjya gaLallippa
sAra aMSavanu pradyumna saMkaruShaNa
mUrutiyiMda BuMjipaneMdu [3]
hari carAcara sarva jagad Barita
muraharanittude vaikuMTha
narahariyali navavidha Bakutige
sari samaveMdigillaveMdu [4]
jAgarAdigaLalli viSvAdi mUruti
yOgi SrIkRuShNane viShayaMgaLa
BOgipaneMba yOgige vihita
BOgaMgaLella yAgaMgaLeMdu [5]
Leave a Reply