Kattida mangala sutrava

Composer : Shri Prasannavenkata dasaru

By Smt.Shubhalakshmi Rao

ಕಟ್ಟಿದ ಮಂಗಳಸೂತ್ರವ ದೇವ || ಪ ||

ಗಟ್ಟಿ ಗಂಟು ಹಾಕಿದ ಚಿತ್ರವು
ಪರಮೇಷ್ಟಿ ರುದ್ರಾದ್ಯರ ಸ್ತೋತ್ರವು ಮತ್ತೆ
ಶಿಷ್ಟ ಜನರ ದಿವ್ಯ ಗಾನವು ತಾನು
ಅಷ್ಟು ಕೇಳುತ ಸಂತುಷ್ಟ ಮನಸಿನಿಂದ
ಬೆಟ್ಟದೊಡೆಯ ಜಗಜಟ್ಟಿ ವೇಂಕಟ ರಮಣ || ೧ ||

ತುಂಬುರು ನಾರದರ ಗಾನವು,
ದಿವ್ಯ ರಂಭೆ ಊರ್ವಶೀಯರ ನಾಟ್ಯವು
ಅಲ್ಲಿ ತುಂಬಿದ ಸುರಮುನಿ ಕೂಟವು
ಮಹಾಸಂಭ್ರಮ ಸಭೆಯಲ್ಲಿ ಕಂಬು ಕಂಧರನಿಗೆ
ಅಂಬರ ವಾಣಿಯು ಜಯ ಜಯ ಜಯವೆನೆ ||೨||

ಕ್ಷೋಣಿಯ ರಾಜಾದಿ ರಾಜರು ತಾವು
ಮಾಣಿಕ್ಯ ಮುತ್ತು ರತ್ನರಾಶಿಯ ಪಾದ
ಕಾಣಿಕೆ ಕಪ್ಪ ತಂದೀವರು ಸಿರಿ
ವೇಣು ವಿನೋದನು ಜಾಣೆ ಪದ್ಮಾವತಿಯ
ಪಾಣಿಗ್ರಹಣ ಕೊಂಡು ಎಣಾಙ್ಕ ಕುಲ ತಿಲಕ ||೩||

ಅಷ್ಟ ಲಕುಮೀ ಪತಿ ತೋಷದಿ ತನ್ನ
ಇಷ್ಟ ಸುಜನರ ಮಧ್ಯದಿ
ಮಾವ ಕೊಟ್ಟು ಕನ್ಯಾಮಣಿ ಕಂಠದಿ
ಅಂದು ಅಷ್ಟದಶ ವಾದ್ಯಗಳು
ಘಟ್ಟಿಯಾಗಿ ಮೊರೆಯಲು
ಶಿಷ್ಟ ಪ್ರಸನ್ನ ವೇಂಕಟ ವಿಠ್ಠಲ ರಾಯ ||೪||


kaTTida maMgaLasUtrava dEva || pa ||

gaTTi gaMTu haakida chitravu
paramEShTi rudrAdyara stOtravu matte
shiShTa janara divya gAnavu tAnu
aShTu kELuta saMtuShTa manasiniMda
beTTadoDeya jagajaTTi vEMkaTa ramaNa || 1 ||

tuMburu nAradara gAnavu,
divya raMbhe UrvashIyara nATyavu
alli tuMbida suramuni kUTavu
mahAsaMbhrama sabheyalli kaMbu kaMdharanige
aMbara vaaNiyu jaya jaya jayavene ||2||

kShONiya rAjAdi rAjaru tAvu
mANikya muttu ratnarAshiya pAda
kANike kappa taMdIvaru siri
vENu vinOdanu jANe padmAvatiya
pANigrahaNa koMDu eNA~gka kula tilaka ||3||

aShTa lakumI pati tOShadi tanna
iShTa sujanara madhyadi
mAva koTTu kanyAmaNi kaMThadi
aMdu aShTadasha vAdyagaLu
ghaTTiyAgi moreyalu
shiShTa prasanna vEMkaTa viThThala rAya ||4||

Leave a Reply

Your email address will not be published. Required fields are marked *

You might also like

error: Content is protected !!