Smarisuva janakella

Composer : Shri Purandara dasaru [Karigiri Kshetra – Devarayanadurga]

By Smt.Shubhalakshmi Rao

Rathotsava – Phalguna Pournima

ಸ್ಮರಿಸುವ ಜನಕೆಲ್ಲ ಭವಭಯ
ಪರಿತಾಪಗಳಿಲ್ಲ [ಪ]
ಶರಣಾಗತ ಜನ ವತ್ಸಲನೆನಿಸಿದ
ಕರಿಗಿರಿ ದುರ್ಗದ ನರಹರಿ ನಿನ್ನನು [ಅ.ಪ]

ಪೂರ್ವ ಸುಕೃತದಿಂದ, ಸುಜನಕೆ
ತೋರ್ವೆ ನೀ ಮುದದಿಂದ
ಸಾರ್ವ ಕಾಲದೊಳು ಮಹದಾನಂದದಿ
ದುರ್ವಾಸರು ಪೂಜಿಪ ಮೂರುತಿ ನಿನ್ನ |೧|

ಕಾಶಿ ತೀರ್ಥದಿಂದ ಚಕ್ರ ಪ-
ರಾಶರ ತೀರ್ಥದಿಂದ
ಲೇಸಾದ ಮಾರುತ ಪಾದ ತೀರ್ಥ ನರ-
ಕೇಸರಿ ತೀರ್ಥದಿಂದೊಪ್ಪುವ ನಿನ್ನನು |೨|

ನೀನಿಹ ಕ್ಷೇತ್ರದೊಳು ಸೇರಿಹ
ವಾನರ ಪಕ್ಷಿಗಳು
ಮಾನವಾದಿ ಬಹುಪ್ರಾಣಿ ಸಮೂಹಕೆ
ಏನು ಪುಣ್ಯ ಫಲವಿರುವುದೊ ತಿಳಿಯದು |೩|

ಅತ್ತಿಯ ಮರದಲ್ಲಿ ಕಾಯ್ಗಳು
ಹತ್ತಿರುವಂದದಲಿ
ಮೊತ್ತ ಮೊತ್ತವಾದ ಬ್ರಹ್ಮಾಂಡ ನಿನ್ನೊಳು
ಹತ್ತಿಕೊಂಡಿಪ್ಪು-ದನಂತ ಕೋಟಿಯೆಂದು |೪|

ಅಡವಿಯ ಮೃಗಗಳಿಗೆ ಬಹುಬಗೆ
ಗಿಡ ಲತೆ ಮರಗಳಿಗೆ
ಒಡೆಯ ನೀನಲ್ಲದೆ ಅನ್ನೋದಕಗಳ
ಕೊಡುವರೆ ಮನುಜರು ನೀ ಗತಿ ಸಲಹೆಂದು |೫|

ಕ್ಷುದ್ರ ದೈತ್ಯರ ಗಂಡ ಕರುಣಸ-
ಮುದ್ರ ತಿಮಿರ ಚಂಡ
ರೌದ್ರದಿ ಅಸುರರ ಮರ್ದಿಸಿ ಲೋಕೋ-
ಪದ್ರವ ಬಿಡಿಸಿದ ರುದ್ರಾಂತರ್ಗತ ನಿನ್ನ |೬|

ಭೂತ ಗ್ರಹಾದಿಗಳು ಸೋಕಿದ
ಭೀತಿ ಜ್ವರಾದಿಗಳು
ಚೇತೋಮುಖ ನಿನ್ನ ನೋಡಲು ಇನ್ನಾ
ಪಾತಕವಳಿದು ಯಾತನೆ ಕಳೆವುದು |೭|

ಲಕ್ಷ್ಮೀ ಸಹಿತವಾಗಿ ಭಕ್ತರ
ರಕ್ಷಿಸುವುದಕಾಗಿ
ಲಕ್ಷಣಯುಕ್ತದಿ ಬಂದು ನಿಂದೆ ಶ್ರೀ
ಲಕ್ಷುಮಿ ನರಸಿಂಹ ನಿನ್ನ ಚರಿತ್ರೆಯ |೮|

ಕರಿಗಿರಿ ನರಸಿಂಹ ಭಕ್ತರ
ದುರಿತದಂತಿಸಿಂಹ
ಪರಿಪಾಲಿಸು ನಾ ಮೊರೆಹೊಕ್ಕೆನು ನಿನ್ನ
ಗುರುಪುರಂದರವಿಟ್ಠಲ ನಿನ್ನನು |೯|


smarisuva janakella BavaBaya
paritApagaLilla [pa]
SaraNAgata jana vatsalanenisida
karigiri durgada narahari ninnanu [a.pa]

pUrva sukRutadiMda, sujanake
tOrve nI mudadiMda
sArva kAladoLu mahadAnaMdadi
durvAsaru pUjipa mUruti ninna |1|

kASi tIrthadiMda cakra pa-
rASara tIrthadiMda
lEsAda mAruta pAda tIrtha nara-
kEsari tIrthadiMdoppuva ninnanu |2|

nIniha kShEtradoLu sEriha
vAnara pakShigaLu
mAnavAdi bahuprANi samUhake
Enu puNya Palaviruvudo tiLiyadu |3|

attiya maradalli kAygaLu
hattiruvaMdadali
motta mottavAda brahmAMDa ninnoLu
hattikoMDippu-danaMta kOTiyeMdu |4|

aDaviya mRugagaLige bahubage
giDa late maragaLige
oDeya nInallade annOdakagaLa
koDuvare manujaru nI gati salaheMdu |5|

kShudra daityara gaMDa karuNasa-
mudra timira caMDa
raudradi asurara mardisi lOkO-
padrava biDisida rudrAMtargata ninna |6|

BUta grahAdigaLu sOkida
BIti jvarAdigaLu
cEtOmuKa ninna nODalu innA
pAtakavaLidu yAtane kaLevudu |7|

lakShmI sahitavAgi Baktara
rakShisuvudakAgi
lakShaNayuktadi baMdu niMde SrI
lakShumi narasiMha ninna caritreya |8|

karigiri narasiMha Baktara
duritadaMtisiMha
paripAlisu nA morehokkenu ninna
gurupuraMdaraviTThala ninnanu |9|

Leave a Reply

Your email address will not be published. Required fields are marked *

You might also like

error: Content is protected !!