Sharanembe charanake

Composer : Shri Prasannavenkata dasaru

By Smt.Shubhalakshmi Rao

Aprachalita pada of Ghatikachala Prana devaru – tuned by Smt.Shubhalakshmi Rao

ಶರಣೆಂಬೆ ಚರಣಕೆ ಹನುಮಂತರಾಯಾ [ಪ]
ಪೊರೆಯೋ ಕರುಣದಿ ಮಹಾನುಭಾವಾ [ಅ]

ಪ್ರಾಣ ಅಪಾನಾದಿ ಪಂಚನಿಧಾನಾ |
ಅಣುಅಣು ಜೀವದಿ ನಿಂತು ನೀ ದಿನದಿನಾ ||
ಅಣುಮಹಾಜ್ಜಗ-ಅಂತರವ್ಯಾಪ್ತನ |
ಗುಣ ಕ್ರೀಯೆಗಳರುಹಿದ ಪವಮಾನಾ [೧]

ಮುಕುತಿ ಯೋಗ್ಯರಿಗೆ ಸಕಲ ಶಾಸ್ತ್ರಗತ |
ಮುಕುತೀಶನ ಪುರ ದಾರಿಯ ತೋರುತ ||
ಭಕುತಿ ತತ್ವಮತ ವೈರಾಗ್ಯ ಜ್ಞಾನವನಿತ್ತ |
ಶ್ರೀಕಾಂತನೆ ಜಗಕಾಧಾರೆಂದ ಮಹಾಂತನೆ [೨]

ವಾರುಣಿ ತಟ ಘಟಿಕಾಚಲ ನಿಲಯನೆ |
ವಾರುಧಿ ದಾಟಿದ ವಟು ಸಂಕರನೆ ||
ಮಾರನಪಿತ ಪ್ರಸನ್ವೆಂಕಟರೇಯನೆ |
ಸರುವರೊಳಧಿಕ-ವೆಂತರುಹಿದ ಧೀರನೆ [೩]


SaraNeMbe caraNake hanumaMtarAyA [pa]
poreyO karuNadi mahAnuBAvA [a]

prANa apAnAdi paMcanidhAnA |
aNuaNu jIvadi niMtu nI dinadinA ||
aNumahAjjaga-aMtaravyAptana |
guNa krIyegaLaruhida pavamAnA [1]

mukuti yOgyarige sakala SAstragata |
mukutISana pura dAriya tOruta ||
Bakuti tatvamata vairAgya j~jAnavanitta |
SrIkAMtane jagakAdhAreMda mahAMtane [2]

vAruNi taTa GaTikAcala nilayane |
vArudhi dATida vaTu saMkarane ||
mAranapita prasanveMkaTarEyane |
saruvaroLadhika-veMtaruhida dhIrane [3]

Leave a Reply

Your email address will not be published. Required fields are marked *

You might also like

error: Content is protected !!