Composer : Shri Gopaladasaru’s 3 brothers – Gurugopala vittala, Varadagopala vittala, & Tande gopalavittala
Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur
ಶ್ರೀ ಸತ್ಯಬೋಧರ ಬಗ್ಗೆ ಗೋಪಾಲದಾಸರ ಮೂರು ಸಹೊದರರು ಸೇರಿ – ಗುರುಗೋಪಾಲದಾಸರು (ಸೀನಪ್ಪ), ವರದ ಗೋಪಾಲದಾಸರು (ದಾಸಪ್ಪ), ಮತ್ತು ತಂದೆ ಗೋಪಾಲದಾಸರು (ರಂಗಪ್ಪ) – ಮೂವರೂ ಪ್ರತ್ಯೇಕ ಪ್ರತ್ಯೇಕ ನುಡಿಗಳನ್ನು ರಚಿಸಿ ಒಂದೇ ಕೃತಿಯಾಗಿ ರಚಿಸಿದರು – ಆ ದೇವರನಾಮವೇ – “ಮಾರಮದಘನ್ನಸಮ್ಮೀರ ಮಧ್ವಮತೋ”
ಮಾರಮದಘನ ಸಮೀರ ಮಧ್ವಮತೋ-
ದ್ಧಾರ ಶುಭ ಗುಣ ಸಾಗರ ಧೀರ | ಪ |
ಗುರು ಸತ್ಯಬೋಧಾರ್ಯ ಹರಿಕರುಣದಲಿ
ವೈರವರ್ಗವ ಗೆಲಿದು ಧಾರುಣಿಯೊಳು ಮೆರೆದೆ | ಅ.ಪ |
ಮುನಿ ನಿಮ್ಮ ಮಹಿಮೆಯನು
ತಿಳಿಯದಲೆ ದಂಡೆತ್ತಿ
ಮನಸಿಜನು ಬರಲು ಕೇಳಿ ತಾಳಿ
ಘನಮಹಿಮ ಸತ್ಯಪ್ರಿಯ ಗುರು ಕರುಣ ದೃಡ ಕವಚ-
ವನು ಧರಿಸಿ ಧೀರರಾಗಿ ಸಾಗಿ |
ಮನೋಜಯ ಅಷ್ಟಾಂಗ ಯೋಗ
ಸಾಧನಗಳಲ್ಲಿ ಮಣಿಯದಲೆ ಮಾರ ಮಲೆತು ಕಲೆತು
ಪ್ರಣವಾದಿ ಮಂತ್ರ ಪ್ರತಿಪಾದ್ಯ ಮೂರ್ತಿಗಳ ಚ-
ಮ್ಮೊನೆ ಮಾಡಿ ಅರಿಪೃಥುನ ಹಣಿದು ಓಡಿಸಿದಸಮ | ೧ |
ಕುಸುಮಾಸ್ತ್ರಾನಂಗನಾಗಲು
ಉಡುಸಹಿತ ಹಿಮನೆಸಗಿ ನಭಕೇರಿ ನಿಂದ ಮಂದ
ಶ್ವಸನ ಮೆಲ್ಲನೆ ಜರಿದಾವನಕೆ ಪೋದ ವಸಂತ
ಝಷಮಕರ ಜಲದೊಳಡಗೆ ನಡುಗೆ
ಎಸೆವ ಶುಕ ಪಿಕ ಸಮೂಹಗಳು ಭಯಪಟ್ಟು ಬಲು
ದಶದಿಶೆಗೆ ಓಡಿಪೋಗಿ ಕೂಗೇ
ಪೊಸಮಲ್ಲಿಕಾದಿ ಕುಟ್ಮಗಳಂಜಿ ಬಾಯ್ಬಿಡಲು
ಯಶೋನಿಧಿಯೆ ತವಕೀರ್ತಿ ಪಸರಿಸಿತು ಭುವನದಲಿ | ೨ |
ಮಾರನಪಜಯ ಕಂಡು ಕ್ರೋಧಾದಿ ವರ್ಗಗಳು
ದೂರದಲೆ ನಿಂತು ನಮಿಸೀ ಗಮಿಸೆ
ಧೀರ ನಿಮ್ಮ ಪಾಂಡಿತ್ಯ ಕಂಡು ತಲೆ ಬಾಗಿ ಫಣಿ
ಧಾರುಣಿಯ ತಳಕ್ಕೆ ನಡೆದ ವಿಬುಧ
ವೀರಕರ್ಣನು ತನ್ನ ಮೀರಿ ತ್ಯಾಗವ ಮಾಡೆ
ಸೇರ್ದ ರವಿ ಮಂಡಲವನೂ ಅವನೂ
ಶ್ರೀ ರಾಮ ವ್ಯಾಸ ಗೋಪಾಲವಿಠ್ಠಲನಂಘ್ರಿ
ಆರಾಧಕರೆ ತಮ್ಮ ಚಾರುಚರಣಕೆ ನಮಿಪೆ | ೩|
mAramadaGana samIra madhvamatO-
ddhAra SuBa guNa sAgara dhIra | pa |
guru satyabOdhArya harikaruNadali
vairavargava gelidu dhAruNiyoLu merede | a.pa |
muni nimma mahimeyanu
tiLiyadale daMDetti
manasijanu baralu kELi tALi
Ganamahima satyapriya guru karuNa dRuDa kavaca-
vanu dharisi dhIrarAgi sAgi |
manOjaya aShTAMga yOga
sAdhanagaLalli maNiyadale mAra maletu kaletu
praNavAdi maMtra pratipAdya mUrtigaLa ca-
mmone mADi aripRuthuna haNidu ODisidasama | 1 |
kusumAstrAnaMganAgalu
uDusahita himanesagi naBakEri niMda maMda
Svasana mellane jaridAvanake pOda vasaMta
JaShamakara jaladoLaDage naDuge
eseva Suka pika samUhagaLu BayapaTTu balu
daSadiSege ODipOgi kUgE
posamallikAdi kuTmagaLaMji bAybiDalu
yaSOnidhiye tavakIrti pasarisitu Buvanadali | 2 |
mAranapajaya kaMDu krOdhAdi vargagaLu
dUradale niMtu namisI gamise
dhIra nimma pAMDitya kaMDu tale bAgi phaNi
dhAruNiya taLakke naDeda vibudha
vIrakarNanu tanna mIri tyAgava mADe
sErda ravi maMDalavanU avanU
SrI rAma vyAsa gOpAlaviThThalanaMGri
ArAdhakare tamma cArucaraNake namipe | 3|
Leave a Reply