Composer : Shri Jagannatha dasaru
ಸುರಪನಾಲಯದಂತೆ ಮಂತ್ರಾಲಯ
ಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ [ಪ]
ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವ
ಭೌಮ ಸುಧೀಂದ್ರಸುತ ಶ್ರೀ ರಾಘವೇಂದ್ರ
ಆಮಯಾಧಿ ಖಳತಮಿಶ್ರ ಓಡಿಸುವ ಚಿಂ
ತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ (೧)
ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯ
ಆಶ್ರಿತರ ಮನೋರಥ ಪೂರೈಸುವಾ
ಧರಣಿಸುರಾಖ್ಯ ಷಟ್ಪದಗಳಿಗೆ ತತ್ಸುಧಾ
ಪರಿಮಳದಿ ತೃಪ್ತಿಬಡಿಸುವ ಮರುತನಂತೆ (೨)
ವಾರಾಹಿ ಎಂಬ ನಂದನ ವನದಿ ಜನರು
ವಿಹಾರ ಮಾಳ್ಪರು ಸ್ನಾನಪಾನದಿಂದಾ
ಘುರು ರಾಘವೇಂದ್ರರಲ್ಲಿಪ್ಪ ಕಾರಣ ಪರಮ
ಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು (೩)
surapanAlayadaMte maMtrAlaya
karesuvudu kaMgoLisuvudu nOLpa janake [pa]
kAmadhEnuvinaMte ippa guruvara sArva
Bauma sudhIMdrasuta SrI rAGavEMdra
AmayAdhi KaLatamiSra ODisuva ciM
tAmaNi prakASadaMtippa vRuMdAvanadi (1)
surataruvinaMtippa kIrti saccAya
ASritara manOratha pUraisuvA
dharaNisurAKya ShaTpadagaLige tatsudhA
parimaLadi tRuptibaDisuva marutanaMte (2)
vArAhi eMba naMdana vanadi janaru
vihAra mALparu snAnapAnadiMdA
Guru rAGavEMdrarallippa kAraNa parama
kAruNya nidhi jagannAtha viThalanihanu (3)
Leave a Reply