Naan yaake chintisali

Composer : Shri Vyasatatvajnaru

By Smt.Shubhalakshmi Rao

ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ
ತಾನಾಗಿ ಶ್ರೀ ರಾಘವೇಂದ್ರಯತಿ ಒಲಿದ [ಪ]

ಪೋರತನದವನು ಎರಡು ತೆರೆಗಳಲಿ
ದೂರಾಗಿ ಮೊರೆಯು ಅಲ್ಲವೆಂದು
ಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿ
ಧೀರ ತಾ ಕರವನ್ನು ಪಿಡಿದ ಬಳಿಕಾ | ೧ |

ಪೂರ್ಣಜಲ ಹರಿವ ವಾಹಿನಿ ಕಂಡು ಬೆದರುವಗೆ
ಕರುಣಧಾರನು ತಾನೆ ಬಂದು ನಿಂದು
ತೂರ್ಣದಲಿ ಕರಪಿಡಿದು ಹರಿಗೋಲ ಒಳಗಿಟ್ಟು
ಘೂರ್ಣಿಸಲು ಅವಗೆ ಚಿಂತೆಯುಂಟೆ | ೨ |

ಏಸು ಜನ್ಮಗಳಲ್ಲಿ ಅರ್ಚಿಸಿದೆನೋ ನಾ ನಿನ್ನ
ವಾಸುದೇವವಿಠ್ಠಲ ಪಾದಪದುಮ
ಲೇಸಾಗಿ ಈ ಸುಕೃತದಿಂದೆನ್ನ ಹರಿದಾಸ
ಈ ಸುಗುಣ ಗುರುರಾಯ ಎನಗೆ ಒಲಿದ | ೩ |


nAnyAke ciMtisali nAnyAke dhEnisali
tAnAgi SrI rAGavEMdrayati olida [pa]

pOratanadavanu eraDu teregaLali
dUrAgi moreyu allaveMdu
kAruNyadiMda tammaya gurutugaLa tOri
dhIra tA karavannu piDida baLikA | 1 |

pUrNajala hariva vAhini kaMDu bedaruvage
karuNadhAranu tAne baMdu niMdu
tUrNadali karapiDidu harigOla oLagiTTu
GUrNisalu avage ciMteyuMTe | 2 |

Esu janmagaLalli arcisidenO nA ninna
vAsudEvaviThThala pAdapaduma
lEsAgi I sukRutadiMdenna haridAsa
I suguNa gururAya enage olida | 3 |

Leave a Reply

Your email address will not be published. Required fields are marked *

You might also like

error: Content is protected !!