Composer : Shri Abhinavajanardana vittala
ಗುರು ರಾಘವೇಂದ್ರ ರಾಯಾ || ಪ ||
ಗುರುರಾಘವೇಂದ್ರ ತ್ವಚ್ಚರಣ ಭಜಿಸುವವರ ಭವ
ಶರಧಿ ದಾಟಿಸಿ ಇಹಪರ ಸೌಖ್ಯ ಕೊಡುವಿ || ಅ ||
ಎಲ್ಲಿ ಕಾಶಿ ಪ್ರಯಾಗ ಎಲ್ಲಿ ಗಯಾ ಸೇತು
ಮತ್ತೆಲ್ಲಿ ವೆಂಕಟಗಿರಿ ಕಂಚಿಯಿಂದಾ
ಎಲ್ಲೆಲ್ಲಿ ದೇಶದವರೆಲ್ಲ ಜನರು ಬಂ
ದಿಲ್ಲೆ ಸೇವಿಸಲು ಫಲ ನಿಲ್ಲದಲೆ ಕೊಡುವಿ || ೧ ||
ಆವಾವ ದೇಶದಲಿ ಆವಾಸ ಮಾಡಿ ವೃಂ
ದಾವನದಿ ಮೆರೆವೆ ಭಕ್ತಾವಳಿಗಳಾ
ಆವಾವ ಯೊಗ್ಯತಿಯು ಆಪರಿ ಇಹ್ಯದು ತಿಳಿ
ದಾವಾ ಗತಿಗಳನು ಕೊಡುವೆ ಸುರ ತರುವೆ || ೨ ||
ದಂಡ ಕಮಂಡಲವ ಕೊಂಡು ಪಂಡಿತರೆಂಬ
ಪುಂಡರೀಕುದಯ ಮಾರ್ತಾಂಡನೆನಿಪ
ಚಂಡ ದುರ್ವಾದಿಮತ ಖಂಡಿಸಿ ಮೆರೆದು ಭೂ
ಮಂಡಲದಿ ರಘುಪತಿಯ ಕಂಡು ಭಜಿಸುವ ನಮ್ಮ || ೩ ||
ಉರ್ಬ್ಬಿಯೊಳು ಬಂದಿಲ್ಲಿ ಸಬ್-ಜನರುಗಳು ಫಲ
ಲಭ್ಯವಿಲ್ಲದೆ ಪೋಪನೊಬ್ಬನಿಲ್ಲಾ
ಹಬ್ಬಿ ಸದ್ಭಕ್ತಿಯಿಂದುಬ್ಬಿ ಸೇವಿಸಲು ಭವ
ದುಬ್ಬಳವ ದಾಟಿಸಿ ಸುಖಾಬ್ಧಿಯೊಳಗಿಡುವಿ || ೪ ||
ವನಿತೆ ಧನ ಮನಿ ತನಯರನು ಬಯಸಿ ಭಜಿಸುವ
ಜನರಿಗಾಕ್ಷಣದಿ ಸತ್ಫಲವೆ ಕೊಡುವಿ
ಘನ ಅಭಿನವಜನಾರ್ಧನವಿಠಲ ಯದುಪತಿಯ
ನೆನೆನೆನೆದುಪಾಸನವ ಮಾಳ್ಪನೆ ನಮ್ಮ || ೫ ||
guru rAGavEMdra rAyA || pa ||
gururAGavEMdra tvaccaraNa Bajisuvavara Bava
Saradhi dATisi ihapara sauKya koDuvi || a ||
elli kASi prayAga elli gayA sEtu
mattelli veMkaTagiri kaMciyiMdA
ellelli dESadavarella janaru baM
dille sEvisalu Pala nilladale koDuvi || 1 ||
AvAva dESadali AvAsa mADi vRuM
dAvanadi mereve BaktAvaLigaLA
AvAva yogyatiyu Apari ihyadu tiLi
dAvA gatigaLanu koDuve sura taruve || 2 ||
daMDa kamaMDalava koMDu paMDitareMba
puMDarIkudaya mArtAMDanenipa
caMDa durvAdimata KaMDisi meredu BU
maMDaladi raGupatiya kaMDu Bajisuva namma || 3 ||
urbbiyoLu baMdilli sab-janarugaLu Pala
laByavillade pOpanobbanillA
habbi sadBaktiyiMdubbi sEvisalu Bava
dubbaLava dATisi suKAbdhiyoLagiDuvi || 4 ||
vanite dhana mani tanayaranu bayasi Bajisuva
janarigAkShaNadi satPalave koDuvi
Gana aBinavajanArdhanaviThala yadupatiya
nenenenedupAsanava mALpane namma || 5 ||
Leave a Reply